ಒಂದೇಟು
- ಮೊಟ್ಟೆ ನಗುತ್ತಿದೆ ಎಂದರೆ ಅದು ಒಡೆದಿದೆ ಎಂದರ್ಥ.
- ಹಣೆಗೆ ಮುತ್ತಿಕ್ಕಲು ಹೆಣ್ಣಿಗೆ ಸಾಧ್ಯವಾಗದೇ ಇದ್ದಾಗ ಹೈಹೀಲ್ಡ್ ಚಪ್ಪಲ್ ಅನ್ವೇಷಣೆಯಾಯಿತು.
- ಗಣಿತ- ಆಲ್ಕೋಹಾಲು ಮಿಕ್ಸಾಗಿಬಿಟ್ಟರೆ ವ್ಯಕ್ತಿ ಸಂಪೂರ್ಣ ಹುಚ್ಚನಾಗುತ್ತಾನೆ.
- ಸಾಮಾನ್ಯವಾಗಿ ಆಫೀಸಿನಲ್ಲಿ ಸುಂದರಿಗಳಿರುವುದಿಲ್ಲ. ಇದ್ದರೂ ರಿಸಪ್ಷನಿಸ್ಟ್ ಆಗಿರುತ್ತಾರೆ.
- ಮನೇಲೇ ಇದ್ರೂ ಹೆಂಡತಿ ಜತೆ ನಾನು 9 ತಿಂಗಳಿಂದ ಮಾತಾಡಿಲ್ಲ. ಈ ಅವಧಿಯಲ್ಲಿ ನನ್ನ ಅಷ್ಟೂ ಸ್ಯಾಲರಿ ಉಳಿದಿದೆ.
- ಗಂಡಸೊಬ್ಬ ಹೆಂಡತಿಗಾಗಿ ಕಾರಿನ ಡೋರ್ ಓಪನ್ ಮಾಡ್ತಿದ್ದಾನೆ ಅಂದ್ರೆ ಬಹುಶಃ ಅದು ಹೊಸ ಕಾರ್ ಆಗಿರುತ್ತೆ, ಇಲ್ಲವೇ ಆತ ಆಗಷ್ಟೇ ಮದುವೆಯಾಗಿರುತ್ತಾನೆ.
- ಮದುವೆಯಾಗಿ ಹತ್ತು ವರ್ಷದ ಬಳಿಕವೂ ದಂಪತಿ ನಗುತ್ತಿದ್ದಾರೆಂದರೆ ಜಗತ್ತಿನ ಅಚ್ಚರಿಗಳಲ್ಲಿ ಅವರೂ ಒಂದಾಗಿರುತ್ತಾರೆ.
- ನಾನು ಹೆಂಡ್ತಿಗೆ ಎಲ್ಲ ಕಡೆ ಕರ್ಕೊಂಡ್ ಹೋಗಿದ್ದೀನಿ. ಆದರೂ, ಅವಳು ಮನೆ ಹುಡುಕಿಕೊಂಡು ವಾಪಸು ಬಂದಿದ್ದಾಳೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.