ಘ್ನಾನ ಪೀಠ
ರವಿಕುಮಾರ್ ಜಿ.ಬಿ. ಬೆಂಗಳೂರು.
ಬಿಗ್ಬಾಸ್ನಲ್ಲಿ ನಿತ್ಯಾನಂದ ಕಾಣಿಸಿಕೊಂಡರೆ ಏನಾಗುತ್ತೆ?
-ಆಗ ಚಂದ್ರಿಕಾಗೆ ಖುಷಿಯಾಗಿ, ರಂಜಿತಾಗೆ
ಬೇಜಾರಾಗಬಹುದು!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
ಜಯದ ಗುರಿಯ ಮುಂದೆ ಬಂಧು ಬಾಂಧವರು ಗೌಣವೇ?
-ಜಯ ಬಂದಾಗ ಹಿಂದೆ ಅವರೆಲ್ಲ ಇದ್ದೇ ಇರ್ತಾರಲ್ಲ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಶಾಲೆಗಳಂತೆ ಸರ್ಕಾರಿ ಹೋಟೆಲ್ಗಳೇಕಿರುವುದಿಲ್ಲ ಸಾರ್?
-ಎಲ್ಲಾ ಗಲೀಜೂ ಒಂದೇ ಕಡೆ ಇರಬಾರದೂಂತ!
ಲಕ್ಷ್ಮೀ ಬರ್ಕ್ಲಿ ರಮೇಶ, ಮಂಡ್ಯ.
ಚುನಾವಣೆಗೆ ನಿಲ್ಲಬೇಕೆಂದಿದ್ದೇನೆ, ತಮ್ಮ
ಅಭಿಪ್ರಾಯವೇನು?
-ಮೊದಲು ಅಂಬರೀಷ್ರ ಒಪ್ಪಿಗೆ ಪಡೆಯಿರಿ!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಡ್ಡಿಗೆ 40 ವರ್ಷ ಬೇಕಾಯ್ತು. ಇನ್ನು ಕೆಜೆಪಿಯನ್ನು ಅಧಿಕಾರಕ್ಕೆ ತರಲು ಎಷ್ಟು ವರ್ಷ ಬೇಕು?
-ವರ್ಷ ಯಾಕೆ ನಾಡಿದ್ದು ಮೇ 8ಕ್ಕೆ ನೋಡಿ!
ಪಿ.ಜೆ. ರಾಘವೇಂದ್ರ, ಮೈಸೂರು.
ಜಯಲಕ್ಷ್ಮಿ ಸಿಎಂ ಆದರೆ, ರೇಣುಕಾಚಾರ್ಯ?
-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಎಲ್ಲಾ ದೇವರುಗಳು ನಿಂತಿದ್ದರೆ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಮಲಗಿರುವ ಗುಟ್ಟೇನು?
-ವರ ಕೊಡಲಿಕ್ಕೆ ತಲೆ ಮತ್ತು ಕೈ ನೇರವಾಗಿದ್ರೆ ಸಾಕು ಅಂತ ಇರಬಹುದು!
ಉಜ್ಜನಿ ಜಲೇಂದ್ರ, ಚನ್ನಪಟ್ಟಣ.
ಮತದಾನಕ್ಕೆ ಮದ್ಯಪಾನ ನಂಟು ಶುರುವಾಗಿದ್ದು ಯಾವಾಗ?
-ಯಾರಿಗೆ ಮತ ಹಾಕಬೇಕು ಅಂತ ತಲೆ ಕೆಡಿಸ್ಕೊಂಡಾಗ!
ಸ್ವಾಮಿ ನಿರ್ಮಲಾ, ಉಡಿಗಾಲ.
-ಮದುವೆಯಾದರೆ ಜಗತ್ತಿನ ಸಂತೋಷವೆಲ್ಲ ಸಿಗುತ್ತದಂತೆ ನಂಬಬಹುದೇ ಸಾರ್:
-ಅದರ ಜೊತೆ ದುಃಖ ಫ್ರೀ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.