ದೇವರು ಕೊಟ್ಟ ಮೊಬೈಲು!
ಕೋಲ್ಯ ಟ್ರೈನ್ನಲ್ಲಿ ಪಯಣಿಸುತ್ತಿದ್ದ. ಮಧ್ಯದಲ್ಲಿ ಅವನಿಗೆ ಟಾಯ್ಲೆಟ್ಗೆ ಅವಸರವಾಯ್ತು. ತೀರಾ ಗಡಿಬಿಡಿಯಲ್ಲೇ ಟಾಯ್ಲೆಟ್ ರೂಮೊಳಗೆ ನುಗ್ಗಿದ. ಇನ್ನೇನು ಪ್ಯಾಂಟು ಕಳಚಿ ಕೂರಬೇಕೆನ್ನುವಷ್ಟರಲ್ಲೇ
ಜೇಬಿನಿಂದ ಮೊಬೈಲ್ ಕೆಳಗೆ ಬಿದ್ದು ಟಾಯ್ಲೆಟ್ನ ಗುಂಡಿಯೊಳಗೆ ಸೇರಿಕೊಳ್ತು. ಕೋಲ್ಯನಿಗೆ ವಿಪರೀತ ಟೆನ್ಷನ್ ಶುರುವಾಯ್ತು. ಅವನಿಗೆ ಅರಿವಿಲ್ಲದಂತೆ 'ಅಯ್ಯೋ ದೇವ್ರೆ!' ಎಂದು ಹೇಳಿಬಿಟ್ಟ.
ಕೂಡಲೇ ದೇವರು ಪ್ರತ್ಯಕ್ಷನಾಗಿ ಚಿನ್ನದ ಬಣ್ಣದ ಮೊಬೈಲನ್ನು ಕೋಲ್ಯನ ಕೈಗಿಟ್ಟ. 'ಓಹ್! ದೇವರೆಷ್ಟು ಕರುಣಾಮಯಿ' ಎಂದುಕೊಂಡ ಕೋಲ್ಯ, ಆ ಮೊಬೈಲನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ. ತಕ್ಷಣ ಅವನಿಗೆ ಸಿಟ್ಟೂ ಬಂತು.
ಕೋಲ್ಯ: ಇದು ನಿಜವಾದ ಬಂಗಾರ ಅಲ್ಲವೇ ಅಲ್ಲ.
ದೇವರು: ಹೌದು, ಖಂಡಿತಾ ಅಲ್ಲ. ಮೊದ್ಲು ಆ ಮೊಬೈಲನ್ನು ತೊಳ್ಕೋ!
----
ವಿದೇಶಿಗ: ಭಾರತದಲ್ಲಿ ಜಾಸ್ತಿ ಐಸ್ ಬೀಳೋದು ಎಲ್ಲಿ?
ಕೋಲ್ಯ: ಬೆಳಗ್ಗೆ 10 ಗಂಟೆಯೊಳಗೆ ಕಾಶ್ಮೀರದಲ್ಲಿ. ರಾತ್ರಿ 7ರ ಮೇಲೆ ವಿಸ್ಕಿ ಕಪ್ನಲ್ಲಿ.
ಹೆಂಡ್ತಿ: ಇವತ್ತು ನನ್ನ ದುಬಾರಿ ಸ್ಥಳಕ್ಕೆ ಕರ್ಕೊಂಡ್ ಹೋಗ್ತೀರಾ?
ಕೋಲ್ಯ: ಓಹ್, ಅದಕ್ಕೇನಂತೆ... ರೆಡಿಯಾಗು ಬೇಗ, ಹೋಗೋಣ ಪೆಟ್ರೋಲ್ ಬಂಕ್ಗೆ.
ಕೋಲ್ಯ: ಮರಗಳನ್ನೇಕೆ ರಸ್ತೆಯ ಎರಡೂ ಬದಿಗಳಲ್ಲಿ ನೆಡ್ತಾರೆ?
ಫಂಟಾ: ಪರಿಸರ ಸಂರಕ್ಷಿಸಲು.
ಕೋಲ್ಯ: ಮೂರ್ಖ, ಉತ್ತರ ಅದಲ್ಲ. ಮರಗಳನ್ನು ರಸ್ತೆ ಮಧ್ಯ ನೆಟ್ಟರೆ ವಾಹನ ಹೋಗಲು ಕಷ್ಟ ಆಗುತ್ತಂತ ಸೈಡಲ್ಲಿ ನೆಡ್ತಾರೆ.
ಇಮ್ರಾನ್ಹಶ್ಮಿ ಒಂದು ಕಾಸ್ಮೆಟಿಕ್ಸ್ ಶಾಪ್ಗೆ ಹೋದ.
ಇಮ್ರಾನ್: ಒಂದು ಚೆನ್ನಾಗಿರೋ ಲಿಪ್ಸ್ಟಿಕ್ ಕೊಡಿ.
ಅಂಗಡಿಯವ: ಯಾವ ಕಲರ್ ಕೊಡ್ಲಿ ಸರ್?
ಇಮ್ರಾನ್: ಕಲರ್ ಮನೆ ಹಾಳಾಗ್ಲಿ, ಲಿಪ್ಸ್ಟಿಕ್ ಟೇಸ್ಟಿದ್ದಿದ್ದು ಕೊಡಷ್ಟೇ.
ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಹುಡುಗಿಯೊಬ್ಬಳು ಚಿತ್ರಪ್ರದರ್ಶನ ನೋಡಲು ಬಂದಳು.
ಹುಡುಗಿ: ಸರ್, ಇದು ಮಾಡರ್ನ್ ಆರ್ಟಾ? ತುಂಬಾ ಭಯಾನಕವಾಗಿದೆ.
ಕಲಾವಿದ: ಮೇಡಂ, ಇದು ಆರ್ಟ್ ಅಲ್ಲ, ಕನ್ನಡಿ!
ಲೇಡಿಸ್ ಬಸ್ಸೊಂದು ಮರಕ್ಕೆ ಢಿಕ್ಕಿಯಾಯ್ತು. ಬಸ್ಸೊಳಗಿದ್ದ 26 ಹೆಂಗಸರೂ ಪ್ರಾಣ ಕಳ್ಕೊಂಡ್ರು. ಸುದ್ದಿ ತಿಳಿದ ಎಲ್ಲ ಗಂಡಂದಿರೂ ಸಾಲು ಸಾಲು ಹೆಣಗಳನ್ನು ನೋಡಿ ಅಳಲು ಶುರುಮಾಡಿದ್ದರು. ಆ ಅಳು ಅರ್ಧ ಗಂಟೆಯಲ್ಲೇ ನಿಂತಿತು. ಆದರೆ, ಕೋಲ್ಯ ಮಾತ್ರ ಇನ್ನೂ ಅಳುತ್ತಲೇ ಇದ್ದ.
ಪೊಲೀಸ್: ಸಮಾಧಾನ ಮಾಡ್ಕೋಳ್ರೀ, ಎಲ್ಲರೂ ಅಳು ನಿಲ್ಸಿದ್ದಾರೆ. ನೀವೊಬ್ರೆ ಅಳ್ತಿದ್ದೀರಿಲ್ಲ?
ಕೋಲ್ಯ: ಅಳದೇ ಇನ್ನೇನ್ ಮಾಡೋದ್ ಸ್ವಾಮಿ... ನನ್ನ ಹೆಂಡ್ತಿಗೆ ಬಸ್ಸೇ ಮಿಸ್ಸಾಗಿದೆ. ಆ ದುಃಖ ಹ್ಯಾಗೆ ತಡ್ಕೊಳ್ಳೋದು..?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.