ನಿಶ್ಶಬ್ದ ಕೋಶ
ಅಡ್ರೆಸ್: ಮನೆ ಧರಿಸಿದ ವಸ್ತ್ರ.
ಮದ್ಯ: 'ತೀರ್ಥ'ರೂಪ.
ಕಿಡ್ನಾಪ್: ಟಿಕೆಟ್ ಇಲ್ಲದೆ ಸಿಗುವ ಪ್ರಯಾಣ ಭಾಗ್ಯ.
ಗೂಟ: ಜಮೀನಿನ ಅಂಚಿನಲ್ಲಿ, ಕ್ರಿಕೆಟ್ ಮೈದಾನದ ಮಧ್ಯದಲ್ಲಿ ಹುಗಿಯುವಂಥದ್ದು.
ಎಫ್‌ಎಂ: ಆ್ಯಂಬುಲೆನ್ಸ್‌ನಲ್ಲಿ ಇದನ್ನು ಆನ್ ಮಾಡುವುದು ತುಂಬಾ ಕಮ್ಮಿ.
ಬೇಡಿ: ಕೈದಿ ಬೇಡ ಎಂದರೂ ಇದು ಕೈಬಿಡದು.
ಪ್ರತಿಫಲನ: ಬೋಳು ತಲೆಯಲ್ಲಿ ಕಂಡ ಟ್ಯೂಬ್‌ಲೈಟಿನ ಬೆಳಕು.
ವಾಚ್‌ಮ್ಯಾನ್: ಕೈಗಡಿಯಾರ ಹೊಂದಿರುವ ವ್ಯಕ್ತಿ.
ಫ್ಯಾನ್: ಶ್ರೀರಾಮಲು ಅವರ ಪಕ್ಷದ ಚಿಹ್ನೆ.
ಮೇಕಪ್: ನೈಜ ಸೌಂದರ್ಯವನ್ನು ಮುಚ್ಚಿದ ಬಣ್ಣದ ಹೊದಿಕೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.