ಅಮೃತ
ಕಣ್ಣುಗಳು ಮಿನುಗುವ ನಕ್ಷತ್ರ ತಾರೆ
ನಿನ್ನ ಮಾತುಗಳೆಮಗೆ ಅಮೃತ ಧಾರೆ
ನೀ ನಕ್ಕರೆ ಸುರಿವುದು ಜೇನು
ನಮ್ಮ ಬಾಳಿಗೆ ಅಮೃತವು ನೀನು
ನಿನ್ನಾಟಗಳು ಹಿರಿಯರ ಬಾಳಿಗೆ ಜ್ಯೋತಿ
ನೀನಾಗಿಹೆ ನಮ್ಮೆಲ್ಲರ ಪ್ರೀತಿ
ನೀನಾಡುವುದ್ಯಾವಾಗಲೂ ಮಣ್ಣು
ಬೈದರೆ ಪಿಳಿಪಿಳಿಸುವೆ ನೀ ಕಣ್ಣು
ನಿನಗಿಲ್ಲ ಹಸಿವು ನಿದ್ರೆಗಳ ಅರಿವು
ನೀ ಮರೆಸುವೆ ನಮ್ಮೆಲ್ಲರ ನೋವು
ನಿನ್ನಾಟ ಪಾಠಗಳ ರೀತಿ-ನೀತಿ
ನನ್ನ ಕವನಕೆ ಸ್ಫೂರ್ತಿ
ನಿನಗಿಲ್ಲ ಕೋಪ ತಾಪ ಕಿಚ್ಚು
'ಅಮೃತ' ನೀ ನಮಗಚ್ಚುಮೆಚ್ಚು
- ವಾಣಿ ಹೆಗಡೆ, ಶಿರಸಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.