ಒಂದೇಟು
- ಎಲ್ಲ ಧಾರ್ಮಿಕ ಗ್ರಂಥಗಳು ಕೇವಲ ಉಪದೇಶ ಕೊಡ್ತವೆ, ನಾವೇನ್ ಮಾಡ್ಬೇಕು ಅಂತ ಹೇಳೋದಿಲ್ಲ. ಆದರೆ, ಕಾಮಸೂತ್ರ ಹಾಗಲ್ಲ.
- ಹುಡುಗ ಕಳುಹಿಸಿದ ಪೋಲಿ ಮೆಸೇಜನ್ನು ನೋಡಿ ಹುಡುಗಿ ನಗ್ತಾಳೆ. ಒಂದೈದು ನಿಮಿಷ ಬಿಟ್ಟು ಹೀಗೆ ಮೆಸೇಜು ಮಾಡ್ತಾಳೆ, 'ಪ್ಲೀಸ್, ಇಂಥ ಮೆಸೇಜ್ ಕಳ್ಸೋದು ನಿಲ್ಸು. ನನ್ಗೆ ಇದೆಲ್ಲ ಇಷ್ಟ ಆಗಲ್ಲ'.
- 'ಹಣ ಮತ್ತು ಅಹಂ' ಅಂಡರ್ವೇರ್ ಇದ್ದಂತೆ. ಒಳಗಿದ್ದರೂ ತೋರಿಸಿಕೊಳ್ಬಾರ್ದು.
- ಸೌಂದರ್ಯ ನೋಡಿ ಹುಡುಗಿಯನ್ನು ಮದುವೆ ಆಗೋದಂದ್ರೆ, ಪೇಂಟಿಂಗ್ ನೋಡಿ ಮನೆಯನ್ನು ಖರೀದಿಸಿದ ಹಾಗೆ.
- ನನಗೆ ಹದಿಮೂರು ವರ್ಷ ಆಗುವ ತನಕವೂ ನನ್ನ ಹೆಸರು 'ಶಟ್ಅಪ್' ಅಂತಲೇ ಆಗಿತ್ತು.
- ನಗು ಎಲ್ಲ ರೋಗಕ್ಕೂ ಮದ್ದು ಎಂದಾದರೆ, ಇಡೀ ಜಗತ್ತೇ ಹುಚ್ಚಾಸ್ಪತ್ರೆ ಆಗ್ತಿತ್ತು.
- ರಾಂಗ್ನಂಬರ್ಗಳು ಯಾವತ್ತೂ ಬ್ಯುಸಿ ಬರೋದಿಲ್ಲ.
- ಸಿಗರೇಟ್ ಸೇದೋದ್ರಿಂದ ಯಾಕೆ ವಾಯುಮಾಲಿನ್ಯ ಆಗಲ್ಲ ಅಂದ್ರೆ ಆ ಹೊಗೆಯನ್ನು ಪಕ್ಕದಲ್ಲಿದ್ದವ ಸೇವಿಸ್ತಾನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.