ಕಂಡ್‌ಹಿಡಿ ನೋಡೋಣ...
ಗರ್ಲ್‌ಫ್ರೆಂಡ್: ನಾನು ಕದ್ದು ಕೂರ್ತೀನಿ. ನಾನೆಲ್ಲಿರ್ತೀನಿ ಅಂತ ನೀನು ಕಂಡ್‌ಹಿಡಿದ್ರೆ ಒಟ್ಟಿಗೆ ಶಾಪಿಂಗ್ ಹೋಗೋಣ ಆಯ್ತಾ?
ಕೋಲ್ಯ: ಅಕಸ್ಮಾತ್, ನಿನ್ನ ಕಂಡುಹಿಡಿಯಲು ನನಗೆ ಸಾಧ್ಯವಾಗದೇ ಇದ್ರೆ?
ಗರ್ಲ್‌ಫ್ರೆಂಡ್: ಛೇ, ಹಾಗೆಲ್ಲ ಹೇಳ್ಬೇಡ. ಈ ಬಾಗಿಲಿದ್ಯಲ್ಲ, ಅದರ ಹಿಂಬದಿಯೇ ಇರ್ತೀನಿ.
----
ಕೋಲ್ಯ: ಆಗ್ಲಿಂದ ನೋಡ್ತಿದ್ದೀನಿ, ಯಾಕೆ ಅಳ್ತಿದ್ಯಾ? ಗರ್ಲ್‌ಫ್ರೆಂಡ್: ತುಂಬಾ ಕಡಿಮೆ ಮಾರ್ಕ್ಸ್ ಬಂತು.
ಕೋಲ್ಯ: ತುಂಬಾ ಕಮ್ಮಿ ಅಂದ್ರೆ ಎಷ್ಟು?ಗರ್ಲ್‌ಫ್ರೆಂಡ್: 88.
ಕೋಲ್ಯ: ಅಯ್ಯೋ ನಿನ್ನ... ಇಷ್ಟ್ ಮಾರ್ಕ್ಸಲ್ಲಿ ಇಬ್ರು ಹುಡುಗ್ರು ಪಾಸಾಗ್ತಿದ್ರು ಗೊತ್ತಾ?
---
ಫಂಟಾ: ಇವತ್ತು ರಾತ್ರಿ 8 ಗಂಟೆಗೆ 'ಎನಿಮಲ್ ಪ್ಲಾನೆಟ್' ಚಾನೆಲ್ ನೋಡು. 30 ಅಡಿಯ ಹಾವು ತೋರಿಸ್ತಾರೆ.
ಕೋಲ್ಯ: ಅದ್ಹೇಗೆ ನೋಡ್ಲಿ, ನಮ್ಮನೆ ಟಿವಿ ಇರೋದೇ 21 ಇಂಚು.
ಕೋಲ್ಯ ಚೀನೀ ಮೊಬೈಲ್ ತೆಗೆದ್ಕೊಂಡ. ಅದರಲ್ಲಿನ ವೈಶಿಷ್ಟ್ಯಗಳನ್ನು ಹೇಳಲೇಬೇಕು...
1. ಎಟಿಎಂ ಬಳಿ ಬಂದಾಗ 'ಬ್ಯಾಲೆನ್ಸ್ ಲೋ' ಅಂತ ತೋರಿಸ್ತಿತ್ತು.
2. ಆ ಮೊಬೈಲಲ್ಲಿ ಟಿವಿ, ನೈಲ್‌ಕಟರ್, ಸಿಗರ್ ಲೈಟರ್ ಇತ್ತು.
3. ಮಾತಾಡಿದಾಗಲೂ ಅದು ಟೆಕ್ಸ್ಟ್ ಮೆಸೇಜ್ ಆಗಿ ಕನ್ವರ್ಟ್ ಆಗ್ತಿತ್ತು.
4. ಆದರೂ ಕೆಲವೊಂದು ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ತಿತ್ತು. ಉದಾ: ಃ ್ಟ್ಞಟಛ, ್ಝ- ಠ್ಟ್ಠಟಿ.
5. ಯಾವುದಾದರೂ ಹುಡುಗಿ ಪಕ್ಕದಲ್ಲೇ ಪಾಸಾದ ಕೂಡಲೇ 'ಚಾರ್ಜರ್ ಕನೆಕ್ಟಿಂಗ್' ಅಂತ ತೋರಿಸ್ತಿತ್ತು.
6. ಚೀನಿಯೊಬ್ಬ ಪಕ್ಕದಲ್ಲೇ ಪಾಸಾದ ಕೂಡಲೇ 'ಒನ್ ಬ್ಲೂಟೂಥ್ ಡಿವೈಸ್ ಫೌಂಡ್' ಅಂತ ತೋರಿಸ್ತಿತ್ತು.
7. ಯಾರಾದರೂ ಸ್ಥಳೀಯ ವ್ಯಕ್ತಿ (ಭಾರತೀಯ) ಪಕ್ಕದಲ್ಲೇ ಪಾಸಾದ ಕೂಡಲೇ 'ವೈರಸ್ ಫೌಂಡ್' ಕೂಗಲು ಶುರುಮಾಡ್ತಿತ್ತು.
ಕೋಲ್ಯ: ನನ್ನ ತಲೆಕೂದಲು ಸಿಕ್ಕಾಪಟ್ಟೆ ಉದುರ್ತಾ ಇದೆ.
ಫಂಟಾ: ಯಾಕಾಗಿ?
ಕೋಲ್ಯ: ವಿಪರೀತ ಟೆನ್ಷನ್.
ಫಂಟಾ: ಅಂಥ ಟೆನ್ಷನ್ ಏನಪ್ಪಾ?
ಕೋಲ್ಯ: ಕೂದಲು ಉದುರ್ತಾ ಇರೋದೇ ದೊಡ್ಡ ಟೆನ್ಷನ್ ಆಗಿದೆ.
ಟ
ಕೋಲ್ಯ: ನನ್ನ ಮಗ ಜೀನಿಯಸ್, ದಿನಾ ನ್ಯೂಸ್‌ಪೇಪರ್ ಓದಲು ತರ್ತಾನೆ.
ಫಂಟಾ: ಅದರಲ್ಲೇನು ಜೀನಿಯಸ್ ಮಣ್ಣು..?
ಕೋಲ್ಯ: ಕೊಂಡ್ಕೊಂಡ್ ತಂದಿದ್ರೆ ನಾನೂ ಹೇಳ್ತಿರ್ಲಿಲ್ಲ. ಪಕ್ಕದ ಮನೆಯ ನ್ಯೂಸ್‌ಪೇಪರ್ ತರ್ತಾನಲ್ಲ ಅದಿಕ್ಕೆ ಜೀನಿಯಸ್.
--
ಕೋಲ್ಯ ತನ್ನ ಹೆಂಡ್ತಿಗೆ ಹೊಸ ಕಾರು ಕೊಡಿಸಿ ಹೀಗೆ ವಾರ್ನಿಂಗ್ ಮಾಡಿದ, 'ನೋಡೇ ಅಕಸ್ಮಾತ್ ಕಾರನ್ನು ಆ್ಯಕ್ಸಿಡೆಂಟ್ ಮಾಡಿ, ನೀನೆಲ್ಲಾದ್ರೂ ಸತ್ ಹೋದ್ರೆ, ನಿನ್ನ ವಯಸ್ಸು ಮರುದಿನದ ನ್ಯೂಸ್ ಪೇಪರ್‌ನಲ್ಲಿ ಬರುತ್ತೆ'.
ಕೋಲ್ಯಿಣಿ ಇಂದಿಗೂ ಆ್ಯಕ್ಸಿಡೆಂಟ್ ಮಾಡದೆ ಕಾರು ಓಡಿಸುತ್ತಿದ್ದಾಳೆ!
---
ಲಾ ಸ್ಟೂಡೆಂಟು, ಎಂಜಿನಿಯರಿಂಗ್ ಸ್ಟೂಡೆಂಟು ಇಬ್ಬರೂ ಸತ್ತು ಯಮಲೋಕ ಸೇರಿದರು. ಯಮರಾಜ, ಕಾನೂನು ವಿದ್ಯಾರ್ಥಿಗೆ 13 ವರ್ಷ ನರಕ ಶಿಕ್ಷೆ, ಎಂಜಿನಿಯರಿಂಗ್ ವಿದ್ಯಾರ್ಥಿಗೆ 9 ವರ್ಷ ನರಕ ಶಿಕ್ಷೆ ವಿಧಿಸಿದ.
ಲಾ ಸ್ಟೂಡೆಂಟ್: ಯಾಕೀ ತಾರತಮ್ಯ? ಅನಿಗೆ ಕಮ್ಮಿ, ನನಗೆ ಜಾಸ್ತಿ ವರ್ಷ ನರಕ ಶಿಕ್ಷೇನಾ?
ಯಮರಾಜ: ಛೇ! ಛೇ! ಹಾಗೇನೂ ಇಲ್ಲ. ಅವನು ಈಗಾಗಲೇ 4 ವರ್ಷ ನರಕ ಶಿಕ್ಷೆ ಅನುಭವಿಸಿದ್ದಾಲ್ಲ!
ಡಿಸೆಂಬರ್ 22
ಗರ್ಲ್‌ಫ್ರೆಂಡ್: ನಾವು ಯಾವತ್ತು ಮದ್ವೆ ಆಗೋದು? ಕೋಲ್ಯ: ಡಿಸೆಂಬರ್ 22.
ಗರ್ಲ್‌ಫ್ರೆಂಡ್: ಅವತ್ತೇ ಯಾಕೆ?
ಕೋಲ್ಯ: ಆ ದಿನ ವರ್ಷದಲ್ಲೇ ಅತಿದೀರ್ಘ ರಾತ್ರಿಯಂತೆ!
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.