ಘ್ನಾನಪೀಠ
ಘಾಟಿ
ವಿ. ಹೇಮಕಂತಕುಮಾರ್, ಬೆಂಗಳೂರು.
- ತಾರೆಯರು ನೋಟಿಲ್ಲದೆ, ತಮ್ಮ ನೋಟದಲ್ಲೇ ಮತದಾರರನ್ನು ಸೆಳೆಯುತ್ತಾರೆಯೇ?
-ಮತದಾರರು ಬರುತ್ತಾರೆ, ಆದರೆ ಮತ ಬರೋಲ್ಲ!
ಎಂ.ಬಿ. ಕೃಷ್ಣಮೂರ್ತಿ, ಬೆಂಗಳೂರು.
- ಗೆಲ್ಲುವ ಮೊದಲು ಚಿನ್ನದಂತಹ, ವಜ್ರದಂತಹ ಅಮೂಲ್ಯ ಮತ ಅಂತಾರೆ, ಗೆತ್ತ ನಂತರ?
-ಆ ಮತ ಅಡವಿಟ್ಟು ಮಜ ಉಡಾಯಿಸ್ತಾರೆ.
ಕೆ. ಶ್ರೀನಿವಾಸರಾವ್, ಹರಪನಹಳ್ಳಿ
- ದೇವರ ಪೂಜಾರಿಗೂ, ಪ್ರೇಮದ ಪೂಜಾರಿಗೂ ವ್ಯತ್ಯಾಸವೇನು?
-ದೇವರ ಪೂಜಾರಿ ಕಾಣಿಕೆ ತೆಗೊಳ್ತಾನೆ, ಪ್ರೇಮದ ಪೂಜಾರಿ ತಾನೇ 'ಕಾಣಿಕೆ' ಹಾಕ್ತಾನೆ!
ಬರ್ಕ್‌ಲಿ ರಮೇಶ್, ಕಿರಗಂದೂರು, ಮಂಡ್ಯ
- ಇಲ್ಲೊಬ್ಬಳು ನನ್ನ ಮನಸ್ಸನ್ನು ಕದ್ದುಬಿಟ್ಟಿದ್ದಾಳೆ, ಏನು ಶಿಕ್ಷೆ ಕೊಡಲಿ?
-ಗೃಹಬಂಧನದಲ್ಲಿಡಿ, ಸಾಧ್ಯವಾದರೆ ನಿಮ್ಮ ಮನೆಯಲ್ಲೇ!
ಎಚ್. ಆನಂದಕುಮಾರ್, ಚಿತ್ರದುರ್ಗ.
- ಯಡ್ಡಿ ಕಾಂಗ್ರೆಸ್ ಜೊತೆ ಟ್ವಂಟಿ-ಟ್ವಿಂಟಿ ಮ್ಯಾಚ್‌ನ ಅಧಿಕಾರದ ಕನಸ್ಸು ಕಾಣುತ್ತಿದ್ದಾರಂತೆ, ಏನಾಗಬಹುದು?
-ಮೊದಲು ಟ್ವಂಟಿ ಸೀಟುನ್ನಾದ್ರೂ ಗೆಲ್ಲಬೇಕಲ್ಲ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ.
- ಮುದುಕರಿಗೆ ಮುದ್ದೇ, ಮಕ್ಕಳಿಗೆ ನಿದ್ದೆ ಇಷ್ಟವಂತೆ, ಹದಿಹರೆಯದವರಿಗೆ?
-ಅವರಿಗೂ 'ಮುದ್ದೇ' ಇಷ್ಟ!
ಎಂ.ಬಿ. ಕೃಷ್ಣಮೂರ್ತಿ, ಬೆಂಗಳೂರು.
- ಸ್ವಯಂಕೃತ ಅಪರಾಧವೆಂದರೆ?
-ಯಡಿಯೂರಪ್ಪ ಮತ್ತು ಶ್ರೀರಾಮುಲು ಕೇಳಿದ್ರೆ ಗೊತ್ತಾಗುತ್ತೆ!
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
- ಗಾಡಿಗೆ ಎಣ್ಣೆ ಹಾಕಿದರೆ ಓಡುತ್ತದೆ, ಬಾಡಿಗೆ 'ಎಣ್ಣೆ' ಹಾಕಿದರೆ?
-ಹಾಡುತ್ತದೆ, ಕುಣಿಯುತ್ತದೆ, ಆಮೇಲೆ ಬಾಡುತ್ತದೆ!
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.