ವಿಶ್ವ ನೃತ್ಯ ಸಪ್ತಾಹ
ಬೆಂಗಳೂರಿನ ಸೃಷ್ಟಿ ಅಭಿನಯ ಕಲಾವಿದರ ಕೇಂದ್ರವು ಏಪ್ರಿಲ್ 29ರಿಂದ ವಿಶ್ವ ನೃತ್ಯ ಸಪ್ತಾಹವನ್ನು ಆಚರಿಸುತ್ತಿದೆ. ಖ್ಯಾತ ಕಲಾವಿದೆ ಸುಧಾ ಚಂದ್ರನ್ ಅವರಿಗೆ ರಾಷ್ಟ್ರೀಯ ನೃತ್ಯ ಸಾಧಕ ಪ್ರಶಸ್ತಿ ಪ್ರದಾನ ಹಾಗೂ ಅವರಿಂದ ಭರತನಾಟ್ಯ ಪ್ರದರ್ಶನ ಇದೆ. 29ರ ಸಂಜೆ 5.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವೈಜಯಂತಿ ಕಾಶಿ ಅವರಿಂದ ಸಪ್ತಾಹ ಉದ್ಘಾಟನೆ. 1ರಂದು ಎ.ವಿ.ಸತ್ಯನಾರಾಯಣರ ಮಹಾನ್ ಬುದ್ಧ ಏಕವ್ಯಕ್ತಿ ಪ್ರದರ್ಶನ, ಕಥಕ್, ಒಡಿಸ್ಸಿ, ಕೂಚಿಪುಡಿ ಪ್ರದರ್ಶನಗಳು, ಕಥಕ್ ಮತ್ತು ನೆರಳು ಬೆಳಕಿನ ಕಾರ್ಯಾಗಾರಗಳು ಇರಲಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.