ಪಥೇರ್ ಪಾಂಚಾಲಿ
ಹಳೆಯ ಕ್ಲಾಸಿಕ್ ಚಲನಚಿತ್ರಗಳನ್ನು ಸುಮ್ಮನೆ ನೋಡುವುದು ಬೇರೆ, ವೀಕ್ಷಣೆಯ ಜತೆಗೆ ಹಿರಿಯರಿಂದ ಒಳನೋಟಭರಿತ ವಿಶ್ಲೇಷಣೆಯನ್ನೂ ಆಲಿಸುವುದು ಬೇರೆ. ಎರಡೂ ಸೇರಿದ ಅಪರೂಪದ ಕಾರ್ಯಕ್ರಮವನ್ನು ಸಂಯೋಜಿಸುತ್ತಿರುವವರು ಕೆ.ವಿ.ಸುಬ್ಬಣ್ಣ ಆಪ್ತಸಮೂಹ. ಇಲ್ಲಿ ಪ್ರತಿ ತಿಂಗಳೂ ಸಾಂಸ್ಕೃತಿಕ ಮಹತ್ವದ ವ್ಯಕ್ತಿಯೊಬ್ಬರ ಮೆಚ್ಚಿನ ಚಿತ್ರಗಳನ್ನು ನೋಡಿ, ನೋಡಿಸಿ, ಚರ್ಚಿಸಲಾಗುತ್ತಿದೆ. ಈ ಮಾಸದ ಮೆಲುಕು ಕೆ.ವಿ.ಸುಬ್ಬಣ್ಣ ಅವರದು. ಈ ಭಾನುವಾರದ ಚಿತ್ರ ಸತ್ಯಜಿತ್ ರೇ ಅವರ 'ಪಥೇರ್ ಪಾಂಚಾಲಿ'. ಸುಬ್ಬಣ್ಣ ಸ್ಮರಣಾರ್ಥ ನೀನಾಸಂ ಸಾಕ್ಷ್ಯಚಿತ್ರದ ಪ್ರದರ್ಶನ ಕೂಡ ಇದೆ. ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದಲ್ಲಿ ಇವೆಲ್ಲ ನಡೆಯುತ್ತಿದೆ ಎಂಬುದು ಗಮನಿಸಬೇಕಾದ ಅಂಶ.
ಸ್ಥಳ: ಕೆ.ವಿ.ಸುಬ್ಬಣ್ಣ ಆಪ್ತರಂಗಮಂದಿರ, ಟೀಚರ್ಸ್ ಕಾಲನಿ, ಬೆಂಗಳೂರು. ಸಮಯ: ಸಂಜೆ 4.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.