ಮೆತ್ತ ಮೆತ್ತಗಿದೆ!
ಕೋಲ್ಯ ಸೂಪರ್ಮಾರ್ಕೇಟಿಗೆ ಶಾಪಿಂಗಿಗೆ ಹೋದ. ಎರಡು ಕೆ.ಜಿ. ಡಾಗ್ ಫುಡ್ ತಗೊಂಡ. ಕ್ಯಾಷಿಯರ್ ಕೌಂಟರ್ಗೆ ಬಂದ.
ಕ್ಯಾಷಿಯರ್: ನಿಮ್ಮ ಬಳಿ ನಾಯಿ ಇದ್ಯಾ?
ಕೋಲ್ಯ: ಹೌದು.
ಕ್ಯಾಷಿಯರ್: ಎಲ್ಲಿದೆ ತೋರ್ಸಿ?
ಕೋಲ್ಯ: ಮನೆಯಲ್ಲಿ ಬಿಟ್ಟುಬಂದಿದ್ದೀನಿ.
ಕ್ಯಾಷಿಯರ್: ನಾಯಿಯನ್ನು ನೋಡದೆ ಡಾಗ್ಫುಡ್ ಕೊಡೋದಿಕ್ಕಾಗಲ್ಲ. ಇಲ್ಲಾ ಅಂದ್ರೆ ಇಲ್ಲೇ ಒಂದು ನಾಯಿಯನ್ನು ಖರೀದಿಸಿ. ಇದು ನಮ್ಮ ರೂಲ್ಸು.
ಕೋಲ್ಯ ಪೇಚುಮೋರೆ ಹಾಕ್ಕೊಂಡು ಮನೆಗೆ ಹೋದ.
ಮರುದಿನ ಅದೇ ಸೂಪರ್ ಮಾರ್ಕೇಟಿಗೆ ಬಂದು, ಕ್ಯಾಟ್ಫುಡ್ ತಗೊಂಡ. ನಂತರ ಕೌಂಟರ್ಗೆ ಬಂದ.
ಕ್ಯಾಷಿಯರ್: ನಿಮ್ಮ ಬಳಿ ಬೆಕ್ಕಿದ್ಯಾ?
ಕೋಲ್ಯ: ಇದೆ. ಆದರೆ, ಮನೆಯಲ್ಲಿದೆ.
ಕ್ಯಾಷಿಯರ್: ಬೆಕ್ಕನ್ನು ನೋಡದೆ ಫುಡ್ಪ್ಯಾಕ್ ಕೊಡೋದಿಕ್ಕಾಗಲ್ಲ. ಇಲ್ಲಾ ಅಂದ್ರೆ ಇಲ್ಲೇ ಒಂದು ಬೆಕ್ಕು ಖರೀದಿಸಿ. ಇದು ರೂಲ್ಸು.
ಮತ್ತೆ ಬೇಜಾರಾಗಿ ಕೋಲ್ಯ ಬಜಾರಿನಿಂದ ಹೊರನಡೆದ.
ಮರುದಿನ ಒಂದು ಕವರ್ ಇಟ್ಟುಕೊಂಡು ಕೌಂಟರ್ ಬಳಿ ಹೋದ.
ಕೋಲ್ಯ: ಈ ಕವರೊಳಗೆ ಕೈ ಹಾಕಿ.
ಕ್ಯಾಷಿಯರ್ ಕೈಹಾಕಿದ. ಮೆತ್ತ ಮೆತ್ತಗೆ ಏನೋ ಅಂಟಿತು.
ಕೋಲ್ಯ: ಹೇಗಿದೆ?
ಕ್ಯಾಷಿಯರ್: ಥೂ, ಗಬ್ಬು ನಾರ್ತಿದೆ.
ಕೋಲ್ಯ: ಸರಿ ಹಾಗಿದ್ರೆ, 3 ರೋಲ್ ಟಾಯ್ಲೆಟ್ ಪೇಪರ್ ಕೊಡಿ.
=
ಇ- ಸಂಭಾಷಣೆ
ವಿಕಿಪೀಡಿಯಾ: ಒಂದು ಎಂಟರ್ ಹೊಡೆದರೆ ಎಲ್ಲ ಪೇಜುಗಳನ್ನೂ ತೋರಿಸ್ತೀನಿ.
ಗೂಗಲ್: ಒಂದು ಸಮಸ್ಯೆಗೆ ಸಾಕಷ್ಟು ಉತ್ತರ ಕೊಡಬಲ್ಲೆ.
ಇಂಟರ್ನೆಟ್: ನಾನಿಲ್ಲ ಅಂದ್ರೆ, ನಿಮ್ದೇನೂ ನಡೆಯಲ್ಲ.
ಕಂಪ್ಯೂಟರ್: ನಾನಿಲ್ಲ ಅಂದ್ರೆ, ನೀವೆಲ್ಲ ಯೂಸ್ಲೆಸ್.
ಕರೆಂಟ್: ಹಂಗೆ ಮಾತಾಡ್ತಾ ಇರಿ, ಒಂದ್ನಿಮಿಷ ಆಚೆಗೆ ಹೋಗಿ ಬರ್ತೀನಿ!
=
ಫಂಟಾ: ನೀನು ಷೇಕ್ಸ್ಪಿಯರ್ನನ್ನು ಓದಿದ್ದೀಯಾ?
ಕೋಲ್ಯ: ಇಲ್ಲ, ಅದನ್ನು ಯಾರು ಬರ್ದೋರು?
--