ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಗರಂ ಸಿದ್ರಾಮಣ್ಣ ಸಿಎಂ ಆದ ಕೂಡಲೇ ಕೂಲ್ ಆಗ್ಬಿಟ್ಟಿದ್ದಾರಲ್ಲಾ?

Vishwanath S
Updated On : 10 Aug 2013, 4:02 am

ನಂದ, ಯಡಿಯೂರು
ನಾಚಿಕೆ ಎಂದರೆ ಹೆಂಗಸರಿಗೇನಾ?
- ನಮಗೂ ಇದೆ ಅಂತ ಹೇಳೋಕೆ ಕೆಲವು ಗಂಡಸರು ನಾಚ್ಕೋತಾರೆ!

ವಿ. ಹೇಮಂತಕುಮಾರ್, ಬೆಂಗಳೂರು
ಪೋಸ್ಟ್ ಆಫೀಸಿಗೂ, ಆಸ್ಪತ್ರೆಗೂ ವ್ಯತ್ಯಾಸವೇನು?
- ಇಲ್ಲಿ ಪೋಸ್ಟ್, ಅಲ್ಲಿ ಪೋಸ್ಟ್‌ಮಾರ್ಟಂ.

ಬಾನಂದೂರು ಮಂಜುಳಾ, ದೇವದುರ್ಗ
ಸಚಿವ ಅಂಬರೀಷ್ ಕುದುರೆ ರೇಸ್‌ನಲ್ಲಿ ಪಾಲ್ಗೊಂಡಿದ್ದಕ್ಕೆ ಗವರ್ನರ್‌ಗೆ ಅಸಮಾಧಾನವಾ ?
 - ತನಗೆ ಒಂದು ಮಾತೂ ಹೇಳಲಿಲ್ಲಾಂತ ಅಷ್ಟೇ!

ಆರ್. ವಿಜಯಲಕ್ಷ್ಮಿ ಕೊಳ್ಳೇಗಾಲ
ಎರಡೆರಡು ಮೊಬೈಲ್ ಇಟ್ಕೊಂಡವರು ಎರಡು ರುಪಾಯಿಯ ಒಂದು ಪೆನ್ ಇಟ್ಕೊಂಡಿರೋದಿಲ್ವಲ್ಲ?
- ಪೆನ್‌ಗೆ ಎರಡು ರುಪಾಯಿ ಕೊಡ್ಬೇಕು, ಎಸ್ಸೆಮ್ಮೆಸ್ ಫ್ರೀ!

ವಿಶ್ವಸುಹೃದಯ, ದಾವಣಗೆರೆ
ಹುಡುಗಿಯರು ಗುಣ ನೋಡಿ ಪ್ರೀತಿ ಮಾಡುವುದಿಲ್ಲ ಏಕೆ?
- ಹಣ ಖರ್ಚುಮಾಡಿದ ಹಾಗೆ ಗುಣ ಖರ್ಚುಮಾಡೋಕೆ ಆಗೋಲ್ವಲ್ಲ!

ಎಚ್. ಆನಂದಕುಮಾರ್, ಚಿತ್ರದುರ್ಗ
ಗರಂ ಸಿದ್ರಾಮಣ್ಣ ಸಿಎಂ ಆದ ಕೂಡಲೇ ಕೂಲ್ ಆಗ್ಬಿಟ್ಟಿದ್ದಾರಲ್ಲಾ?
 - ಇದು ಹೈಕಮಾಂಡ್‌ನ ದಿಗ್ವಿಜಯ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಹಗಲು ಕಡಿಮೆಯಾಗಿ, ರಾತ್ರಿ ಹೆಚ್ಚಿದ್ದರೆ ಹೇಗಿರುತ್ತಿತ್ತು?
- ಹಗಲು ದರೋಡೆ ಸ್ವಲ್ಪ ಕಡಿಮೆಯಾಗ್ತಿತ್ತು!


-ಘಾಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement