ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಸರ್, ಟೈಮೆಷ್ಟು?

Vishwanath S
Updated On : 10 Aug 2013, 4:19 am

ಒಬ್ಬ ಮುದುಕ ರೇಲ್ವೆ ಸ್ಟೇಶನ್ನಿನಲ್ಲಿ ಕೂತಿದ್ದ. ಅಲ್ಲಿಗೊಬ್ಬ ಯುವಕ ಬಂದ.
ಯುವಕ: ಸರ್, ಟೈಮೆಷ್ಟು?
ಆ ಮುದುಕ ತಲೆ ಅಡಿ ಹಾಕಿದ. ಆದರೂ, ಯುವಕ ಬಿಡಲೇ ಇಲ್ಲ. ಮೇಲಿಂದ ಮೇಲೆ 'ಟೈಮೆಷ್ಟು?' ಅಂತ ಕೇಳುತ್ತಲೇ ಇದ್ದ. ಮುದುಕ ಏನೂ ಉತ್ತರಿಸಲಿಲ್ಲ.
ಯುವಕ: ವಾಚ್ ಇದ್ದರೂ ಯಾಕೆ ನನಗೆ ಟೈಮ್ ಹೇಳೋದಿಲ್ಲ.
ಮುದುಕ: ಅಕಸ್ಮಾತ್ ನಿನಗೆ ಟೈಮ್ ಹೇಳಿದರೆ, ಅದಾದ ಮೇಲೆ ನೀನು ನನ್ನ ಹೆಸರು, ಏನ್ ಕೆಲ್ಸ ಮಾಡ್ತೀರಾ ಅಂತ ಕೇಳ್ತೀಯ. ನಾನು ನಿನ್ನ ಬಗ್ಗೆ ಒಂದಿಷ್ಟು ಕೇಳಬಹುದು. ಆಗ ನೀನು ನನ್ನ ಪಕ್ಕ ಕೂರುತ್ತೀಯ. ನನ್ನನ್ನು ರಿಸೀವ್ ಮಾಡಿಕೊಳ್ಳಲು ನನ್ನ ಮೊಮ್ಮಗಳು ಇನ್ನೇನು ಬರಲಿದ್ದಾಳೆ. ಅವಳು ಅದ್ಭುತ ಸುಂದರಿ ಬೇರೆ. ನೀನು ಅವಳೊಂದಿಗೂ ಮಾತಿಗಿಳಿದು ಪ್ರೀತಿಯಲ್ಲಿ ಬೀಳಬಹುದು. ಅವಳು ನನಗೆ, 'ತಾತಾ, ನಾನು ಇವ್ನನ್ನೇ ಮದ್ವೆ ಆಗ್ತೀನಿ' ಅಂತ ಒತ್ತಾಯಿಸಲೂಬಹುದು. ಬೇರೆ ಯಾರ ಬಳಿಯಾದರೂ ವಾಚ್ ಇದ್ದರೆ ಕೇಳಪ್ಪ.
ಅಷ್ಟರಲ್ಲೇ ಆ ಮುದುಕನ ಮೊಮ್ಮಗಳು ಬಂದಳು.
ಯುವಕ: ಸರಿ ಬಿಡಿ, ನಾನು ಈ ಹುಡುಗಿಯ ಬಳಿಯೇ ಎಲ್ಲವನ್ನೂ ಕೇಳುತ್ತೇನೆ!

ಫಂಟಾ: ಬೇಗ ಓಡು, ನಿನ್ನ ಹುಡುಗಿಗೆ ಹಾವು ಕಚ್ಚಿದೆಯಂತೆ.
ಕೋಲ್ಯ: ಬಿಡು ಏನೂ ಆಗಲ್ಲ. ಹಾವಿಗೆ ವಿಷ ಕಮ್ಮಿ ಆಗಿರ್ಬೇಕು, ಹಾಗಾಗಿ ರೀಫಿಲ್ ಮಾಡ್ಕೊಂಡಿದೆ ಅಷ್ಟೇ.
ಅಪ್ಪ ಯಾರು?
ಕೋಲ್ಯಿಣಿ: ರೀ ನೋಡಿದ್ರಾ, ನನ್ ಹೊಟ್ಟೆ ಹೇಗೆ ಉಬ್ಬಿದೆ. ಬಹುಶಃ ನಾನು ಪ್ರೆಗ್ನೆಂಟ್ ಆಗಿದ್ದೀನಿ ಅಂತ ಕಾಣುತ್ತೆ.
ಕೋಲ್ಯ: ಇರಬಹುದು. ಹಾಗಾದ್ರೆ, ಅಪ್ಪ ಯಾರು?
ಕೋಲ್ಯಿಣಿ: (ಸಿಟ್ಟಿನಲ್ಲಿ) ಆಂ್ಞ... ಯಾರು!?
ಕೋಲ್ಯ: ಮ್ಯಾಕ್‌ಡೊನಾಲ್ಡ್!

ಕೋಲ್ಯ: ನನ್ನ ಬದುಕಿನಲ್ಲಿ ಒಬ್ಬಳೇ ಒಬ್ಬಳು ಗರ್ಲ್‌ಫ್ರೆಂಡ್ ಬರ್ಲಿಲ್ಲ.
ಜ್ಯೋತಿಷಿ: ಅದ್ಹೇಗೆ ಬರೋಕ್ಕೆ ಸಾಧ್ಯ? ಕುಂಡಲಿಯಲ್ಲಿ ಸಂಪೂರ್ಣ ಖುಷಿಯೇ ಕಾಣಿಸ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments