ಫಸ್ಟ್ನೈಟು
ಸುರಸುಂದರಿ ಎಲೆಕೋಸು, ಕೆಂಪು ಹುಡುಗ ಕ್ಯಾರೇಟಿನ ಜತೆ ಲವ್ವಿಗೆ ಬಿದ್ದಳು. ತಿಂಗಳ ನಂತರ ಮದುವೆಯೂ ಆಯಿತು. ಮರುದಿನ ವಿಶ್ ಮಾಡಲೆಂದು ಹೀರೇಕಾಯಿ ಬಂದ.
ಬೆಂಡೆಕಾಯಿ: ಹೇಗಿತ್ತೋ ನಿನ್ನೆ ಫಸ್ಟ್ನೈಟು?
ಕ್ಯಾರೇಟ್: ಏನ್ ಕರ್ಮ ಫಸ್ಟ್ನೈಟು... ಇಡೀ ರಾತ್ರಿ ಅವಳ ಡ್ರೆಸ್ ಬಿಚ್ಚೋದೇ ಆಯ್ತು.
ಕೋಲ್ಯ ಹೊಸ ಕಂಪ್ಯೂಟರ್ ಕೊಂಡ. ಸ್ವಲ್ಪ ದಿನದ ನಂತರ ಏನೋ ದೂರು ಹಿಡ್ಕೊಂಡ್ ಖರೀದಿಸಿದ ಕಂಪನಿಗೆ ಬಂದ.
ಕೋಲ್ಯ: ನಾನು ಪಾಸ್ವರ್ಡ್ ಹೊಡೆದಾಗ್ಲೆಲ್ಲ ಅದು =====ಅಂತ ಕೇವಲ ಬುಲೆಟುಗಳೇ ಬರ್ತವೆ. ಇದೆಂಥ ತಮಾಷೆ?
ಎಂಜಿನಿಯರ್: ಇಲ್ಲ ಸರ್, ಅದು ನಿಮ್ಮ ಗುಪ್ತಸಂಖ್ಯೆ. ಹಿಂದೆ ನಿಂತವರಿಗೆ ನಿಮ್ಮ ಪಾಸ್ವರ್ಡ್ ಗೊತ್ತಾಗದಿರಲಿ ಅಂತ ಹಾಗೆ ಬುಲೆಟ್ ಬರುತ್ತೆ.
ಕೋಲ್ಯ: ಅದೇನೋ ಸರಿ. ಆದರೆ, ಹಿಂದೆ ಯಾರೂ ನಿಂತಿರದೆ ಇದ್ದಾಗ್ಲೂ ಯಾಕೆ ಬುಲೆಟ್ ಬರುತ್ತೆ?
ಎಂಜಿನಿಯರ್: (ತಲೆಕೆಟ್ಟು) ಸ್ವಲ್ಪ ತಾಳಿ, ಬುಲೆಟ್ ಪ್ರಕಾಶ್ ಅವರ ನಂಬರ್ ಕೊಡ್ತೀನಿ!
ಕೋಲ್ಯನ ಅಮೆರಿಕ ಗೆಳೆಯ ಭಾರತ ನೋಡಲು ಬಂದ.
ಅಮೆರಿಕನ್: ಈ ಕುತುಬ್ ಮಿನಾರ್ ನಿರ್ಮಿಸಲು ಎಷ್ಟು ಸಮಯ ಹಿಡಿಯಿತು?
ಕೋಲ್ಯ: ಒಂದು ತಿಂಗಳು.
ಅಮೆರಿಕನ್: ನಮ್ಮಲ್ಲಿ ಇದನ್ನು ಎರಡೇ ವಾರದಲ್ಲಿ ಕಟ್ತಿದ್ರು.
ಇಬ್ಬರೂ ಕೆಂಪುಕೋಟೆಗೆ ಹೋದರು.
ಅಮೆರಿಕನ್: ಕೆಂಪುಕೋಟೆ ಕಟ್ಟಲು ಎಷ್ಟು ಕಾಲ ಬೇಕಾಯಿತು?
ಕೋಲ್ಯ: ಎರಡು ವಾರ.
ಅಮೆರಿಕನ್: ನಮ್ಮಲ್ಲಾಗಿದ್ರೆ ಇದನ್ನು ಮೂರೇ ದಿನದಲ್ಲಿ ಕಟ್ತಿದ್ರು.
ಇಬ್ಬರೂ ತಾಜ್ಮಹಲ್ಗೆ ಹೋದರು.
ಅಮೆರಿಕನ್: ಈ ತಾಜ್ ಕಟ್ಟಲು ಎಷ್ಟು ಟೈಮ್ ತಗೊಂಡ್ರು?
ಕೋಲ್ಯ: ಏನಪ್ಪಾ, ನಿನ್ನೆ ಬಂದಿದ್ವು ಆಗೇನೂ ಇರ್ಲಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.