ರಮ್ಯ ವಿರುದ್ಧ ರಾಧಿಕೆ ಸ್ಪರ್ಧಿಸಿದ್ದರೆ ಹೇಗಿರುತ್ತಿತ್ತು?
ಲಕ್ಷ್ಮಿ ಬರ್ಕ್‌ಲಿ ರಮೇಶ್, ಕಿರಗಂದೂರು, ಮಂಡ್ಯ.
ಆಸೆ ನಿರಾಸೆಗಳ ನಡುವೆಯೂ ಮಾನವ ಸಾಧಿಸುವುದೇನು?
- ಆಯುಷ್ಯ ಇದ್ದಷ್ಟೂ ಜೀವನ ಮಾಡೋದು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.
ಕಡ್ಡಾಯವಾಗಿ ಎಲ್ಲರೂ ಪ್ರೀತಿಸಲೇಬೇಕು ಅಂತ ಕಾನೂನು ಬಂದರೆ?
- ಅದಕ್ಕೆ ವಯಸ್ಸಿನ ಮಿತಿಯನ್ನೂ ಹಾಕಬೇಕಾಗುತ್ತೆ!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
ಭೀಮನ ಅಮಾವಾಸ್ಯೆಯೆಂದು ಮಹಿಳೆಯರು ಗಂಡನಿಗೆ 'ಪೂಜೆ' ಮಾಡಿದರಂತೆ?
- ಕೀಚಕನ ಬುದ್ಧಿ ಬಿಡು ಅಂತ ಇರಬೇಕು!
ಪಿ.ಜಿ. ರಾಘವೇಂದ್ರ, ಮೈಸೂರು.
ರಮ್ಯ ವಿರುದ್ಧ ರಾಧಿಕೆ ಸ್ಪರ್ಧಿಸಿದ್ದರೆ ಹೇಗಿರುತ್ತಿತ್ತು?
- ರಮ್ಯ ಪರವಾಗಿ ಅನಿತಾ ಕುಮಾರಸ್ವಾಮಿ ಪ್ರಚಾರಕ್ಕೆ ಹೋಗ್ತಿದ್ರು!
ಸ್ವಾಮಿ ನಿರ್ಮಲಾ, ಉಡಿಗಾಲ.
ಕನಸುಗಳು ಕಲರ್‌ನಲ್ಲೇ ಬೀಳುತ್ತವಂತೆ, ನಿಜಾನ ಗುರು?
- ಆಮೇಲೆ ತ್ರೀಡಿ ಎಫೆಕ್ಟ್‌ನಲ್ಲೂ ಬೀಳಬಹುದು!
ಹೆಡತಲೆ ಮಾದನಾಯಕ, ಮೂಡಲಪಾಳ್ಯ.
ಗಂಡ-ಹೆಂಡತಿ ಸರ್ಕಾರಿ ಕೆಲಸದಲ್ಲಿ ಇದ್ದರೆ ಲಾಭ ಯಾರಿಗೆ?
- ಮನೆ ಕೆಲಸದವರಿಗೆ!
ವಿ. ಹೇಮಂತ್‌ಕುಮಾರ್, ಬೆಂಗಳೂರು.
ರೈತ ದೇಶದ ಬೆನ್ನೆಲುಬಾದರೆ, ರಾಜಕಾರಣಿ?
- ಹೊಟ್ಟೆ!
-ಘಾಟಿ