ಗೊಲ್ಲ ನೀನೇ ನಮಗೆಲ್ಲ
ಗೊಲ್ಲ ನೀನಿಲ್ಲದೇ ಏನೂ
ಆಗೊಲ್ಲ
ಗೊಲ್ಲರ ಗೊಲ್ಲ ನೀನೇ
ಜಗದಿ ಏನೆಲ್ಲ
ಹಸುವಂಥವರ
ಕಾಯವೆ-ಸಲಹುವೆ
ಹಸುಮುಖ ಹೊತ್ತ
ವ್ಯಾಘ್ರರ ಸಂಹರಿಸುವೆ
ಗೊಲ್ಲ ನಿನ್ನ ಗಲ್ಲ
ಗೋಪಿಕೆಯರಿಗೆ ಬೇಕಲ್ಲ
ನಿನ್ನ ಸರಸ-ಸಲ್ಲಾಪ
ಯಾರಿಗೆ ಬೇಡದಿಲ್ಲ
ಪಿಳ್ಳಂಗೋವಿಯ ಊದುವೆ
ಶಂಖುವಿನ ನಿನಾದವ ಕೇಳಿಸುವೆ
ಮನದ ಗಾಢಾಂಧಕಾರವ
ಕ್ಷಣದಿ ನೀಗಿಸುವೆ
ಜಗದೆಲ್ಲ ಕಷ್ಟಗಳ ನುಂಗಿ
ನೀಲ ಮೇಘಶ್ಯಾಮನಾಗಿರುವೆ
ಜಗದ ಬಂಡಿಯ ನಡೆಸುವ
ಸಾರಥಿಯಾಗಿರುವೆ
'ನಾನು, ನನ್ನದು, ನನ್ನಿಂದಲೇ'
ಎಂದು ಬೀಗುವರಿಗಾಗೇ
'ಗೀತಾ' ಬೋಧಿಸಿ
ಸತ್ಯಾವತಾರವ ತೋರಿಸಿರುವೆ
ಗೊಲ್ಲ ನೀನೇ ಎಲ್ಲಾ
ನೀನಿಲ್ಲದೆ ಮನದಿ
ನಾನು ಹೋಗುವುದಿಲ್ಲ
- ಚಿತ್ತಾ