ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಪಾಠಕ್ಕೊಂದು ಪೀಠಿಕೆ

Lingaraj Badiger
Updated On : 24 Aug 2013, 3:41 am

ಮಕ್ಕಳಿಗೆ ಆಟ ಎಂದರೆ ಖುಷಿಯೋ ಖುಷಿ. ಆದರ ನಂತರ ಅವರಿಗೆ ತುಂಬಾ ಇಷ್ಟವಾಗುವುದು ಕತೆ ಕೇಳುವುದು, ಓದುವುದು, ಕೇಳಿದ ಕಥೆಯನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವುದು. ಮೊದಲೆಲ್ಲ ಶಿಕ್ಷಕರ ಮತ್ತು ಪೋಷಕರ ಒತ್ತಾಯಕ್ಕೆ ಪಾಠದ ಕಡೆಗೆ ಒಲವು ತೋರಿಸುತ್ತಿದ್ದ ಮಕ್ಕಳು ಇತ್ತೀಚೆಗೆ ಸ್ಪರ್ಧಾತ್ಮಕ ಯುಗದಲ್ಲಿ ಈ ಪಾಠಕ್ಕೆ ಕೂಡ ಅಷ್ಟೆ ಪ್ರಮುಖ್ಯತೆ ಕೊಡುತ್ತಿದ್ದಾರೆ. ಈ ವಿಷಯವನ್ನು ಗ್ರಹಿಸಿದ ಸಂಪಟೂರು ವಿಶ್ವನಾಥ್ ಅವರು ಮಕ್ಕಳಿಗಾಗಿಯೇ ಕನ್ನಡದಲ್ಲಿ ಬರೆದ 'ಪಾಠಕ್ಕೊಂದು ಪೀಠಿಕೆ' 200 ಮೌಲ್ಯಾಧಾರಿತ ಮಕ್ಕಳ ಕಥೆಗಳು ಎಂಬ ಪುಸ್ತಕವನ್ನು ಬರೆದಿದ್ದಾರೆ. ಸಪ್ನ ಬುಕ್ ಹೌಸ್ ಅವರು ಪ್ರಕಾಶಿಸಿದ್ದಾರೆ. ಮಕ್ಕಳು ಓದಲು ಅರ್ಹವಾದ ಪುಸ್ತಕವಿದು.

ಇಲ್ಲಿ ಬರೆದಿರುವ ಎಲ್ಲಾ 200 ಕಥೆಗಳನ್ನು ಸಾಧ್ಯವಾದಷ್ಟು ಎಲ್ಲ ರಂಗದ ಬೇರುಗಳ ತಳಹದಿಯ ಮೇಲೆ ರಚಿಸಿ ಮಕ್ಕಳಿಗೆ ನೇರ ಮುಟ್ಟುವತ್ತ ಗಮನಹರಿಸಿದ್ದಾರೆ. ಪುರಾಣ, ಐತಿಹಾಸಿಕ ಘಟನೆಗಳನ್ನು ಇಲ್ಲಿ ತಂದು ಪಾಠದೊಂದಿಗೆ ಬುದ್ಧಿಮತ್ತೆಯನ್ನು ವೃದ್ಧಿಸಲು ಶ್ರಮಿಸಿ ಯಶ ಕಂಡಿದ್ದಾರೆ.

ತಂದೆ-ತಾಯಿ, ಗುರು-ಹಿರಿಯರಲ್ಲಿ ಭಕ್ತಿ-ಗೌರವ, ಗುರಿಯ ಕಡೆ ಗಮನ, ಕರ್ಮಯೋಗ, ಪ್ರಾಮಾಣಿಕತೆ, ಉಪಕಾರ, ತಾಳ್ಮೆ, ಸನ್ನಡತೆ, ಸಮಾನತೆ, ಸೇವಾ ಮನೋಭಾವ, ಹಣದ ಮೌಲ್ಯ, ಆತ್ಮಶೋಧನೆ ಹೀಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತಾ ಪ್ರಬುದ್ಧ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಕೊಡುಗೆ ಇತ್ತಿದ್ದಾರೆ. ಇಂದಿನ ಮಕ್ಕಳೇ ಮುಂದಿನ ಸತ್ಪ್ರಜೆಗಳು ಎಂದು ಅರಿತು ಈ ತಿಳುವಳಿಕೆ ಹೊತ್ತಿಗೆಯನ್ನು ರಚಿಸಿದ್ದಾರೆ. ಸಂಸ್ಕಾರದ ಜೊತೆಗೆ ಬುದ್ಧ, ರಾಮಕೃಷ್ಣರ, ವಿವೇಕಾನಂದರ, ಏಸು, ದೇವದೂತ ಮಹಮ್ಮದ್, ಹಿಲರಿ, ಕವಿ ಬೈರನ್, ಗಾಂಧೀಜಿ, ಕನಫ್ಯುಷಿಯಸ್, ಎಡಿಸನ್‌ನಂತಹ ಮಹನೀಯರ ಜೀವನದ ವಿಶೇಷ ಸಂದರ್ಭಗಳ ಮೂಲಕ ಇಲ್ಲಿ ನೀತಿ ಹೇಳಿದ್ದಾರೆ.

ಈ ಪುಸ್ತಕದಲ್ಲಿರುವ ಕಥೆಗಳ ವಿಶೇಷವೆಂದರೆ ಕಥೆಯ ಕೊನೆಯಲ್ಲಿ ಕಥೆಗೆ ಸಂಬಂಧಪಟ್ಟ ಎರಡು ಪ್ರಶ್ನೆಗಳನ್ನು ಮತ್ತು ಉತ್ತರವನ್ನು ಕೊಟ್ಟಿದ್ದಾರೆ. ಈ ವಿಧಾನವು ಓದಿದ ಕಥೆಯು ಮಕ್ಕಳ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತದೆ.

ಎಸ್ವಿ ಮೇಷ್ಟ್ರು ಎಂದೇ ಖ್ಯಾತರಾದ ಸಂಪಟೂರು, ಮಕ್ಕಳ ಸಾಹಿತ್ಯವೂ ಸೇರಿದಂತೆ 62 ಕೃತಿಗಳನ್ನು ರಚಿಸಿದ್ದಾರೆ. 2000 ಕ್ಕೂ ಮೀರಿ ವಿವಿಧ ವಿಷಯಗಳ ಕುರಿತು ಲೇಖನಗಳು ಪ್ರಕಟವಾಗಿವೆ. ಇಂಗ್ಲಿಷ್‌ನಲ್ಲಿ ಕೂಡ ಸಾಹಿತ್ಯ ರಚನೆಯನ್ನು ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement