ಹೆಂಗಸರು ಕಿವಿಗೆ ಹತ್ತಿ ಇಟ್ಕೊಂಡಿರ್ತಾರೆ ಯಾಕೆ?
ಪೇಂಟರ್ ಪಾಪು, ಸಂತೇಮರಹಳ್ಳಿ
ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ ಶತ್ರುವೂ ಅಲ್ಲ. ಹಾಗಾದರೆ ಇನ್ಯಾರು ಮತ್ತೆ?
- ಹಿತಶತ್ರುಗಳು!
ಸರಸ್ವತಿ, ಗೊಬ್ಬರಡಗಿ, ಜೀವರಗಿ
ಬಡತನ ಎಂಬುದು ಜನರ ಮನಸ್ಥಿತಿ ಎಂದು ರಾಹುಲ್ ವ್ಯಾಖ್ಯಾನ ಮಾಡಿದ್ದಾರಲ್ಲ?
- ಹಾಗೆ ಹೇಳಿ, ತಾನೊಬ್ಬ 'ಪೂರ್' ಕ್ಯಾಂಡಿಡೇಟ್ ಎಂದು ತೋರಿಸಿಕೊಂಡರು!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ವೀಣಾ ಮಲ್ಲಿಕ್‌ಳಿಗೆ ವಸ್ತ್ರ ವಿನ್ಯಾಸಕರ ಅವಶ್ಯಕತೆಯೇ ಇಲ್ಲವೇ?
-'ಚಿಕ್ಕದನ್ನೇ ಚೊಕ್ಕವಾಗಿ' ಮಾಡಲು ವಿನ್ಯಾಸಕಾರರು ಬೇಕಲ್ಲ!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
ಎಸ್.ಎಂ. ಕೃಷ್ಣ ವಿದ್ಯಾರ್ಥಿ ಭವನಕ್ಕೆ ಹೋಗಿ ದೋಸೆ ತಿಂದರು. ಕುಮಾರಸ್ವಾಮಿ ಕೃಷ್ಣ ಭವನಕ್ಕೆ ಹೋಗಿ ದೋಸೆ ತಿಂದರು, ಸಿದ್ದರಾಮಯ್ಯ?
- ಮೊದಲು ಕಾಂಗ್ರೆಸ್ ಭವನಕ್ಕೆ ಬಂದು ಕಾಫಿ ಕುಡೀರಿ ಅಂತಿದ್ದಾರೆ ಪರಮೇಶ್ವರ್!
ನಂದ, ಯಡಿಯೂರು
ಹೆಂಗಸರು ಕಿವಿಗೆ ಹತ್ತಿ ಇಟ್ಕೊಂಡಿರ್ತಾರೆ ಯಾಕೆ?
- ಈ ಕಿವೀಲಿ ಕೇಳೋಲ್ಲ, ಆ ಕಿವೀಲಿ ಬಿಡೋಕೂ ಇಷ್ಟವಿಲ್ಲ!
ಮಹೇಶ್ ಸಾನಬಾಳ, ಮಸ್ಕಿ
ಯಾರಿಗೂ ತೊಂದರೆಯಾಗದಂಥ ಸರಳ ವರಗಳನ್ನು ಕೇಳುವ ಭಕ್ತರು ಇಂದಿನ ಕಲಿಯುಗದಲ್ಲಿ ಇದ್ದಾರೆಯೇ?
- 'ಭೂಮಿ ಕೊಡಪ್ಪಾ, ನಮ್ಮ ಪಾಡಿಗೆ ನಾವು ಮನೆ ಕಟ್ಕೊಂಡಿರ್ತೀವಿ' ಅಂತ ಕೇಳೋರೇ ಜಾಸ್ತಿ ಈಗ!
ಬರ್ಕ್‌ಲಿ ರಮೇಶ್ ಕಿರಗಂದೂರು, ಮಂಡ್ಯ
ಉಮೇಶ್ ಕತ್ತಿಯನ್ನು ಈ ನಾಡಿನ ಮುಖ್ಯಮಂತ್ರಿ ಮಾಡಿದರೆ ಮಾಡುವ ಮೊದಲ ಕೆಲಸ ಯಾವುದು?
- ಕತ್ತಿ ಮಸೆಯುವುದು!
ಫ್ಯಾಶನ್ ಡಿಸೈನರ್ ಮಧು, ಹಾಸನ
ಕುಮಾರಣ್ಣ- ಯಡ್ಡಿ ಹಾರ ಹಾಕೊಂಡ್ರೆ ಸಿದ್ದುಗೇಕೆ ಗಡಗಡ?
- ಹಾರದ ಹಿಂದೆ ಕಾಣದ 'ಕೈ' ಕೆಲಸ ಮಾಡಿದೆ ಅಂತ!