ಅ ಆ ಇ ಈ... ಎ ಬಿ ಸಿ ಡಿ...
ಹೀಗೆ ಅಕ್ಷರಮಾಲೆಗಳು ಉಂಟು
ವಿದ್ಯೆ ಬುದ್ಧಿ ಕಲಿಯಲು
ಬೇಕು ಗುರುಗಳ ನಂಟು
ಶಾಲೆ ಅಂದರೆ ದೇಗುಲವು
ಗುರುಗಳು ನಮಗೆ ದೇವರ ಹಾಗೆ
ಪುಸ್ತಕ ಲೇಖನಿ ಬೇಕಣ್ಣ
ಕಲಿವ ಆಸಕ್ತಿಯು ಬೇಕೆಮಗೆ
ಒಂದೇ ಅಕ್ಷರ ಕಲಿಸಿದರೂ
ಅವರೇ ಗುರುವಿನ ಸಮಾನ
ಕಲಿತ ವಿದ್ಯೆಯು ಕಳೆಯದೆಂದು
ಬೇಡವಿದಕೆ ಅನುಮಾನ
ಕನ್ನಡ, ಇಂಗ್ಲೀಷ್, ಹಿಂದಿ
ಕಲಿಕೆಗೆ ಕೊನೆಯೇ ಇಲ್ಲ
ಶ್ರದ್ಧೆಯ ವಹಿಸಿ ಕಲಿತರೆ
ಎಲ್ಲವೂ ಬಹು ಸುಲಭವಲ್ಲ
ಗುರುವನು ಹೋಲಿಸಬಹುದು
ಬೆಳಕ ಕೊಡುವ ಜ್ಯೋತಿಯನು
ಶಾಲೆಯ ಅಂದದಿ ಸಿಂಗರಿಸೋಣ
ಗುರುವಿಗೆ ಮಾಡುವ ಸನ್ಮಾನವನು
= ಶಿವನಾಪುರ ನರಸಿಂಹಮೂರ್ತಿ,
ಕೆಂಗೇರಿ