ರಾಜಧಾನಿಯಲ್ಲಿ ಮೇಘ ಮಲ್ಹಾರ
ಗುರುರಾವ್ ದೇಶಪಾಂಡೆ ಸಂಗೀತ ಸಭೆಯು ಭಾರತ ರತ್ನ ಪಂ.ಭೀಮಸೇನ ಜೋಶಿ ಅವರ ನೆನಪಿನಲ್ಲಿ 'ಮಲ್ಹಾರ್' ಸಂಗೀತ ಉತ್ಸವ ನಡೆಸುತ್ತಿದೆ. ಈ ವರ್ಷದ ಉತ್ಸವ ಇಂದು (ಸೆ.1, ರವಿವಾರ) ಸಂಜೆ 6 ಗಂಟೆಗೆ ಬೆಂಗಳೂರು ಜಯನಗರ 8ನೇ ಬ್ಲಾಕ್ನಲ್ಲಿರುವ ಜೆ.ಎಸ್.ಎಸ್ ಸಭಾಂಗಣದಲ್ಲಿ ನಡೆಯಲಿದೆ. 'ಮಿಯಾ ಮಲ್ಹಾರ್' ಪಂ. ಭೀಮಸೇನ ಜೋಶಿಯವರ ಅತ್ಯಂತ ಪ್ರೀತಿಯ ರಾಗವಾಗಿದ್ದು, ಆ ನೆನಪಿಗಾಗಿ ಇದನ್ನು 'ಮಲ್ಹಾರ್' ಎಂದು ಹೆಸರಿಸಲಾಗಿದೆ. ಎಲ್ಲ ಕಲಾವಿದರು ವರ್ಷ ಋತುವಿನ ವರ್ಣನೆ ಉಳ್ಳ ರಾಗಗಳನ್ನೇ ಪ್ರಸ್ತುತಪಡಿಸುವದು ಈ ಕಾರ್ಯಕ್ರಮದ ವಿಶೇಷ.
ಮೊದಲು ದೇಶದ ಪ್ರಸಿದ್ಧ ಗಾಯಕಿ ಪುಣೆಯ ಆರತಿ ಅಂಕಾಲಿಕರ್ ಅವರ ಗಾಯನ. ಹಿಂದುಸ್ತಾನಿ ಸಂಗೀತ ಕ್ಷೇತ್ರದ ಮಹತ್ವದ ಗಾಯಕಿಯರಲ್ಲಿ ಅವರು ಒಬ್ಬರು. ಆಗ್ರಾ ಹಾಗೂ ಗ್ವಾಲಿಯರ್- ಅತ್ರೋಲಿ ಘರಾಣೆಯಲ್ಲಿ ಪಳಗಿ ಜಗತ್ತಿನಾದ್ಯಂತ ಹೆಸರು ಗಳಿಸಿದ್ದಾರೆ. ಅವರ ಕಂಠದ ಶ್ರೀಮಂತಿಕೆ ಹಾಗೂ ಗಾಯನದ ಶೈಲಿ ಸಂಗೀತ ರಸಿಕರಿಗೆ ರಸದೌತಣ. ನಂತರ ಪ್ರಸಿದ್ಧ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರ ಸಿತಾರ್ ವಾದನ. ಉಸ್ತಾದ್ ರಫೀಕ್ ಖಾನ್ ಸಿತಾರ್ ಎಂದರೆ ಅದೊಂದು ಸ್ವರಯಾನ. ತಮ್ಮ ಸೂಕ್ಷ್ಮ, ಭಾವಭರಿತ ನುಡಿಸುವಿಕೆಗೆ ಹೆಸರಾದ ಉಸ್ತಾಗ್ವಾಲಿಯರ್ ಘರಾಣೆಗೆ ಸೇರಿದವವರು. ದೇಶಾದ್ಯಂತ ತಮ್ಮ ಕೈಚಳಕ ಹಾಗೂ ವಿದ್ವತ್ಪೂರ್ಣ ನುಡಿಸುವಿಕೆಗೆ ಹೆಸರಾಗಿದ್ದಾರೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಹೆಚ್ಚಿನ ಮಾಹಿತಿಗೆ: 9900207292.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.