ಸಾಪ್ತಾಹಿಕಪ್ರಭ

ಕಿವಿಗಳಿಗೂ ರೆಪ್ಪೆ ಇದ್ದಿದ್ದರೆ?

    ಉಜ್ಜನಿ ಜಲೇಂದ್ರ, ಪಾಂಡವಪುರ
= ಕಿವಿಗಳಿಗೂ ರೆಪ್ಪೆ ಇದ್ದಿದ್ದರೆ?
    -ಕಣ್ಣು ಹೊಡೆಯುವುದರ ಜತೆಗೆ ಕಿವಿಯನ್ನೂ ಹೊಡೆಯುತ್ತಿದ್ದರು!

    ವಿಷ್ಣು ಶಂಕರ್, ಶಿವಮೊಗ್ಗ
= ಯಡ್ಡಿ ಮತ್ತು ಈಶ್ವರಿ ಒಂದೇ ನಾಣ್ಯದ ಎರಡು ಮುಖಗಳಂತೆ ಹೌದಾ?
    -'ಸವಕಲು ನಾಣ್ಯ'ದ ಎರಡು ಮುಖಗಳು!

    ಕೆ.ಎನ್. ನಾರಾಯಣರೆಡ್ಡಿ, ಕೆಜಿಎಫ್
= ಪ್ರೀತಿಸಿ ಮದುವೆಯಾದವಳು ಮನದನ್ನೆ, ಆದರೆ ವರದಕ್ಷಿಣೆ ಕೊಟ್ಟು ಮದುವೆಯಾದವಳು?
    -'ಮನಿ'ದನ್ನೆ!

    ಕೆ.ಎಂ. ಲಿಂಗರಾಜು, ನಂಜನಗೂಡು
= ದೇಶದ ರಾಜಧಾನಿ ಅತ್ಯಾಚಾರಿಗಳಿಂದ ಕುಪ್ರಸಿದ್ಧವಾದರೆ ರಾಜ್ಯದ ರಾಜಧಾನಿ ಬೆಂಗಳೂರು?
    -ಭ್ರಷ್ಟಾಚಾರಿಗಳಿಂದ ಕುಪ್ರಸಿದ್ಧ!

    ಫ್ಯಾಷನ್ ಡಿಸೈನರ್ ಮಧು, ಹಾಸನ
= ಯಡಿಯೂರಪ್ಪನವರಿಗೆ ಇದು ವಂಸತ ಕಾಲವೋ, ವಿನಾಶಕಾಲವೋ
    -ಅವರೀಗ 'ರಾಹು'ಲ್ ಕಾಲವನ್ನು ನಂಬಿಕೊಂಡಿದ್ದಾರೆ!

    ರವಿಕುಮಾರ್ ಜಿ.ಬಿ., ಬೆಂಗಳೂರು
= ಯಡಿಯೂರಪ್ಪ ನಮ್ಮ ನಾಯಕ ಎನ್ನುತ್ತಿದ್ದ ರೇಣುಕಾಚಾರ್ಯ ಈಗ ಏಕೆ ಮಾತು ಬದಲಾಯಿಸುತ್ತಿದ್ದಾರೆ?
    -ಅವರಿಗೆ ನಾಯಕನಿಗಿಂತ ತಮ್ಮ 'ಕಾಯಕ' ಮುಖ್ಯ!



    ವಿ. ಹೇಮಂತ್‌ಕುಮಾರ್, ಬೆಂಗಳೂರು
= ನರಿ ಕಂಡರೆ ಅದೃಷ್ಟ ಎನ್ನುವ ನಾವು ಮನೆಯಲ್ಲಿ ನರಿಯನ್ನೇಕೆ ಸಾಕುವುದಿಲ್ಲ?
    -ಅವಾಗ ಅದು 'ಆರ್ಡಿನರಿ' ಆಗುತ್ತಲ್ಲ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ