ಫಂಟಾ: ನನ್ನ ಹೆಂಡ್ತಿ ನಿನ್ನೆ ಸತ್ತು ಹೋದಳು. ಎಷ್ಟು ಪ್ರಯತ್ನಿಸಿದರೂ ಅಳು ಬರುತ್ತಿಲ್ಲ. ಅಳು ಬರಲು ಏನು ಮಾಡ್ಬೇಕು?
ಕೋಲ್ಯ: ಸಿಂಪಲ್, ಸಾಯದೆ ಅವಳು ವಾಪಸ್ ಬಂದಿದ್ದಾಳೆ ಅಂತ ಕಲ್ಪನೆ ಮಾಡ್ಕೋ.
ಕೋಲ್ಯ: ಸರ್, ಒಂದು ಪ್ರಶ್ನೆಗೆ ನಿಮ್ಮ ಫೀಜ್ ಎಷ್ಟು?
ಜ್ಯೋತಿಷಿ: 3 ಪ್ರಶ್ನೆಗೆ 5,000 ರುಪಾಯಿ.
ಕೋಲ್ಯ: ತುಂಬಾ ದುಬಾರಿ ಆಯ್ತಲ್ವಾ?
ಜ್ಯೋತಿಷಿ: ನೆಕ್ಸ್ಟ್, ಮೂರನೇ ಪ್ರಶ್ನೆ ಏನು?
ಕೋಲ್ಯ: ನಿನ್ನ ಪೆನ್ನಲ್ಲಿ ಇಂಕೇ ಇಲ್ಲಾ...!
ಹುಡುಗಿ: ಏನ್ ಕಣ್ಣು ಕಾಣಲ್ವಾ?
ಕೋಲ್ಯ: ಮತ್ತೆ ನಿನ್ನ ಮೊಬೈಲ್ ನಂಬರ್ ಬರೆದು ತೋರ್ಸು ನೋಡೋಣ...
ಹುಡುಗಿ: ನನ್ನ ಸ್ಟ್ಯಾಂಪ್‌ಸೈಜ್ ಫೋಟೋ ಬೇಕು. ಸ್ಪೆಷಲ್ಲಾಗಿ ತೆಗೀತೀರಾ?
ಕೋಲ್ಯ: ಓ ಖಂಡಿತಾ, ತಲೆಯಿಂದ ಚಪ್ಪಲ್ ವರೆಗೂ ಕವರ್ ಮಾಡ್ತೀನಿ! <
ಗರ್ಲ್‌ಫ್ರೆಂಡ್: ಕುಡಿದು ಗಾಡಿ ಓಡಿಸ್ಬೇಡ, ಆ್ಯಕ್ಸಿಡೆಂಟ್ ಆಗುತ್ತೆ.
ಕೋಲ್ಯ: ಥ್ಯಾಂಕ್ಸ್ ಬೇಬಿ, ನನ್ನ ಮೇಲೆ ನಿನಗೆ ತುಂಬಾ ಕಾಳಜಿ- ಪ್ರೀತಿ ಇದೆ. ಆದ್ರೆ, ಇದನ್ನು ನಿನ್ನ ಅಪ್ಪನ ಹತ್ತಿರ ಹೇಳ್ಬೇಡ ಪ್ಲೀಸ್...
ಕೋಲ್ಯ ಇಂಟರ್‌ವ್ಯೂಗೆ ಸಕಲ ರೀತಿಯಿಂದ ಸಜ್ಜಾಗಿ ಹೋಗಿದ್ದ.
ಕೋಲ್ಯ: ಸಾರ್, ನಾನು ಒಳಗೆ ಬರ್ಲಾ?
ಸಂದರ್ಶಕ: plz, wait.
ಕೋಲ್ಯ: ಜಸ್ಟ್ 60 ಕೆ.ಜಿ. ಸಾರ್...