ಸಾಪ್ತಾಹಿಕಪ್ರಭ

ನದಿ ಮತ್ತು ಸರೋವರ

ಅದೊಂದು ದಟ್ಟವಾದ ಅರಣ್ಯ. ಅರಣ್ಯದ ಅಂಚಿನಲ್ಲಿ ಎತ್ತರವಾದ ಪರ್ವತ. ಪರ್ವತದ ಮೇಲಿಂದ ರಭಸವಾಗಿ ಇಳಿಯುವ ಸಿಹಿನೀರಿನ ಝರಿ.
ಭೂಮಿಗೆ ಇಳಿದ ಝರಿ ನದಿಯ ರೂಪ ತಾಳಿ ಅರಣ್ಯದ ಮಧ್ಯದಿಂದ ಹರಿದು ಸಾಗರವನ್ನು ಸೇರುವ ತವಕದಿಂದ ಹೊರಟಿತ್ತು. ಮಾರ್ಗಮಧ್ಯದಲ್ಲಿ ಅದು ಚಿಕ್ಕ ಸರೋವರವೊಂದನ್ನು ಸಂಧಿಸಿತು.
ಸರೋವರದಲ್ಲಿ ಈಜುವ ಹಂಸ ಪಕ್ಷಿಗಳು ಹಾಗೂ ದಟ್ಟವಾಗಿ ತುಂಬಿರುವ ಕಮಲ ಪುಷ್ಪಗಳು, ಸುತ್ತಲಿನ ಪರಿಸರ ಅದರ ಅಂದವನ್ನು ಹೆಚ್ಚಿಸಿದ್ದವು.
ಸರೋವರವನ್ನು ಕಂಡ ನದಿ ಅದನ್ನು ಕುರಿತು ಹೀಗೆ ಪ್ರಶ್ನಿಸಿತು, 'ಸೋದರನೇ ನಡೆ, ನಾವಿಬ್ಬರೂ ನಡೆದು ನಮ್ಮ ಮೂಲ ಸ್ಥಳವಾದ ಸಾಗರವನ್ನು ಸೇರೋಣ.'
'ನಿನ್ನ ಕೋರಿಕೆಯೇನೋ ಸರಿ. ಆದರೆ, ನೋಡು, ಈ ಸುತ್ತಮುತ್ತಲಿನ ಸುಂದರ ಪರಿಸರ, ಹಂಸ, ಕಮಲ ಈ ಎಲ್ಲ ವೈಭವಗಳನ್ನು ಬಿಟ್ಟು ಬರಲು ನನಗೆ ಮನಸಾಗುತ್ತಿಲ್ಲ. ನಾನಿಲ್ಲೇ ಇರುವೆ' ಸರೋವರ ಉತ್ತರಿಸಿತು.
ನದಿಯು ಮುಗುಳ್ನಕ್ಕು ಮುಂದೆ ಸಾಗಿ ಸಾಗರವನ್ನು ಸೇರಿತು. ಹೀಗೆಯೇ ಕೆಲ ದಿನ ಕಳೆದು ಬೇಸಿಗೆಯು ಬಂದಿತು.
ಬಿಸಿಲಿನ ತಾಪಕ್ಕೆ ಸರೋವರದ ನೀರು ಬತ್ತಿತು. ಹಂಸಗಳು ಅದನ್ನು ತೊರೆದವು. ಕಮಲಗಳು ಬಾಡಿದವು. ಸುತ್ತಲಿನ ಪರಿಸರ ಕಳೆಗುಂದಿತು.
ಹತ್ತಿರದಲ್ಲಿಯೇ ಹರಿಯುತ್ತಿದ್ದ ನದಿ ಬತ್ತುತ್ತಿರುವ ಸರೋವರವನ್ನು 'ಹೀಗೇಕೆ ಕಳೆಗುಂದಿರುವೆ?' ಎಂದಿತು.
ಅದಕ್ಕೆ ಸರೋವರ 'ನಿನ್ನ ಮಾತು ಕೇಳಿ ನಿನ್ನೊಡಗೂಡಿ ಬರಲಿಲ್ಲ. ಅದಕ್ಕೆ' ಎಂದು ಪಶ್ಚಾತ್ತಾಪದಿಂದ ನುಡಿಯಿತು.
ಆಗ ನದಿಯು ಸರೋವರವನ್ನು ಸಮಾಧಾನಪಡಿಸುತ್ತಾ, 'ಆದದ್ದಾಯಿತು, ಇನ್ನುಮೇಲಾದರೂ ನೀನು ಒಳಿತನ್ನು ಯೋಚಿಸಿ ನಡೆ' ಎಂದಿತು.

-ಗುರುರಾಜ ಬೆಣಕಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ