ಸಾಪ್ತಾಹಿಕಪ್ರಭ

ಐನ್‌ಸ್ಟೈನ್ ಕಥೆಗಳು

ಒಮ್ಮೆ ಐನ್‌ಸ್ಟೈನ್ ಸಂಚಾರ ಭಾಷಣಮಾಲೆಯಲ್ಲಿ ಭಾಗವಹಿಸಿದ್ದರು. ಅವರು ಬೇರೆ ಬೇರೆ ಕಡೆ ಭಾಷಣ ಕೊಡಬೇಕಾಗಿತ್ತು. ಅವರು ಒಬ್ಬ ಡ್ರೈವರನನ್ನು ನೇಮಿಸಿಕೊಂಡಿದ್ದರು. ಆ ಡ್ರೈವರ್ ಐನ್‌ಸ್ಟೈನ್ ಭಾಷಣ ಕೊಡುವಾಗ ಅವರ ಸಭೆಯಲ್ಲಿ ಕುಳಿತು ಅವರ ಭಾಷಣವನ್ನು ಆಸಕ್ತಿಯಿಂದ ಆಲಿಸುತ್ತಿದ್ದ. ವಿಜ್ಞಾನಿಯ ಭಾಷಣವನ್ನು ವಿವಿಧ ಸಭೆಗಳಲ್ಲಿ ಅನೇಕ ಬಾರಿ ಕೇಳಿದ ಅನಂತರ ತಾನೂ ಅದೇ ಭಾಷಣವನ್ನು ಕೊಡಬಲ್ಲನೆಂಬ ಧೈರ್ಯ ಆ ಡ್ರೈವರ್‌ನ ಮನದಲ್ಲಿ ಮೂಡಿತು. ಒಂದು ಸಭೆ ಮುಗಿಸಿ ಮುಂಚಿನ ಸಭೆಗೆ ಐನ್‌ಸ್ಟೈನ್ ಕಾರಿನಲ್ಲಿ ಪಯಣಿಸುತ್ತಿದ್ದಾಗ ಡ್ರೈವರ್ ತನ್ನ ಮನದ ಆಸೆ ತಿಳಿಸಿದ. ಮುಂದಿನ ಊರು ತಲುಪುವ ಮೊದಲು ನಾವಿಬ್ಬರೂ ಸ್ಥಾನ ಬದಲಾಯಿಸಿಕೊಳ್ಳೋಣವೆಂದು ಐನ್‌ಸ್ಟೈನ್ ಸೂಚಿಸಿದರು. ಅನಂತರ ವಿಜ್ಞಾನಿ ಡ್ರೈವರ್‌ನ ಉಡುಗೆ ಧರಿಸಿಕೊಂಡರು. ಡ್ರೈವರ್ ಅವರ ಸ್ಥಾನದಲ್ಲಿ ಕುಳಿತುಕೊಂಡ.

ಆ ಸಭೆಯಲ್ಲಿ 'ಹೊಸ ವಿಜ್ಞಾನಿ' ದೋಷರಹಿತ ಭಾಷಣವನ್ನು ಕೊಟ್ಟು ಸಭಿಕರ ಕರತಾಡನ ಪಡೆದ. ಕೆಲವರ ಪ್ರಶ್ನೆಗಳಿಗೆ ಉತ್ತರವನ್ನೂ ಕೊಟ್ಟ. ಆದರೆ ಡ್ರೈವರ್‌ಗೆ ಒಬ್ಬ ವಿಜ್ಞಾನಿಯ ಒಂದು ಕಠಿಣ ಪ್ರಶ್ನೆಗೆ ಉತ್ತರ ಗೊತ್ತಾಗಲಿಲ್ಲ. ಅವನು ಸಮಯ ಪ್ರಜ್ಞೆಯಿಂದ, 'ನಿಮ್ಮ ಪ್ರಶ್ನೆ ಅತ್ಯಂತ ಸರಳ. ನನಗೆ ಉತ್ತರ ಗೊತ್ತಿದೆ" ಎಂದು ಹೇಳಿ, ಡ್ರೈವರ್ ವೇಷದಲ್ಲಿ ಕುಳಿತಿದ್ದ ಐನ್‌ಸ್ಟೈನ್‌ರತ್ತ ತಿರುಗಿ, 'ಇವರ ಪ್ರಶ್ನೆಗೆ ಉತ್ತರ ಕೊಡಿ' ಎಂದ. ಐನ್‌ಸ್ಟೈನ್ ಆ ಕಠಿಣ ಪ್ರಶ್ನೆಗೆ ಉತ್ತರಿಸಿದರು.
------------
ಬಹುಮಂದಿ ನಾರಿಯರಂತೆ ಐನ್‌ಸ್ಟೈನ್‌ರ ಪತ್ನಿಯೂ ತಮ್ಮ ಪತಿ ಕೆಲಸಕ್ಕೆ ಹೋಗುವಾಗ ಉತ್ತಮ ಉಡುಗೆ ಧರಿಸಬೇಕೆಂದು ಅಪೇಕ್ಷಿಸುತ್ತಿದ್ದಳು. ಆದರೆ, ಐನ್‌ಸ್ಟೈನ್ ಉಡುಗೆ- ತೊಡುಗೆ ಬಗ್ಗೆ ಚಿಂತಿಸುತ್ತಿರಲಿಲ್ಲ. ಪತ್ನಿ 'ನೀವು ಈ ಬಟ್ಟೆ ಹಾಕ್ಕೊಂಡು ಕೆಲಸಕ್ಕೆ ಹೋಗಬೇಡಿ, ಬೇರೆ ಬಟ್ಟೆ ಧರಿಸಿ' ಎಂದಾಗಲೆಲ್ಲಾ ಐನ್‌ಸ್ಟೈನ್, 'ಅಲ್ಲಿ ಎಲ್ಲರೂ ನನ್ನನ್ನು ಬಲ್ಲರು. ಈ ಬಟ್ಟೆಗಳೇ ಸಾಕು' ಎನ್ನುತ್ತಿದ್ದರು. ಒಂದು ದಿನ ಅವರು ಒಂದು ದೊಡ್ಡ ಸಭೆಯಲ್ಲಿ ಭಾಗವಹಿಸಬೇಕಿತ್ತು. ಅಂದೂ ಸಾಧಾರಣ ಉಡುಗೆ ಧರಿಸಿರುವುದನ್ನು ಕಂಡ ಪತ್ನಿ, ಉತ್ತಮ ವಸ್ತ್ರ ಧರಿಸುವಂತೆ ಬೇಡಿಕೊಂಡಳು. "ಇಂದೇಕೆ ನಾನು ಉತ್ತಮ ಉಡುಗೆ ಧರಿಸಬೇಕು? ಇಂದಿನ ಸಭೆಯಲ್ಲಿ ನನ್ನನ್ನು ಯಾರೂ ಅರಿಯರು. ನಾನು ಅವರಿಗೆ ಅಪರಿಚಿತ, ಆದುದರಿಂದ ಈ ಬಟ್ಟೆಗಳು ಸಾಕು' ಎಂದುಬಿಟ್ಟರು.

-  ಪಿ.ವಿ. ರಾಮಚಂದ್ರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ