ಫ್ಯಾಷನ್ ಡಿಸೈನರ್ ಮಧು, ಹಾಸನ
ನಾನು ಬೆಳ್ಳಗಿದ್ದರೂ ಅವಳು 'ಕರಿಯ ಐ ಲವ್ ಯೂ' ಅಂತಾಳಲ್ಲ?
-ಇನ್ಮೇಲೆ ಬ್ಲ್ಯಾಕ್ ಕಲರ್ ಬಟ್ಟೆನೇ ಡಿಸೈನ್ ಮಾಡಿ ಹಾಕ್ಕೊಳ್ಳಿ!
ಉಜ್ಜನಿ ಜಲೇಂದ್ರ, ಪಾಂಡವಪುರ
ಡಬಲ್ ಸಿಮ್ ಹೊಂದಿದವರಿಗೂ, ಡಬ್ಬಲ್ ಹೆಂಡತಿಯರನ್ನು ಹೊಂದಿದವರಿಗೂ ಏನು ವ್ಯತ್ಯಾಸ?
-ಡಬಲ್ ಸಿಮ್ ಒಂದೇ ಮೊಬೈಲ್‌ನಲ್ಲಿರುತ್ತೆ, ಡಬಲ್ ಹೆಂಡತಿಯರು ಒಂದೇ ಮನೇಲಿರೋಕ್ಕಾಗೋಲ್ಲ!
ವಿ. ಹೇಮಂತಕುಮಾರ್, ಬೆಂಗಳೂರು
ನರಿ, ಹಂದಿ, ಕತ್ತೆಗಳನ್ನೇಕೆ ಚುನಾವಣಾ ಚೆನ್ಹೆಯಾಗಿ ಬಳಸುವುದಿಲ್ಲ?
- ಅವರೇ ಚುನಾವಣೆಗೆ ನಿಂತಿರ್ತಾರಲ್ಲ!
ರವಿಕಮಾರ್ ಜಿ.ಬಿ., ಬೆಂಗಳೂರು
ತಮಿಳುನಾಡಿಗೆ ನಮ್ಮ ಸರ್ಕಾರ ಕಾವೇರಿ ನೀರು ಕೊಡ್ತು, ಅಕ್ಕಿನೂ ಕೊಡ್ತು, ಮುಂದೆ ಏನು ಕೊಡುತ್ತೆ?
-ಅನ್ನ ಬೇಯಿಸಲು ಗ್ಯಾಸ್ ಕೊಡಬಹುದು!
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
ನಗುವಿಗೆ ಮುಪ್ಪು ಬರುವಂತಿದ್ದರೆ?
-ಮುಪ್ಪಾದವರೆಲ್ಲ ನಗುತ್ತಲೇ ಇರಲಿಲ್ಲ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಮನೆಕಟ್ಟಲು ಗುದ್ದಲಿಪೂಜೆ, ಮದುವೆ ಮಾಡಲು?
-ಮೊದಲು 'ವರಪೂಜೆ', ಮದುವೆ ನಂತರ ಹೆಂಡತಿಯಿಂದ 'ಮಂಗಳಾರತಿ'!
ಬರ್ಕ್‌ಲಿ ರಮೇಶ್ ಕಿರಗಂದೂರು, ಮಂಡ್ಯ
ತಾಯಿ ತಂದೆ ಮೊದಲ ಗುರುಗಳಾದರೆ, ಹೆಂಡತಿ?
-ಟ್ಯೂಷನ್ ಟೀಚರ್!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಕುಡುಕರೇಕೆ ಕುಡಿದಾಗಲೇ ಸತ್ಯ ಹೇಳ್ತಾರೆ?
-ಅವರು ಆ 'ಬ್ರ್ಯಾಂಡ್'ನ ಅಂಬಾಸಿಡರ್ ಆಗಿರ್ತಾರೆ!
-ಘಾಟಿ