ರಕ್ತದಾನ
ಮನುಷ್ಯರು ಮತ್ತು ಸೊಳ್ಳೆಗಳು ಇರುವೆಡೆ ನಡೆಯುವ ಶಿಬಿರ.
ಗುರುತ್ವಾಕರ್ಷಣೆ
ಯಾವತ್ತೂ ನಮ್ಮನ್ನು ಕೆಳಗೇ ಇರುವಂತೆ ನೋಡಿಕೊಳ್ಳುವ ಶಕ್ತಿ.
ಬಾಕ್ಸಿಂಗ್
ಮನಮೋಹನ ಸಿಂಗ್‌ಗೆ ಇದು ಗೊತ್ತಿಲ್ಲದ ಆಟ.
ಮೊಳೆ
ಭಾಷಣಕಾರನ ಮಾತುಗಳು.
ಪೇಪರ್
'ಪೇ' ಮಾಡಿ ತೆಗೆದುಕೊಳ್ಳಬೇಕಾದ ಕಾಗದ.
ಮಾತು
ಮೊಬೈಲು ಕಂಪನಿಗಳ ಹೊಟ್ಟೆ ಇದರಿಂದಲೇ ತುಂಬುತ್ತೆ.
ಅತ್ಯಾಚಾರ
ಅತಿ ಆಚಾರ ನಡೆಸುವವರಿಗೂ ಸಲ್ಲುವ ಆರೋಪ.
ಕಾಗೆ
ಭೂಮಿ ಮೇಲಿನ ಪ್ರಾಚೀನ 'ಗೇ'ಗಳು.