ದೊಡ್ಡ ನಗರವೊಂದರ
ಬೆಡ್‌ರೂಮಿನಲ್ಲಿ
ಕುರ್ಚಿಗಳೆರಡು
ಎಷ್ಟೋ ಕಾಲದಿಂದ
ಬಿದ್ದಿವೆ ಎದಿರು- ಬದಿರು
ಒಂದು ಮತ್ತೊಂದನ್ನು ನೋಡುತ್ತಾ
ಮಾತನಾಡುತ್ತಾ-
ಅವುಗಳ ಬಳಿ ಬಂದು
ನಿಂತರೆ ಯಾರಾದರೂ
ಖುಷಿಯಿಂದ
ಅವುಗಳ ಬಾಹುಗಳು
ಅರಳುತ್ತವೆ
ಆದರೆ
ಅವುಗಳ ಈ ಖುಷಿ
ಇರಲಾರದು
ಹೆಚ್ಚು ಹೊತ್ತು
ಬೆಡ್‌ರೂಮಿನಲ್ಲಿ
ಷೋಕಿಯಿಂದ ಮಾಡಿಸಿದ
ಮಂಚಗಳ ಮೇಲೆ
ವಾರದಿಂದ
ಹಾಸಿದ ರಗ್ಗಿನ ಮೇಲೆ
ಕೆಲವು ವಿಶೇಷ ಸುಕ್ಕುಗಳು
ಸಹ ಮೂಡಿಲ್ಲ-
ಹೀಗೆ
ಎರಡು ದಿಂಬುಗಳು
ಬಿದ್ದಿವೆ
ದೂರ, ದೂರ
ರಜಾಯಿಗಳೂ ಹಳತಾಗಿವೆ
ಹರಿದೂ ಹೋಗಿವೆ
ಅಲ್ಲಲ್ಲಿ
ಅವುಗಳಲ್ಲಿ
ಈಗ
'ಆ'
ಬೆಚ್ಚನೆ ಇಲ್ಲ
ಮೃದುತ್ವವೂ ಇಲ್ಲ.
- ಮೂಲ: ಮೋಹನ್ ಹಿಮಥಾಣಿ
- ಕನ್ನಡಕ್ಕೆ: ಡಿ.ಎನ್. ಶ್ರೀನಾಥ್