ಒಂದೇಟು
ಹೆಚ್ಚು ಮಲಗಬೇಡ ಅಂತ ನೀವು ವೇಶ್ಯೆಗೆ ಹೇಳಲಾಗುವುದಿಲ್ಲ.
- ಟ್ರಾವೆಲ್ ಏಜೆಂಟೊಬ್ಬ ಹೇಳಿದ, 'ಸರ್, ಕೇವಲ ಆರೇ ಸಾವಿರ ರುಪಾಯಿಗೆ ಅಂಡಮಾನ್ನಲ್ಲಿ 5 ನೈಟ್ ಕಳೀಬಹುದು' ಎಂದ. ರಾತ್ರಿ ಎಂಥ ಅಂಡಮಾನ್ ನೋಡೋದು ಅಂತ ನಾನು ಒಪ್ಲಿಲ್ಲ!.
- ನಾನು ನಿನಗೋಸ್ಕರ ಎರಡು ಮೈಲಿ ಎಕ್ಸ್ಟ್ರಾ ನಡೆದೆ. ಯಾಕೆ ವಿಳಾಸವನ್ನ ಕನ್ಫ್ಯೂಸ್ ಮಾಡ್ಕೊಂಡೆ ಅಂತ ಗೊತ್ತಾಗ್ತಿಲ್ಲ.
- ಮದ್ವೆಯಾದ ಹೊಸತರಲ್ಲಿ ನಾನೊಮ್ಮೆ ಕನಸನ್ನು ಹಿಂಬಾಲಿಸಿ ನಡೆದೆ. ಹೆಂಡತಿಗೆ ಎಚ್ಚರವಾಗಿ, 'ಬೆತ್ತಲೆಯಾಗಿ ಎಲ್ಲಿಗೆ ಹೊರಟ್ರಿ?' ಅಂದಳು!
- ಮದ್ವೆ ದಿನವೇ ನನ್ನಾಕೆ ಕೇಳಿದಳು, 'ನಿನ್ನ ಕೊನೆ ಆಸೆ ಏನು?'
- ಮದ್ವೆಯಾದ ಎಲ್ಲ ವ್ಯಕ್ತಿಗಳು ಸತ್ತ ಮೇಲೆ 'ಸ್ವರ್ಗ ಪ್ರಾಪ್ತಿಯಾಯ್ತು' ಅಂತ ಅಂದುಕೊಳ್ತಾರೆ.
- ನೀವು ತಪ್ಪುಗಳಿಂದ ಪಾಠ ಕಲಿತದ್ದೇ ಆಗಿದ್ದಿದ್ರೆ ಇಷ್ಟೊತ್ತಿಗೆ ಸರ್ವಜ್ಞ ಆಗ್ತಿದ್ರಿ.
- ಹುಡುಗಿಯನ್ನು ಹಿಡೀಬೇಕು ಅಂತನ್ಸುತ್ತೆ, ಬಸ್ಸನ್ನೂ ಹಿಡೀಬೇಕು ಅಂತನ್ಸುತ್ತೆ. ಒಂದು ಪ್ರಯಾಸ. ಮತ್ತೊಂದು ಪ್ರಯಾಣ.