ಸೋಮು, ಚಿಕ್ಕಲ್ಲಸಂದ್ರ
ಗಾಂಧೀಜಿ, ಬುದ್ಧ, ಅಂಬೇಡ್ಕರ್, ಮಹಾವೀರ, ಜೀಸಸ್ ಇವರ ನಡುವಿನ ಕಾಮನ್ ಹೋಲಿಕೆ ಏನು?
-ಇವರೆಲ್ಲರನ್ನೂ ವಿಗ್ರಹಗಳನ್ನಾಗಿ ಮಾಡಿ ಎಲ್ಲಾ ಕಡೆ ನಿಲ್ಲಿಸಿದ್ದಾರೆ!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
ಜನರ ತೀರ್ಥಯಾತ್ರೆಗೂ ರಾಜಕಾರಣಿಗಳ ಪಾದಯಾತ್ರೆಗೂ ವ್ಯತ್ಯಾಸವೇನು?
-ತೀರ್ಥಯಾತ್ರೆ ಪುಣ್ಯಕ್ಷೇತ್ರಗಳಿಗೆ ಮಾಡ್ತಾರೆ, ಪಾದಯಾತ್ರೆ ತಮ್ಮತಮ್ಮ ಮತಕ್ಷೇತ್ರಗಳಲ್ಲಿ ಮಾಡ್ತಾರೆ!
ಓಂ. ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
= ಇಲ್ಲೊಂದು ನಾಯಿ ಬಾಲಕ್ಕೆ ವಾರದಿಂದ ದಬ್ಬೆ ಕಟ್ಟಿದ್ರೂ ಬಾಲ ಮಾತ್ರ ನೆಟ್ಟಗಾಗ್ತಾ ಇಲ್ಲ ಸಾರ್?
-ಮೊದಲು ಬಾಲ ನೆಟ್ಟಗೆ ಮಾಡ್ತೀನಿ ಅನ್ನುವ ನಿಮ್ಮ 'ಡೊಂಕು ಬುದ್ಧಿ' ಬಿಡಿ!
ಫ್ಯಾಷನ್ ಡಿಸೈನರ್ ಮಧು, ಹಾಸನ
= ಯಡ್ಡಿ ಕೆಜೆಪಿ ಕಟ್ಟಿದ್ದರ ಹಿಂದೆ ರೇಣುಕಾಚಾರ್ಯರ ಷಡ್ಯಂತ್ರ ಇದೆಯಂತೆ?
-ಅದೂ ಆಡಳಿತ ಯಂತ್ರದಲ್ಲಿ ಕುಳಿತೇ ಈ ಷಡ್ಯಂತ್ರ ಮಾಡಿದ್ರಲ್ಲ!
ಸ್ವಾಮಿ ನಿರ್ಮಲಾ, ಉಡಿಗಾಲ
= ಮಠ ಮಂದಿರಗಳಿಗೆ ಹಣದ ಹೊಳೆ ಹರಿಸಿದ ಶೆಟ್ಟರ್‌ಗೆ ಏನು ಬಿರುದು ಕೊಡಬಹುದು ಗುರು?
-'ಕೊಡುಗೈ ನಿದಾನಿ'
ವಿ. ಹೇಮಂತ್‌ಕುಮಾರ್, ಬೆಂಗಳೂರು
ಚಿಲ್ಲರೆ ಹಣಕ್ಕೂ ಚಿಲ್ಲರೆ ಜನಕ್ಕೂ ವ್ಯತ್ಯಾಸವೇನು?
-ಚಿಲ್ಲರೆ ಹಣಕ್ಕೆ ಅಭಾವ ಇರುತ್ತೆ, ಚಿಲ್ಲರೆ ಜನಕ್ಕೆ ಯಾವತ್ತೂ ಅಭಾವ ಇರೋಲ್ಲ!
-ಘಾಟಿ