ಸಾಪ್ತಾಹಿಕಪ್ರಭ

ನೀವು ಕಾನೂನು

ಮರುತನಿಖೆ ಮಾಡಿಸಬಹುದೆ?
ಮಲ್ಲಿಕಾರ್ಜುನ, ಗುಲ್ಬರ್ಗ ಕಾರಾಗೃಹ
ಪ್ರ: ನಾನು, ನನ್ನ ತಂದೆ ತಾಯಿ ಮತ್ತಿತರರು ಒಟ್ಟು ಎಂಟು ಜನರು ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದೇವೆ. ಆದರೆ ಇದು ಸುಳ್ಳು ಕೇಸಾಗಿದ್ದು, ನಾವೆಲ್ಲ ನಿರಪರಾಧಿಗಳು. ತನಿಖಾಧಿಕಾರಿಗಳು ಸರಿಯಾಗಿ ತನಿಖೆ ನಡೆಸದೆ ನಿಜವಾದ ಅಪರಾಧಿಗಳನ್ನು ಬಿಟ್ಟು ನಮ್ಮ ಮೇಲೆ ಆರೋಪಪತ್ರ ಸಲ್ಲಿಸಿದರು. ಈಗ ಈ ಪ್ರಕರಣದ ಮರು ತನಿಖೆ ಮಾಡಿಸಲು ಏನು ಮಾಡಬೇಕು?
ಉ: ಸಾಧಾರಣವಾಗಿ ಮರು ತನಿಖೆ ಮಾಡಿಸುವುದು ಬಹಳ ಕಷ್ಟ. ಆದರೂ ಹೈಕೋರ್ಟ್‌ಗೆ ಇದು ಸುಳ್ಳು ಕೇಸು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕೊಟ್ಟರೆ ಅದು ವಿಚಾರಣೆ ನಂತರ ಪುನಃ ತನಿಖೆಗೆ ಆದೇಶಿಸಬಹುದು. ಆದರೆ, ಒಂದು ವಿಷಯ. ಈಗಾಗಲೇ ನೀವು ನಿಮ್ಮ ಸಜಾ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೆ ಅದರ ವಿಚಾರಣೆ ಕಾಲದಲ್ಲಿ ನೀವು ಹೊಂದಿರುವ ಸಾಕ್ಷ್ಯಗಳನ್ನು ಹಾಜರುಪಡಿಸಬಹುದಿತ್ತಲ್ಲ?
ರಜೆ ಇದ್ದರೂ ಗೈರು ಹಾಕಬಹುದೆ?
ವಿಜಯಕುಮಾರ, ಜಮಖಂಡಿ
ಪ್ರ: ಗುತ್ತಿಗೆ ಆಧಾರದ ಮೇಲೆ ಒಂಬತ್ತು ವರ್ಷ ಕೆಲಸ ಮಾಡಿ ಈಗ ಅಕ್ಟೋಬರ್ 2011ರಿಂದ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನಿಯಮಾವಳಿ ಪ್ರಕಾರ ನನಗೆ ಜುಲೈ 2012ರವರೆಗೆ ಎಷ್ಟು ಗಳಿಕೆ ರಜೆ ಇದೆ? ಸಾಂದರ್ಭಿಕ ರಜೆ ಎಷ್ಟು? ಈ ರಜೆಗಳು ಇದ್ದಾಗಲೂ ನಾನು ಕೆಲಸಕ್ಕೆ ಗೈರು ಹಾಜರಾದರೆ ಅದನ್ನು ರಜೆಯೆಂದು ಪರಿಗಣಿಸದೆ ಗೈರು ಎಂದು ನಮೂದಿಸಬಹುದೇ?
ಉ: ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿ ರಜಾ ನಿಯಮ 103ರಂತೆ ಬಿಡುವಿರುವ ಇಲಾಖೆ (ಶಿಕ್ಷಣ ಇಲಾಖೆಯೂ ಸೇರಿದಂತೆ)ಯಲ್ಲಿ ನೌಕರರಿಗೆ ಪ್ರತಿ ಅರ್ಧ ವರ್ಷಕ್ಕೆ ಐದು ದಿನ ಗಳಿಕೆ ರಜೆ ಸಿಗುತ್ತದೆ. ಕೆಲಸಕ್ಕೆ ಸೇರಿದ ವರ್ಷ ಮಾತ್ರ ಪ್ರತಿ ಪೂರ್ಣಗೊಂಡ ತಿಂಗಳು ಸೇವೆಗೆ 5/6 ರಂತೆ ಗಳಿಕೆ ರಜೆ ಲೆಕ್ಕ ಹಾಕಬೇಕು. ಇನ್ನು ಸಾಂದರ್ಭಿಕ ರಜೆ ವಿಚಾರ. ಸಾಂದರ್ಭಿಕ ರಜೆ ನಿಯಮ 1ರ ಪ್ರಕಾರದಂತೆ ಒಂದು ವರ್ಷದ ಅವಧಿ ಪೂರ್ಣಗೊಳ್ಳುವವರೆಗೆ ಪ್ರತಿ ಪೂರ್ಣಗೊಂಡ ತಿಂಗಳಿಗೆ ಒಂದು ದಿನ ರಜೆ ಲೆಕ್ಕ ಹಾಕಬೇಕು. ಆದರೆ, ಗಳಿಕೆ ರಜೆಯಾಗಲಿ, ಸಾಂದರ್ಭಿಕ ರಜೆಯಾಗಲಿ ಇಲಾಖೆ ಸೇವೆಯ ಅವಶ್ಯಕತೆಗೆ ಅನುಗುಣವಾಗಿ ರಜೆ ನೀಡಬಹುದು ಅಥವಾ ತಿರಸ್ಕರಿಸಬಹುದು. ರಜೆ ಇದ್ದ ಮಾತ್ರಕ್ಕೆ ಗೈರು ಹಾಜರಿಯನ್ನು ರಜೆ ಎಂದೇ ಪರಿಗಣಿಸಬೇಕಾಗಿಲ್ಲ.

- ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್