ಸಾಪ್ತಾಹಿಕಪ್ರಭ

ದೇವರ ದೃಷ್ಟಿಮಾಂದ್ಯ

ನಗರದ ಎರಡು ಅರೆ ಭಾಗಗಳನ್ನು ಜೋಡಿಸುವ ಸುಂದರವಾದ ಸೇತುವೆಯನ್ನು ನೋಡುತ್ತಾ ನಾನು ಸಿಡ್ನಿಯ ಬಂದರಿನಲ್ಲಿ ನಿಂತಿದ್ದೆ. ಆಗ ಓರ್ವ ಆಸ್ಟ್ರೇಲಿಯನ್ ನನ್ನನ್ನು ಸಮೀಪಿಸಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಜಾಹೀರಾತೊಂದನ್ನು ತೋರಿಸಿ ಅದನ್ನು ಓದಲು ಹೇಳಿದನು.
'ಇದರ ಅಕ್ಷರಗಳು ತುಂಬಾ ಚಿಕ್ಕದಾಗಿವೆ. ಅದರಲ್ಲಿ ಏನು ಬರೆದಿದೆಯೆಂದು ನನಗೆ ಓದಲಾಗುವುದಿಲ್ಲ', ಆತನೆಂದ.
ನಾನು ಅದನ್ನು ಓದಲು ಯತ್ನಿಸಿದೆ. ಆದರೆ ಓದಲು ಬಳಸುವ ನನ್ನ ಕನ್ನಡಕ ಆಗ ನನ್ನ ಹತ್ತಿರವಿರಲಿಲ್ಲ. ನಾನು ಆತನ ಕ್ಷಮಾಪಣೆಯನ್ನು ಕೇಳಿದೆ.
'ಪರವಾಗಿಲ್ಲ, ಬಿಡಿ' ಆತನೆಂದ, 'ನಿಮಗೆ ಒಂದು ವಿಷಯ ಗೊತ್ತೇ? ದೇವರು ಕೂಡಾ ದೃಷ್ಟಿಮಾಂದ್ಯದಿಂದ ಬಳಲುತ್ತಿದ್ದಾನೆಂದು ನನಗನಿಸುತ್ತದೆ. ಕಾರಣ ಅವನು ವೃದ್ಧನಾಗಿರುವುದರಿಂದ ಅಲ್ಲ, ಬದಲು ಹಾಗೆಯೇ ಇರಬೇಕೆಂದು ಅವನು ಬಯಸಿರುವುದರಿಂದ. ಹಾಗಿದ್ದರೆ ಯಾರಾದರೂ ಏನಾದರೂ ತಪ್ಪು ಮಾಡಿದರೆ 'ನನಗೆ ಸರಿಯಾಗಿ ಕಾಣಿಸಲಿಲ್ಲ' ಎಂದವನು ಯಾವಾಗಲೂ ಹೇಳಬಹುದಲ್ಲ ಮತ್ತು ಆತನನ್ನು ಕ್ಷಮಿಸಬಹುದಲ್ಲ! ದೇವರು ಅನ್ಯಾಯವಾಗುವುದನ್ನು ಬಯಸುವುದಿಲ್ಲ.'
'ಮತ್ತು ಯಾರಾದರೂ ಏನಾದರೂ ಒಳ್ಳೆಯದನ್ನು ಮಾಡಿದಾಗ?' ನಾನು ಕೇಳಿದೆ. 'ಓಹ್! ಅದಾ...' ಆಸ್ಟ್ರೇಲಿಯನ್ ನಕ್ಕ ಮತ್ತು ಮುನ್ನಡೆಯುತ್ತ ಹೇಳಿದ- 'ದೇವರು ತನ್ನ ಕನ್ನಡಕವನ್ನು ಎಂದಿಗೂ ಮನೆಯಲ್ಲಿ ಬಿಡುವುದಿಲ್ಲ.' <
- ಪೌಲೋ ಕೊಯೆಲೋ
= ಅನು: ನಂದಿನಿ ಡಿ.ಕಾಮತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ