ಸಾಪ್ತಾಹಿಕಪ್ರಭ

ನೋಡುವ ಕನ್ನಡಿ...

ನಿನ್ನನ್ನು ಪ್ರೀತಿಸಲು ಒಬ್ಬ ಗಂಡಸಿನ ಜೊತೆ ಸ್ನೇಹದಿಂದಿರುವುದು
ಸುಲಭ. ಇರಲಿ ಪ್ರಾಮಾಣಿಕತೆ ನಿನ್ನ ಬೇಕುಗಳ ಬಗ್ಗೆ ಹೆಣ್ಣಿನ ಹಾಗೆ.
ನಿಲ್ಲು ಬೆತ್ತಲಾಗಿ ಅವನ ಜೊತೆ ಕನ್ನಡಿಯ ಮುಂದೆ
ನೋಡುತ್ತಾನೆ ತನ್ನನ್ನು ತಾನೆ, ಶಕ್ತಿವಂತನೆಂದು
ನಂಬುತ್ತಾನೆ ಅದನ್ನೇ ಅವನು, ನಿನ್ನದು ನಾಜೂಕು ಮೈ,
ರೇಶ್ಮೆಯಂತೆ ಮೃದು. ತರುಣಿ ನೀನು, ಕಡು ಚೆಲುವೆ. ಒಪ್ಪಿಕೋ
ನಿನ್ನದೇ ಹೊಗಳಿಕೆಯನ್ನು ನೀನು. ಗಮನಿಸು
ಅವನ ಪರಿಪೂರ್ಣ ಕೈ ಕಾಲುಗಳನ್ನು,
ಅವನ ಕಣ್ಣು ಸಿಂಪಣಿಯ ತುಂತುರು ಹನಿಗೆ
ಕೆಂಪಾಗುವುದನ್ನು, ಸ್ನಾನ ಗೃಹದಲ್ಲಿ ಅವನ ನಾಚಿಕೆಯ ನಡೆದಾಟವನ್ನು
ಸೊಂಟಕ್ಕೆ ಸುತ್ತಿಕೊಂಡ ವಸ್ತ್ರ ಜಾರಿ ಬೀಳುವುದನ್ನು
ಬಿಟ್ಟುಬಿಟ್ಟು ಜಗ್ಗಾಡಿದಂತೆ ಉಚ್ಚೆ ಹೊಯ್ಯುವುದನ್ನು.
ಅವನನ್ನು ಗಂಡಾಗಿಸುವ ಎಲ್ಲ ಹುಚ್ಚು ಆಸೆಯ ವಿವರಗಳನ್ನು
ಮತ್ತು ನಿನ್ನವನೇ ಅದವನನ್ನು. ಕೊಟ್ಟುಬಿಡು ಅವನಿಗೆ
ನಿನ್ನದೆಲ್ಲವನ್ನೂ, ನಿನ್ನನ್ನು ಹೆಣ್ಣಾಗಿಸಿದ ಎಲ್ಲದನ್ನೂ,
ಗುಂಗುರು ಹೆರಳ ಸುಗಂಧವನ್ನು, ಮೊಲೆಗಳ ನಡುವಿನ
ಕಸ್ತೂರಿ ಸುವಾಸನೆಯನ್ನು, ಬೆಚ್ಚನೆ ಮುಟ್ಟಿನ
ರಕ್ತದ ಅಚ್ಚರಿಯನ್ನು, ಕೊನೆಯಿಲ್ಲದ ಹೆಣ್ತನದ ಹಸಿವನ್ನು.

ಪ್ರೀತಿಸಲು ಗಂಡಸೊಬ್ಬನನ್ನು ಹುಡುಕಿಕೊಳ್ಳುವುದು
ನಿನಗೆ ಸುಲಭ. ನಂತರ, ಅವನಿಲ್ಲದ ಬದುಕು
ನಿಜವಾದ ಸವಾಲು, ಅದು ಜೀವಂತಿಕೆಯಿಲ್ಲದ ಬದುಕು.
ಸುಮ್ಮನೆ ತಿರುಗುವಾಗ, ಅಪರಿಚಿತರನ್ನು ಭೇಟಿಯಾದಾಗ,
ನಿನ್ನ ಕಣ್ಣು ಅವರ ಹುಡುಕಾಟ ತಪ್ಪಿಸಿ, ನಿನ್ನ ಕಿವಿ ಅವನ
ದನಿ ನಿನ್ನ ಹೆಸರಿಡಿದು ಕಟ್ಟಕಡೆಗೆ ಕರೆದದ್ದನ್ನು ಮಾತ್ರ
ಕೇಳಿಸಿಕೊಳ್ಳಲಿ. ಹಿಂದೊಮ್ಮೆ ಅವನ ಸ್ಪರ್ಶಕ್ಕೆ ಉಜ್ಜಿತಿಕ್ಕಿ
ಹೊಳೆವ ಹಿತ್ತಾಳೆಯಂತೆ ಮಿನುಗುತಿದ್ದ ನಿನ್ನ ದೇಹ
ಈಗ ಕಣ್ಣು ಸೆಳೆಯದ, ಆಕರ್ಷಣೆಯಿಲ್ಲದ ಜೀವಚ್ಛವ.

= ಕಮಲಾ ದಾಸ್
ಕನ್ನಡಕ್ಕೆ: ಎಂ.ಎಸ್. ರುದ್ರೇಶ್ವರಸ್ವಾಮಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!