ಕೆ.ಬಿ. ಶಿವಕುಮಾರ್, ಕಾಳೀಹುಂಡಿ
= ಒಗಟು ಹೇಳುತ್ತೇನೆ, ಬಿಡಿಸುತ್ತೀಯಾ ಅಂತಾಳಲ್ಲ?
-ಗೂಗಲ್‌ನಲ್ಲಿ ಸರ್ಚ್ ಮಾಡಿ!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
= ನನಗೆ ಆದರ್ಶ ಪತಿ ಅನ್ನಿಸಿಕೊಳ್ಳಬೇಕೆಂಬ ಆಸೆ, ಏನ್ಮಾಡಬೇಕು?
-'ಆದರ್ಶ' ಅಂತ ಹೆಸರಿಟ್ಕೊಳ್ಳಿ !
ಅಕ್ರಂ ಮಹಮೂದ್, ಚಿತ್ರದುರ್ಗ
= ಯಡ್ಡಿ ಸಾಹೇಬ್ರು ಶೆಟ್ಟರ್‌ಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರಾ?, ರೋಲ್‌ಕಾಲ್ ಮಾಡ್ತಿದ್ದಾರಾ?
-ಅವೆಲ್ಲ ಮಾಡಿ ಏನೂ ಆಗದೆ ಈಗ ಬರೀ ಇ-ಮೇಲ್ ಮಾಡ್ತಿದ್ದಾರೆ!
ರವಿಕುಮಾರ್ ಜಿ.ಬಿ., ಬೆಂಗಳೂರು
= ಯಡಿಯೂರಪ್ಪನವರು ಶೆಟ್ಟರ್ ಸರ್ಕಾರಕ್ಕೆ ಬರಿ 'ಡೆಡ್‌ಲೈನ್'ಗಳನ್ನೇ ನೀಡುತ್ತಾರೆ ಏಕೆ?
-ಅವರಿಗೆ ಬೇರೆ 'ಲೈನ್ ಹೊಡೆಯೋಕೆ' ಬರ್ತಿಲ್ಲ!
ಪವನಕುಮಾರ್ ಕೆ.ವಿ., ಬಳ್ಳಾರಿ
= ಪಾದಯಾತ್ರೆ ಮಾಡಬೇಕೆಂದಿರುವೆ, ಎಲ್ಲಿಂದ ಶುರು ಮಾಡಲಿ ಘ್ನಾನಣ್ಣ?
-ಶ್ರೀರಾಮುಲು ಬಿಟ್ಟಲ್ಲಿಂದ, ಕಾಂಗ್ರೆಸ್‌ನೋರು ಇನ್ನೂ ಹೋಗದ ಜಾಗದಿಂದ!
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
= ಬದುಕನ್ನು ಅನುಭವಿಸಲೇಬೇಕಾ?
-ಬದುಕನ್ನು ಬದುಕಿದ್ರೂ ಸಾಕು!
ಪಿ.ಜೆ. ರಾಘವೇಂದ್ರ, ಮೈಸೂರು
ಅತ್ಯಾಚಾರಿಗಳಿಗೆ ಸಂತಾನಹರಣ ಶಿಕ್ಷೆ, ಭ್ರಷ್ಟಾಚಾರಿಗಳಿಗೆ?
-ಮಾನಹರಣ ಶಿಕ್ಷೆ, ಚುನಾವಣೆಯಲ್ಲಿ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
= ಪ್ರೇಯಸಿ 'ಮಿಸ್ಡ್‌ಕಾಲ್' ಕೊಟ್ರೆ ತಕ್ಷಣ ಕರೆ ಮಾಡುವ ಕೆಲವರು ಮಡದಿ ಕಾಲ್ ಮಾಡಿದ್ರೂ ರಿಸೀವ್ ಮಾಡೋದಿಲ್ವಲ್ಲ ಯಾಕೆ?
-ಲವ್ ಕಾಲ್‌ಗೂ 'ಯಮಗಂಡಕಾಲ್'ಗೂ ವ್ಯತ್ಯಾಸವಿದೆಯಲ್ಲ!