ಇದು ಸ್ಪಿಂಗಿಡೆ ಕುಟುಂಬಕ್ಕೆ ಸೇರಿದ ಒಂದು ಕ್ಯಾಟರ್ ಪಿಲ್ಲರ್ (ಮರಿಹುಳು). ಇದು ಹಾಕ್-ಮಾತ್‌ನ ಪೂರ್ವಾವಸ್ಥೆ. ಇವುಗಳು ಆಫ್ರಿಕಾ ಮತ್ತು ಏಷಿಯಾದ ವಿಸ್ತಾರವಾದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇದು ವಲಸೆ ಜಾತಿಗೆ ಸೇರಿದ್ದು, ಇವುಗಳಿಗೆ ರೆಕ್ಕೆ ಬಲಿತ ನಂತರ, ಪೂರ್ವ ಮತ್ತು ದಕ್ಷಿಣ ಯುರೋಪಿನ ಭಾಗಗಳಿಗೆ ಬೇಸಿಗೆಯಲ್ಲಿ ಹಾರಿಹೋಗುತ್ತವೆ. ಇವುಗಳು ಮಂದವಾದ ಬೆಳಕಿನಲ್ಲಿ ಚುರುಕಾಗಿರುತ್ತವೆ. ಹೊಸದಾಗಿ ಹುಟ್ಟಿದ ಕ್ಯಾಟರ್ ಪಿಲ್ಲರ್‌ಗಳು ತಿಳಿ ನೀಲಿ ಬಣ್ಣ ಹೊಂದಿದ್ದು ಬೆಳೆದಂತೆ ಹಸಿರು ಬಣ್ಣಕ್ಕೆ ತಿರುಗುತ್ತವೆ, ನಂತರ ಕಂದು ಬಣ್ಣವನ್ನು ಹೊಂದುತ್ತವೆ. ದೇಹದ ಮುಂಭಾಗದಲ್ಲಿ ಕಣ್ಣನ್ನು ಹೋಲುವ ಎರಡು ಚುಕ್ಕೆಗಳಿರುತ್ತವೆ.ಈ ಕ್ಯಾಟರ್ ಪಿಲ್ಲರ್‌ಗಳು ಗಿಡದ ಎಲೆಗಳನ್ನು ತಿಂದು ಗಿಡವನ್ನು ನಾಶ ಮಾಡುತ್ತವೆ. ಪ್ರೌಢವಸ್ಥೆಗೆ ಬಂದ ನಂತರ ಅವು ಅನೇಕ ತರಹದ ಹೂವುಗಳ ಮಕರಂದವನ್ನು ಸವಿಯುತ್ತವೆ. ವಿಶೇಷವಾಗಿ ಸುಗಂಧಪೂರಿತ ಹೂವುಗಳ ಮಕರಂದ ಇವುಗಳಿಗೆ ತುಂಬಾ ಇಷ್ಟ.
- ಆನಂದ್ ಎಸ್. ಜೋಶಿ
ananda.s.joshi@gmail.com