ನಾಯಿ ಕಚ್ಚಲ್ಲ!
ಕೋಲ್ಯ ಒಂದು ಸುಂದರ ನಾಯಿಯೊಂದಿಗೆ ಶೂ ಅಂಗಡಿಗೆ ಹೋದ. ಅಂಗಡಿಯವ ಕೇಳಿದ, 'ನಿಮ್ಮ ನಾಯಿ ಕಚ್ಚುತ್ತಾ?'. ಕೋಲ್ಯ, 'ಇಲ್ಲ, ಅದಕ್ಕೆ ಕಚ್ಚೋ ಅಭ್ಯಾಸ ಇಲ್ಲ' ಅಂದ. ಕೋಲ್ಯನಿಗೆ ಶೂ ತೋರಿಸುತ್ತಿದ್ದಾಗಲೇ ಆ ನಾಯಿ, ಅಂಗಡಿಯವನ ಕಾಲನ್ನು ಕಚ್ಚಿತು.
ಅಂಗಡಿಯವ: ಅಲ್ಲಾ ರೀ, ನಿಮ್ಮ ನಾಯಿ ಕಚ್ಚೋದೇ ಇಲ್ಲ ಅಂದಿದ್ರಿ... ಆದ್ರೆ, ನನ್ನನ್ನು ಕಚ್ಚೇಬಿಡ್ತಲ್ಲ! ಯಾಕೆ ಸುಳ್ ಹೇಳಿದ್ರೆ.
ಕೋಲ್ಯ: ರೀ ನಿಮ್ಗೆ ಯಾರ್ರೀ ಹೇಳಿದ್ದು, ಇದು ನನ್ನ ನಾಯಿ ಅಂತ!
=
ಟೀಚರ್: ಸಿಂಹ ನಿನ್ನನ್ನು ಅಟ್ಟಿಸ್ಕೊಂಡ್ ಬಂದ್ರೆ ಏನ್ಮಾಡ್ತೀಯಾ?
ಮರಿಕೋಲ್ಯ: ನಾನು ಮರ ಏರಿ ಕೂರ್ತೀನಿ.
ಟೀಚರ್: ಅದು ಕೂಡ ಮರ ಹತ್ತಿದ್ರೆ?ಮರಿಕೋಲ್ಯ: ಅಲ್ಲಿಂದ ನೆಗೆದು, ಕೊಳದ ನೀರಿಗೆ ಹಾರ್ತೀನಿ.
ಟೀಚರ್: ಅದಕ್ಕೂ ಈಜು ಬರುತ್ತೆ. ಅದು ಕೂಡ ಕೊಳದ ನೀರಿಗೆ ಹಾರಿದ್ರೆ.
ಮರಿಕೋಲ್ಯ: ಮೇಡಂ, ನಿಮ್ಗೆ ನಾನ್ ಬದುಕೋದು ಇಷ್ಟ ಇಲ್ಲ ಅಂದ್ರೆ ಹೇಳಿ ಸ್ಕೂಲ್ ಮುಂದಿರುವ ಬಾವಿಗೆ ಹಾರ್ತೀನಿ!
=
ಬೆಳಗ್ಗೆ 8 ಗಂಟೆ. ಇನ್ನೂ ಮಲಗಿಯೇ ಇದ್ದ ಕೋಲ್ಯನನ್ನು ತಾಯಿ ಎಬ್ಬಿಸಿದಳು.
ತಾಯಿ: ಎದ್ದೇಳೋ, ಸ್ಕೂಲ್ಗೆ ಹೋಗಲ್ವಾ?
ಕೋಲ್ಯ: ಇಲ್ಲ, ಹೋಗಲ್ಲ.
ತಾಯಿ: ಯಾಕೆ ಹೋಗಲ್ಲ?
ಕೋಲ್ಯ: ಇಲ್ಲ ಮಮ್ಮಿ, ಟೀಚರ್ಗಳೂ ನನ್ನ ದ್ವೇಷ ಮಾಡ್ತಾರೆ, ವಿದ್ಯಾರ್ಥಿಗಳೂ ನನ್ನ ದ್ವೇಷ ಮಾಡ್ತಾರೆ.
ತಾಯಿ: ಹೆಡ್ಮೇಷ್ಟ್ರಾಗಿ ಸ್ಕೂಲ್ಗೆ ಹೋಗದೇ ಇರಬಾರದು. ಎದ್ದೇಳು...
=
ಟೆಸ್ಟ್ ಡ್ರೈವ್
ಕೋಲ್ಯ ಡ್ರೈವಿಂಗ್ ಲೈಸೆನ್ಸ್ ಮಾಡಿಸ್ಕೋಬೇಕು ಅಂತ ಆರ್ಟಿಓ ಆಫೀಸಿಗೆ ಹೋದ. ಟೆಸ್ಟ್ ಡ್ರೈವ್ ಶುರುವಾಯಿತು. ಕೋಲ್ಯ ಕಾರೊಳಗೆ ಕಾಲಿಟ್ಟಿದ್ದಷ್ಟೇ...
ಪೊಲೀಸ್: ನೀವು ಫೇಲ್. ಹೊರಡಿ.
ಕೋಲ್ಯ: ಸರ್, ನಾನಿನ್ನು ಕಾರೊಳಗೆ ಕೂತಿದ್ದಷ್ಟೇ ಆಗ್ಲೇ ಫೇಲ್ ಅಂತೀರಲ್ಲ ಸಾರ್. ಇದು ನ್ಯಾಯನಾ?
ಪೊಲೀಸ್: ಅಲ್ಲಪ್ಪಾ, ಕಾರ್ ಓಡ್ಸೋದಿಕ್ಕೆ ಯಾರಾದ್ರೂ ಹಿಂದಿನ ಸೀಟಲ್ಲಿ ಕೂರ್ತಾರಾ?