ಚಲಿಸುವ ಗೋಡೆಗಳು!
ಫಂಟಾ: ದಿನಾ 10 ಲೋಟ ಹಾಲು ಕುಡಿದ್ರೆ ಗೋಡೆ ತಳ್ಳುವಷ್ಟು ಶಕ್ತಿ ಬರುತ್ತೆ.
ಕೋಲ್ಯ: ಛೇ, ಛೇ! ಯಾಕೆ ಅಷ್ಟೊಂದ್ ಹಾಲನ್ನು ವೇಸ್ಟ್ ಮಾಡ್ಬೇಕು? ಒಮ್ಮೆ ಆಲ್ಕೋಹಾಲ್ ಕುಡಿದ್ರೆ ಗೋಡೆ ತನ್ನಿಂತಾನೆ ಚಲಿಸುತ್ತೆ!
ಕಾಫಿಡೇಯಲ್ಲಿ ಕೋಲ್ಯ, ಹುಡುಗಿಗೆ 'ಐಲವ್ ಯು' ಅಂದ. ಅವಳು ಕಪಾಳಕ್ಕೆ ಬಾರಿಸಿ, ಹಲ್ಲು ಕಡಿಯುತ್ತಾ, 'ಏನಂದೆ?' ಅಂತ ಸಿಟ್ಟಿನಲ್ಲಿ ಕೇಳಿದಳು. ಆಗ ಕೋಲ್ಯ ಅವಳ ಕಪಾಳಕ್ಕೆ ಬಾರಿಸಿ ಹೇಳಿದ, 'ನಾನ್ ಏನಂದೆ ಅಂತ ಗೊತ್ತಿಲ್ದೆ ನನಗೆ ಹೊಡೀತಿಯಲ್ಲ, ನಿನ್ಗೆಷ್ಟು ಸೊಕ್ಕು'!
ಕೋಲ್ಯ: 5 ಆದ್ಮೇಲೆ ಏನು ಬರುತ್ತೆ?
ಮರಿಕೋಲ್ಯ: 6, 7.
ಕೋಲ್ಯ: ಗುಡ್. 6,7 ಆದ್ಮೇಲೆ?
ಮರಿಕೋಲ್ಯ: 8, 9, 10.
ಕೋಲ್ಯ: ವೆರಿ ಗುಡ್. ನಂತರ ಏನು ಬರುತ್ತೆ?
ಮರಿಕೋಲ್ಯ: ಜಾಕ್, ಕ್ವೀನ್, ಕಿಂಗ್.
ಕೋಲ್ಯ ಮತ್ತು ಅವನ ಹೆಂಡತಿ ನಡುವೆ ವಿಪರೀತ ಜಗಳವಾಯಿತು.
ಮರುದಿನ ಬೆಳಗ್ಗೆ ಕೋಲ್ಯ, ಒಂದು ಕಪ್ ಹಾಲನ್ನು ತಂದು ಹೆಂಡತಿಗೆ ಕೊಟ್ಟ.
ಹೆಂಡತಿ: ಸಾರಿ, ನಿನ್ನೆ ಜಗಳ ಆಡಿದ್ದಕ್ಕೆ...
ಕೋಲ್ಯ: ಸಾರಿ ಗೀರಿ ಬೇಡ, ಈ ಹಾಲ್ ಕುಡಿ, ಇವತ್ತು ನಾಗರ ಪಂಚಮಿ!
ಕೋಲ್ಯ: ನನ್ನ ತಲೆಕೂದಲು ವಿಪರೀತ ಉದುರ್ತಾ ಇದೆ.
ಫಂಟಾ: ಯಾಕೆ ಹಾಗೆ?
ಕೋಲ್ಯ: ವಿಪರೀತ ಟೆನ್ಷನ್.
ಫಂಟಾ: ಏನ್ ಟೆನ್ಷನ್?
ಕೋಲ್ಯ: ಕೂದಲು ಉದುರ್ತಿದ್ಯಲ್ಲ ಅನ್ನೋ ಟೆನ್ಷನ್.
ಡಾಕ್ಟರ್: ನಿಮ್ಮ ಒಂದು ಕಿಡ್ನಿ ಫೇಲ್ ಆಗಿದೆ.
ಕೋಲ್ಯ ವಿಪರೀತ ಅಳತೊಡಗಿದ. ನಂತರ ಸ್ವಲ್ಪ ಸಮಾಧಾನಿಸಿಕೊಂಡು ಕೇಳಿದ, 'ಸರ್ ಎಷ್ಟ್ ಮಾರ್ಕ್ಸಿಂದ ಫೇಲಾಗಿದೆ?'.