ತಾಯಿ ಜನ್ಮ ಕೊಡುತ್ತಾಳೆ, ಗುರು ವಿದ್ಯೆ ಕೊಡುತ್ತಾನೆ, ಹೆಂಡತಿ?
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
ಪ್ರೀತಿಯನ್ನು ಬಾಡಿಗೆಗೆ ಪಡೆಯುವಂತಿದ್ದರೆ?
- ಯಾವುದಾದ್ರೂ ಪಾರ್ಕ್ನ್ನು ಲೀಸ್ಗೆ ಹಾಕ್ಕೋಬೇಕಾಗ್ತಿತ್ತು!
ಹರಹಳ್ಳಿ ಪುಟ್ಟರಾಜು, ಪಾಂಡವಪುರ
ಮದುವೆ ಜನ್ಮ ಜನ್ಮದ ನಂಟಾದರೆ ಡೈವೋರ್ಸು?
- ಆಯಾ ದಿನದ ಹಿಯರಿಂಗು!
ರವಿಕುಮಾರ್ ಜಿ.ಬಿ. ಬೆಂಗಳೂರು
ಮಂತ್ರಿಗಳಿಗೆ ಸದಾ ಪೊಲೀಸರು ರಕ್ಷಣೆ ಕೊಡ್ತಾರೆ ಏಕೆ?
- 'ಸಂಶಯಾಸ್ಪದ' ವ್ಯಕ್ತಿಗಳ ಮೇಲೆ ಕಣ್ಣಿಡೋದೇ ಪೊಲೀಸರ ಕರ್ತವ್ಯ.
ಶಶಿಕಲಾ ಗೊಬ್ಬರಡಗಿ, ದೇವದುರ್ಗ
ಟೆಲಿಗ್ರಾಂ ಸೇವೆ ಜುಲೈ 15ರಿಂದ ಸ್ಥಗಿತವಂತೆ?
- ಅದನ್ನು ಮೊಬೈಲ್ನಲ್ಲಿ ಎಲ್ಲರಿಗೂ ಮೆಸೇಜ್ ಮಾಡಿ ತಿಳಿಸಿ!
ಸಿ. ಅನಂತರಾವ್ ಹಿರೇಹಳ್ಳಿ, ಭರಮಸಾಗರ
ಸಭೆ ಸಮಾರಂಭಗಳಲ್ಲಿ ಬ್ಯಾನರ್ ಕಟ್ಟುವಾಗ ಇರುವ ಉತ್ಸಾಹ ಬಿಚ್ಚುವಾಗ ಏಕೆ ಇರುವುದಿಲ್ಲ?
- ಅವರಿಗೆ ಕಟ್ಟಲಿಕ್ಕೆ ಮಾತ್ರ ದುಡ್ಡು ಕೊಟ್ಟಿರ್ತಾರೆ!
ಪಿ.ಜಿ. ರಾಘವೇಂದ್ರ, ಮೈಸೂರು
ಬಿಗ್ಬಾಸನ್ನು ದೇವ್ರೂ ಎನ್ನುತ್ತಿದ್ದವರು ಸೋತಮೇಲೆ 'ಮುಂಡಾಮೋಚ್ತು' ಅನ್ನುತ್ತಿದ್ದಾರಲ್ಲ?
- ಇವರ ಮುಂಡಾಮೋಚಿ, ಅವರು ದುಡ್ಡು ಬಾಚಿದ್ದು ಇವರಿಗೆ ಆಮೇಲೆ ಗೊತ್ತಾಯ್ತಂತೆ!
ಲಕ್ಷ್ಮೀ ಬರ್ಕ್ಲಿ ರಮೇಶ, ಕಿರಗಂದೂರು
ತಾಯಿ ಜನ್ಮ ಕೊಡುತ್ತಾಳೆ, ಗುರು ವಿದ್ಯೆ ಕೊಡುತ್ತಾನೆ, ಹೆಂಡತಿ?
- ವಿದ್ಯೆ ಸರಿಯಿಲ್ಲಾಂತ ನಿಮ್ಮ ಜನ್ಮ ಜಾಲಾಡ್ತಾಳೆ!
ಪೇಂಟರ್ ಪಾಪು, ಸಂತೇಮರಹಳ್ಳಿ
ಪೆನ್ಸಿಲ್ ತಪ್ಪನ್ನು ರಬ್ಬರ್ನಲ್ಲಿ ಅಳಿಸಬಹುದು, ಪೆನ್ನು ತಪ್ಪು ಮಾಡಿದ್ರೆ?
- ಡೆಸ್ಟ್ಬಿನ್ಗೆ ಕಳಿಸಬಹುದು!
- ಘಾಟಿ