ಒಂದೊಮ್ಮೆ ಮರಗಳು ಹಣ್ಣು ಬಿಡುವ ಬದಲು ಹಣ ಬಿಡುವಂತೆ ಇದ್ದಿದ್ರೆ?
ಸರಸ್ವತಿ ಗೊಬ್ಬರಡಗಿ, ಜೀವರಗಿ
ಕಟ್ಟಕಡೆಯ ಟೆಲಿಗ್ರಾಂ ಹೋಗಿದ್ದು ರಾಹುಲ್ ಗಾಂಧಿಗೆ ಅಂತೆ?
- 'ಸ್ಟಾರ್ಟ್ ಇಮ್ಮಡಿಯಟ್ಲಿ' ಅಂತ ಇರಬಹುದು!
ರವೀಂದ್ರನಾಥ ಶಿ. ಯಡಹಳ್ಳಿ, ಬೀಳಗಿ
ಪೋರ್ಟ್ವೆಂಟಿಗೂ ಟಿಕ್ಟ್ವೆಂಟಿಗೂ ವ್ಯತ್ಯಾಸವೇನು?
- ಪೋರ್ಟ್ವೆಂಟಿ ಜೀವನಾಶಕ, ಟಿಕ್ಟ್ವೆಂಟಿ ಕ್ರಿಮಿನಾಶಕ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಟಾಕೀಸ್ಗೆ ಹೋದವರೆಲ್ಲ ಪಾಪ್ಕಾರ್ನ್ನನ್ನೇ ತಿನ್ನಲು ಕಾರಣವೇನು?
- ಪಾಪ! ಟಾಕೀಸ್ನ ಎಲ್ಲಾ ಕಾರ್ನರ್ನಲ್ಲಿ ಅದನ್ನೇ ಇಟ್ಟಿರ್ತಾರಲ್ಲ!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
ದೇವಾಲಯಗಳಲ್ಲಿ ಅರ್ಚಕರೇ ಕಳ್ಳತನ ಮಾಡಿದರೆ?
- ಆ ಮೇಲುಕೋಟೆ ಚೆಲುವನಾರಾಯಣನೇ ನೋಡ್ಕೋತಾನೆ ಬಿಡಿ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಒಂದೊಮ್ಮೆ ಮರಗಳು ಹಣ್ಣು ಬಿಡುವ ಬದಲು ಹಣ ಬಿಡುವಂತೆ ಇದ್ದಿದ್ರೆ?
- ಮರಗಳಲ್ಲಿ ಕೋತಿಗಳ ಬದಲು ಜನರು ಇರ್ತಿದ್ರು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಏನೋ ಇದೆ ಅಂದ್ಕೊಂಡು ಬದುಕೋದೇ ಜೀವನಾನಾ?
- ಏನೋ ಇದೆ ಅಂದ್ಕೊಳ್ಳಿ ಸಾಕು. ಇನ್ನು 'ಏನೇನೋ' ಇದೆ ಅದ್ಕೊಂಡು ಕೊರಗಬೇಡಿ!
ಹೆಡತಲೆ ಮಾದನಾಯಕ, ಮೂಡಲಪಾಳ್ಯ
ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಏಕೆ ಇಲ್ಲ ಸಾರ್?
-ಅದನ್ನು ಪರಮೇಶ್ವರ್ ಅವರು ಹೊರಗಡೆ ಇದ್ದುಕೊಂಡೇ ನಿರ್ವಹಿಸ್ತಿದ್ದಾರೆ.
-ಘಾಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.