ಬಣ್ಣದ ಬುಗುರಿ
ಗಿಮಿಗಿಮಿ ತಿರುಗುವ
ಬಣ್ಣದ ಬುಗುರಿ
ಕಾಮನ ಬಿಲ್ಲನು
ತೋರುವುದು
ಬಣ್ಣಗಳೇಳು
ಬಿಂಬಿಸಿ ತಿರುಗಿ
ಸಂತಸ ಮನದಲಿ
ತುಂಬುವುದು
ಆಡುವ ಕುಣಿಯುವ
ಹಾರುವ ಹಕ್ಕಿಯ
ಬಣ್ಣದ ರೆಕ್ಕೆಯ
ಕಾಣುವುದು
ಗೆಳೆಯರು ಉಡುವ
ಬಗೆಬಗೆ ಉಡುಪು
ಚಿತ್ತಾರವ ಕಣ್ಣಿಗೆ
ಹೊಳೆಯುವುದು
ಏಳು ದಿನಗಳ
ಹೆಸರನು ಕರೆದು
ಆಟದ ಪ್ರೀತಿಯು
ಉಕ್ಕುವುದು
ಕುರುಡು ರಾಮನ
ಕೇಕೆಯು ಕೇಳಿ
ಮನದಲಿ ಹಿರಿಹಿರಿ
ಹಿಗ್ಗುವುದು
ಬುಗುರಿಯ ತರಹ
ಹುಡುಗರ ನೋಟ
ಆಟದ ಹೆಮ್ಮೆಯ
ಹೊಂದುವುದು
- ಅಕ್ಬರ್ ಸಿ. ಕಾಲಿಮಿರ್ಚಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.