ಜಾಣ ಕೋಗಿಲೆ
ಕುಹೂ ಕುಹೂ ಎನ್ನುತ ಕಿನ್ನರ ಕಂಠದಿ
ಕೂಗುವೆ ದಿನವೆಲ್ಲ
ಕೂಗುವ ನನಗೂ ಕೇಳುವ ನಿಮಗೂ
ಬೇಸರವೇ ಇಲ್ಲ
ನೋಡಲು ನಾನು ಮರಿಕಾಗೆಯಂತೆ
ಸುಂದರನೇನಲ್ಲ
ಕಾಗೆ ಗೂಡಲಿ ಮೊಟ್ಟೆಯನಿಟ್ಟು
ಪಾರಾಗುವೆನಲ್ಲ
ವಸಂತ ಮಾಸ ಬಂದರೆ ಸಾಕು
ಮಾವು ಚಿಗುರುವುದಲ್ಲ
ಮಾಮರಕೂ ನನಗೂ ಹಳೆಯ ನಂಟು
ಬಿಡಿಸಲಾಗದಲ್ಲ
ಮಾಮರದ ಮಾದಕ ವಾಸನೆಗೆ
ಸಮನಾವುದಿಲ್ಲ
ಮಾಮರದಿ ಚಿಗುರನು ತಿನ್ನುತ
ಕೂಗುವೆ ದಿನವೆಲ್ಲ
ಇಂಪುದನಿಯ ನನಗೇ ಹೋಲಿಪರು
ಸಮನಾರೆನಗಿಲ್ಲ
ಬನ್ನಿ ಮಕ್ಕಳೇ, ನೀವೂ ಹಾಡಿ
ಜಾಣರಾಗಿರೆಲ್ಲ.
= ಸುನಂದಾ ಹಾಲಭಾವಿ, ಬೆಳಗಾವಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.