ಜೋಕ್ಸ್ಪಿಯರ್
ಪರ್ಫ್ಯೂಮ್ ಕಥೆ
ಮೂವರು ಹುಡುಗಿಯರು, ಒಬ್ಬ ಕೋಲ್ಯನನ್ನು ಹೊತ್ತ ಆ ಲಿಫ್ಟು ಮೀಡಿಯಂ ಸ್ಪೀಡಿನಲ್ಲಿ ಮೇಲೇರುತ್ತಿತ್ತು.
1ನೇ ಹುಡುಗಿ: ನಾನಿವತ್ತು 'ಗುಸ್ಸಿ' ಪರ್ಫ್ಯೂಮನ್ನು ಹಾಕ್ಕೊಂಡ್ ಬಂದಿದ್ದೀನಿ. ಅದಕ್ಕೆ ಇಷ್ಟೊಂದು ಸ್ಮೆಲ್ಲು.
2ನೇ ಹುಡುಗಿ: ನಾನ್ ಹಾಕಿರೋದು 'ಆಬ್ಸೆಷನ್' ಪರ್ಫ್ಯೂಮು.
3ನೇ ಹುಡುಗಿ: ನಾನಿವತ್ತು 'ಲವ್ಲಿ' ಪರ್ಫ್ಯೂಮ್ ಹಾಕ್ಕೊಂಡಿದ್ದೀನಿ.
ಅಷ್ಟರಲ್ಲೇ ಕರೆಂಟು ಕೈಕೊಟ್ಟು, ಲಿಫ್ಟು ಅಲ್ಲೇ ನಿಂತಿತು. ಆಗ ಕೆಟ್ಟ ವಾಸನೆ! ಆ ಮೂವರು ಹುಡುಗಿಯರು ಕೋಲ್ಯನತ್ತ ನೋಡಿದರು.
ಕೋಲ್ಯ: ಆಲೂಗಡ್ಡೆ. ಕೆ.ಜಿ.ಗೆ 12 ರುಪಾಯಿ.
=
ಫಂಟಾ: ನೀನು ನಿನ್ನ ಹೆಂಡ್ತಿ ಬರ್ತ್ ಡೇಗೆ ಡೈಮಂಡ್ ನೆಕ್ಲೆಸ್ ಬದಲು ಕಾರನ್ನು ಗಿಫ್ಟಾಗಿ ಕೊಡ್ಬಹುದಿತ್ತಲ್ಲಾ?
ಕೋಲ್ಯ: ಆದರೆ, ನಕಲಿ ಕಾರು ಸಿಗೋದಿಲ್ವಲ್ಲಾ..!?
=
ಫಂಟಾ: ನನ್ನ ಅಜ್ಜ 96 ವರ್ಷ ಬದುಕಿದ್ರು. ಸಾಯುವ ತನಕ ಅವರು ಗ್ಲಾಸನ್ನೇ ಬಳಸಿರಲಿಲ್ಲ.
ಕೋಲ್ಯ: ಹೌದು, ಕೆಲವು ಮಂದಿ ಬಾಟಲಿಯಿಂದ ಡೈರೆಕ್ಟಾಗಿಯೇ ಕುಡಿಯುತ್ತಾರೆ!
=
'ಕೋಳಿ ಮೊದಲಾ, ಮೊಟ್ಟೆ ಮೊದಲಾ?' ಎಂಬ ಬಹುದಿನದ ಪ್ರಶ್ನೆಗೆ ಕೋಲ್ಯನ ಉತ್ತರ ಹೀಗಿತ್ತು; 'ನೀವು ಯಾವ್ದನ್ನು ಫಸ್ಟ್ ಆರ್ಡರ್ ಮಾಡ್ತೀರಿ ಅದೇ ಬರುತ್ತೆ'!
=
ಕೋಲ್ಯ ಮಾರ್ಕೇಟ್ನಲ್ಲಿ ತಿರುಗ್ತಾ ಇದ್ದ. ಅವನ ಭುಜದ ಮೇಲೊಂದು ಗಿಳಿ ಕೂತಿತ್ತು. ಎದುರಿಗೊಬ್ಬ ಬಂದ ಅಪರಿಚಿತ ಕೇಳಿದ, 'ಈ ಪ್ರಾಣಿಯನ್ನು ಎಲ್ಲಿಂದ ತಂದೆ?'. ಗಿಳಿ ಉತ್ತರಿಸಿತು, 'ಪಂಜಾಬ್ನಿಂದ'!
=
ಅರ್ಜುನ್ ತೆಂಡೂಲ್ಕರ್: ಅಮ್ಮ, ಅಲ್ನೋಡು ಅಪ್ಪಾ ಪ್ರತಿ ಬಾಲಿಗೂ ಸಿಕ್ಸರ್ ಹೊಡೀತ್ತಿದ್ದಾರೆ.
ಅಂಜಲಿ ತೆಂಡೂಲ್ಕರ್: ಮಗನೇ, ಅದು ಬೂಸ್ಟ್ ಅಡ್ವರ್ಟೈಸ್ಮೆಂಟ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.