ನೀರಿನ ಸೆಳೆತಕ್ಕೂ ನೀರೆಯರ ಸೆಳತಕ್ಕೂ ವ್ಯತ್ಯಾಸವೇನು?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.
ಅಂದಿನ ಲವರ್ಸ್ಗೂ ಇಂದಿನ ಲವರ್ಸ್ಗೂ
ವ್ಯತ್ಯಾಸವೇನು?
- ಅಂದಿನವರದ್ದು ಫುಲ್ ಮೀಲ್ಸ್, ಇಂದಿನವರದ್ದು ಫಾಸ್ಟ್ಫುಡ್!
ಜೆ.ಆರ್. ಆದಿನಾರಾಯನಾಣಮುನಿ,
ಶ್ರೀಕೋಡಿಹಳ್ಳಿಮಠ.
ರಾಜಕೀಯಕ್ಕೆ ಫಲವತ್ತಾದ ನೆಲ ಯಾವುದು?
-ನೆಲ ಬೇಕೂಂತಿಲ್ಲ, ಅದು 'ಬಂದಳಿಕೆ' ರೀತಿ ಬೇರೆ ಮರಗಳ ಮೇಲೆ ಬೆಳೆಯುತ್ತದೆ!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ.
ದೇವಸ್ಥಾನಗಳಲ್ಲಿ ಪೂಜಾರಿಗಳ ಹೇಳೋ ಮಂತ್ರ ಅರ್ಥವಾಗೋದೆ ಇಲ್ವಲ್ಲ?
- ಅರ್ಥವಾದ್ರೆ ನೀವು ದಕ್ಷಿಣೆ ಕೊಡೋದಿಲ್ಲ!
ಪಿ.ಜಿ. ರಾಘವೇಂದ್ರ, ಮೈಸೂರು.
ಕಳ್ಳಭಟ್ಟಿ ಕುಡಿದು ಸತ್ತವರಿಗೆ ಪರಿಹಾರ ಕೊಡುವ ಸರ್ಕಾರ ಹಸಿವಿನಿಂದ ಸತ್ತವರಿಗೆ ಏಕೆ ಪರಿಹಾರ ಕೊಡುವುದಿಲ್ಲ?
- ಅದೇ ಸುಖ ಜೀವನ. ಪ್ರೇಯಸಿಯೂ ಮನೆ ಒಳಗೆ ಬಂದರೆ ಕಷ್ಟ!
ಬಸವನಗೌಡ, ಹೆಬ್ಬಳಗೆರೆ, ಚನ್ನಗಿರಿ.
ಒಂದೊಮ್ಮೆ ಮನುಷ್ಯನಿಗೆ ಕಲ್ಲು ಮಣ್ಣುಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದ್ದಿದ್ರೆ ಏನಾಗ್ತಿತ್ತು?
- ಭೂಮಿ ಮಾತ್ರ ಉಳುತ್ತಿದ್ದರು, ಬೆಳೆ
ಬೆಳೆಯುತ್ತಿರಲಿಲ್ಲ!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ.
ಕರ್ಮಕಾಂಡಗಳೆಲ್ಲ ಪ್ರಧಾನಿ ಮೂಗಿನಡಿಯೇ ನಡೆದರೂ ಅಮಾಯಕರಂತಿದ್ದಾರಲ್ಲ?
- ಅವರು ಮೂಗಿನ ಗ್ರಹಣ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ!
-ಘಾಟಿ