ಮಳೆನಾಡಿನ ಹಾಡುಗಳು
ಕನ್ನಡ ಚಿತ್ರರಂಗದಲ್ಲಿ 'ಮುಂಗಾರು ಮಳೆ' ಸುರಿದಿದ್ದು ಇತ್ತೀಚೆಗೆ ಆದರೂ ತೆರೆಯ ಮೇಲೆ ಮಳೆಗಾಲ ಎಂದಿನಿಂದಲೂ ಇದ್ದದ್ದೇ. ಆದರೆ, ಸಿನಿಮಾ ರಂಗದವರು ಎಂದರೆ ಛತ್ರಿಗಳು ಎಂಬ ಕೆಲವರ ಕುಹಕಕ್ಕೂ ಇದಕ್ಕೂ ಸಂಬಂಧ ಇಲ್ಲ. ಮೊದಲೆಲ್ಲ ಹಾಡುಗಳಿಗೆ ಮತ್ತು ಕ್ಲೈಮ್ಯಾಕ್ಸ್ಗೆ ಮಾತ್ರ ಸೀಮಿತವಾಗಿದ್ದ ಮಳೆ ಈಗೀಗ ಇಡೀ ಚಿತ್ರದ ಕಥೆಯ ಮೇಲೂ ಸುರಿಯಲಾರಂಭಿಸಿದೆ. ಆದರೂ ಮಳೆ ಎಂಬುದು ನಮ್ಮ ಪ್ರೇಕ್ಷಕರಿಗೆ ಯಾವತ್ತೂ ಆರ್ಟಿಫಿಷಿಯಲ್ ರೈನ್ ಎನಿಸಿಲ್ಲ.
ಅಂಗೈಯಲ್ಲಿ ಆಕಾಶ ತೋರಿಸುವ ಗಾಂಧಿನಗರದ ಮಂದಿ ಹೆಚ್ಚಾಗಿ ಆಕಾಶ ನೋಡುವುದು ಪ್ರೇಮಕಥೆಗಳ ವಿಷಯಕ್ಕೆ ಬಂದಾಗ. ಹಾಗಂತ ಮಳೆ ಬರಿ ಪ್ರೀತಿ ಪ್ರೇಮಕ್ಕೆ ಸೀಮಿತವಾಗಿಲ್ಲ. ಆ್ಯಕ್ಷನ್ ಚಿತ್ರಗಳ ರೋಡ್ಸೈಡ್ ಫೈಟ್ಗಳಿಗೂ ಮಳೆ ಘನತೆ ತಂದುಕೊಡುತ್ತದೆ. ನಾಯಕ ಮಳೆಯಲಿ ನೆಂದ ಮಚ್ಚಿನ ಜೊತೆಗೆ ಕಾಣಿಸಿಕೊಂಡರೂ ಪ್ರೇಕ್ಷಕ ಮೆಚ್ಚಿಕೊಳ್ಳುತ್ತಾನೆ.
ಸಿನಿಮಾದಲ್ಲಿ ಮಳೆಯ ಫೀಲ್ ಇದ್ದರೆ ಸಾಕು ಅದು ಸದಭಿರುಚಿಯ ಚಿತ್ರ ಎನಿಸಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ಮಳೆಯ ವಾಸನೆ ನಮ್ಮ ಚಿತ್ರಗಳನ್ನು ಆವರಿಸಿಕೊಳ್ಳುತ್ತದೆ. ಪ್ರೇಮಕಥೆ ಎಂದಾದರೆ ಸಾಕು 'ಮಳೆಯೇ ಸುರಿದು ಬಾ' ಎಂದು ಹಾಡತೊಡಗುತ್ತಾನೆ ನಿರ್ದೇಶಕ. ಕ್ಲೈಮ್ಯಾಕ್ಸ್ನಲ್ಲಿ ಗಾಂಭೀರ್ಯ ಬೇಕು ಎಂದಾದರೆ ಸಾಕು, ಎಲ್ಲ ನಿರ್ದೇಶಕರೂ ವರುಣನ ಮೊರೆ ಹೋಗುತ್ತಾರೆ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಅನಂತ್ನಾಗ್ ಅಭಿನಯದ 'ಬೆಳದಿಂಗಳ ಬಾಲೆ' ಅಂಥ ಚಿತ್ರಗಳಲ್ಲೊಂದು.
ಮೊದಲೆಲ್ಲಾ ಕಮರ್ಷಿಯಲ್ ಚಿತ್ರಗಳಲ್ಲಿ ಮಳೆ ಸೀಮಿತವಾಗಿದ್ದುದು ನಾಯಕ, ನಾಯಕಿಯ ಡ್ಯುಯೆಟ್ಗೆ. ಮಳೆ ಬಂದರೆ ಅಂಬರೀಶ್ ಅಂಬಿಕಾ 'ಛಳಿ ಛಳಿ ತಾಳೆನು ಈ ಛಳಿಯಾ' ಎಂದು ಹಾಡತೊಡಗುತ್ತಾರೆ. ಮಳೆ ಬರುತ್ತಿದ್ದ ಹಾಗೆ ಅವರ ರಂಗು ರಂಗಿನ ಬಟ್ಟೆಗಳು ಬಿಳಿ ಬಣ್ಣದ ಉಡುಗೆಗಳಾಗಿ ಮಾರ್ಪಡುತ್ತವೆ. ಪಾರದರ್ಶಕ ಬಟ್ಟೆಗಳು ಉದರ ದರ್ಶಕವೂ ಹೌದು. ಎಲ್ಲವೂ 'ಹೊಟ್ಟೆಪಾಡು'...
ಬಾಕ್ಸ್ ಆಫೀಸ್ನಲ್ಲೂ ಮಳೆಯ ಪ್ರಭಾವ ದೊಡ್ಡದು. ಸಿನಿಮಾದಲ್ಲಿ ಹನಿ ನೀರಾವರಿ ನಡೆದರೆ ನಿರ್ಮಾಪಕರಿಗೆ ಮನಿ ವರಿ ಇಲ್ಲ. ಹಣದ ಸುರಿಮಳೆಯಾಗುವುದು ಗ್ಯಾರಂಟಿ. ಮಳೆಯನ್ನು ನಂಬಿ ಕೆಟ್ಟ ರೈತರು ಸಿಗಬಹುದು, ಆದರೆ ಚಿತ್ರರಂಗದಲ್ಲಿ ನಂಬಿಕೆಟ್ಟವರಿಲ್ಲವೋ ಮಳೆಯನ್ನ ಎಂಬುದು ಬಹುತೇಕ ನಿಜ.
ಹಾಗಾಗಿ, ಇತ್ತೀಚಿನ ದಿನಗಳಲ್ಲಿ ಬಹುಷಃ ತಾಯಿ ಸೆಂಟಿಮೆಂಟಿನ ನಂತರ ಕನ್ನಡ ಚಿತ್ರರಂಗ ಹೆಚ್ಚಾಗಿ ನಂಬಿಕೊಂಡಿದ್ದು ಮಳೆಯನ್ನೇ. ಕಥೆಯಲ್ಲಿ ಅವಶ್ಯಕತೆ ಇಲ್ಲದಿದ್ದರೂ 'ಇದಕ್ಕೊಂದಿಷ್ಟು ತಾಯಿ ಸೆಂಟಿಮೆಂಟ್ ಸೇರಿಸಿ ಸರ್' ಎಂದು ಕಥೆಗಾರರನ್ನು ಸತಾಯಿಸುವ ಕೆಲವು ನಟರಂತೆ ಚಿತ್ರದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾದರೆ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಬೆಳೆ ಬರುತ್ತದೆ ಎಂದು ನಂಬಿದವರ ಸಂಖ್ಯೆಯೂ ಕಡಿಮೆ ಇಲ್ಲ.
ಹಾಗಾಗಿ ನಮ್ಮ ಸಿನಿಮಾ ಮಂದಿಗೆ ನಿಂತಲ್ಲಿ, ಕೂತಲ್ಲಿ..ಎಲ್ಲೆಲ್ಲೂ ಬರೀ ಮಳೆಗಾಲ...
ಸ್ವಾತಿ ಮುತ್ತಿನ ಮಳೆ ಹನಿಯೆ...
ಚಿತ್ರ: ಬಣ್ಣದ ಗೆಜ್ಜೆ
ಸಂಗೀತ, ಸಾಹಿತ್ಯ: ಹಂಸಲೇಖ
ಹಾಡಿರುವವರು: ಎಸ್.ಪಿ.ಬಿ, ಎಸ್. ಜಾನಕಿ
ಸ್ವಾತಿ ಮುತ್ತಿನ ಮಳೆ ಹನಿಯೆ ಮೆಲ್ಲ ಮೆಲ್ಲನೆ ಧರೆಗಿಳಿಯೆ
ನನ್ನ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರ ಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೆ ಮಿರ ಮಿರನೆ
ಸ್ವಾತಿ ಮುತ್ತಿನ ಮಳೆ ಹನಿಯೆ ಮೆಲ್ಲ ಮೆಲ್ಲನೆ ಧರೆಗಿಳಿಯೆ
ನನ್ನ ರಾಜನ ಹೃದಯದ ಚಿಪ್ಪಿಗೆ ಬಾರೆ ಸರ ಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೆ ಮಿರ ಮಿರನೆ
ಪ್ರೇಮದ ಕಾಶಿಯಲಿ ಮಳೆಯೆ ನಮಗೆ ಸ್ನಾನ
ಕನಸೆ ಮನದ ಧ್ಯಾನ
ಮೈ ನಡುಗುವ ಚಳಿಯಲ್ಲಿ ಈ ಬೆಚ್ಚನೆ ಸವಿಗಾನ
ಪ್ರೇಮದ ಹಬ್ಬದಲಿ ಗುಡುಗೆ ನಮಗೆ ಮೇಳ
ಸಿಡಿಲೆ ಅದರ ತಾಳ
ಆ ಮಿಂಚಿನ ಬೆಳಕಲ್ಲೆ ಈ ಹೃದಯದ ಸಮ್ಮೇಳ
ಆನಂದದ ಆಲಾಪದ ಆಲಿಂಗನವೋ
ಈ ನಿಮಿಷದ ಈ ಮೋಹದ ಆಪೋಶಣವೋ
ಈ ಹೆದರುವ ಥರದಲ್ಲೆ ಈ ಪ್ರೇಮದ ಗುಣಗಾನ
ಬೆಳ್ಳಿಯ ತಾರೆಗಳ ತರುವೆ ನಿನಗೆ ಕೊಡುವೆ
ನಿನ್ನ ಮುಡಿಗೆ ಇಡುವೆ
ಈ ಪ್ರೇಮದ ಸಾಹಸಕೆ ನನಗೇನೆ ನೀ ತರುವೆ
ಪ್ರೇಮದ ಮಹಲಿನಲಿ ನನಗೂ ನಿನಗೂ ನಡುವೆ
ಪರದೆ ಸರಿಯೆ ಮದುವೆ
ಆ ಹುಣ್ಣಿಮೆ ರಾತ್ರಿಯಲಿ ನಾ ಮುತ್ತಿನ ಮಳೆಗರೆವೆ
ಆ ಶುಭದಿನ ಭೋರ್ಗರೆಯುವ ನೀರಾಗುವೆ ನಾ
ಆ ಮಿಲನಕೆ ಹಾತೊರೆಯುವ ಸಾಗರವೋ ನಾ
ಆ ಸಾಗರ ಸಂಗಮಕೆ ಈ ಉಸಿರ ಹಿಡಿದಿಡುವೆ
ಡ್ಯುಯೆಟ್ ಸಾಂಗ್ ಎಂದ ಕೂಡಲೆ ಮಳೆನಾಡಿನ ಒಡಲಿನ ಸೇರುವ ನಮ್ಮ ನಿಮ್ಮ ಮೆಚ್ಚಿನ ಕೆಲವು ಚಿತ್ರಗೀತೆಗಳು ಇಲ್ಲಿವೆ.
ಮುಂಗಾರು ಮಳೆಯೇ...ಮುಂಗಾರು ಮಳೆ
ಮುತ್ತು ಮುತ್ತು ನೀರ ಹನಿಯ ್ಣನಮ್ಮೂರ ಮಂದಾರ ಹೂವೆ
ಸ್ವಾತಿ ಮುತ್ತಿನ ಮಳೆ ಹನಿಯೆ ಬಣ್ಣದ ಗೆಜ್ಜೆ
ಮಳೆಯಲಿ ಜೊತೆಯಲಿ ಮಳೆಯಲಿ ಜೊತೆಯಲಿ
ಮಳೆಯೇ ಸುರಿದು ಬಾ ಮಕ್ಕಳ ರಾಜ್ಯ
ಮಳೆ ಬಂತು ಮಳೆ ಮಳೆ ಬಂತು ಮಳೆ
ಬಾರೋ ಬಾರೋ ಗೆಳೆಯಾ ಓ ಸ್ವಾತಿ ಮಳೆರಾಯ ಚಂದ್ರೋದಯ
ಮೇಘ ಬಂತು ಮೇಘ ಮಣ್ಣಿನ ದೋಣಿ
ಮಳೆ ಮಳೇ ಮಳೆ ಮಳೆ ಮಣ್ಣಿನ ದೋಣಿ
ಗಗನದಲಿ ಮಳೆಯ ದಿನ ಶ್ರೀರಾಮಚಂದ್ರ
ಗಾಳಿಯೋ ಗಾಳಿಯೋ ಶಾಂತಿ ಕ್ರಾಂತಿ
ಬಾ ಮಳೆಯೇ ಬಾ ಆಕ್ಸಿಡೆಂಟ್
ಮಳೆ ನಿಂತು ಹೋದ ಮೇಲೆ ಮಿಲನ
ಮಳೆ ಬರುವಾ ಹಾಗಿದೆ ಮೊಗ್ಗಿನ ಮನಸು
ಎಲ್ಲೋ ಮಳೆಯಾಗಿದೆಯೆಂದು ಮನಸಾರೆ
ಚಿಟಪಟ ಚಿಟಪಟ ಚಿಟಪಟ ಅಂತ ಹಿಡಕೊಂತ ರಸಿಕ
ಮೊದಲ ಮಳೆಯಂತೆ ಮೈನಾ
ಮುತ್ತಿನ ಹನಿಗಳು ಸುತ್ತಲು ಮುತ್ತಲು ಬಯಸದೆ ಬಂದ ಭಾಗ್ಯ
ಮಳೆಯಲಿ ಮಿಂದ ಹೂವಿನ ಹಾಗೆ ಅಂದರ್ ಬಾಹರ್
ಮೇಘವೂ ಹರಸಿದೆ ಮುತ್ತನೂ ಸುರಿಸಿದೆ ಎದುರು ಮನೇಲಿ ಹೆಂಡ್ತಿ ಪಕ್ಕದ್ಮನೇಲಿ ಗಂಡ
ಸೋನೆ ಸೋನೆ ಪ್ರೀತ್ಸೋದ್ ತಪ್ಪಾ?
ತುಂತುರು ಅಲ್ಲಿ ನೀರ ಹಾಡು ಅಮೃತವರ್ಷಿಣಿ
ಮಳೆಯಿಂದ ಬಾನು ಭೂಮಿ ಅನುಕೂಲಕ್ಕೊಬ್ಬ ಗಂಡ
ಬಂದಾ ಬಂದಾ ಮೇಘರಾಜ ಸಿಪಾಯಿ
ಮಳೆಯಲಿ ಮಿಂದ ಹೂವಿನ ಹಾಗೆ...
ಹಾಡು: ಮಳೆಯಲಿ ಮಿಂದ,
ಚಿತ್ರ: ಅಂದರ್ ಬಾಹರ್ (2013),
ಗಾಯನ: ವಿಜಯ್ ಪ್ರಕಾಶ್, ಶ್ರೇಯಾ ಘೋಶಲ್, ಮಹಾತಿ, ಸುರಭಿ
ಸಾಹಿತ್ಯ: ಜಯಂತ್ ಕಾಯ್ಕಿಣಿ.
ಮಳೆಯಲಿ ಮಿಂದ ಹೂವಿನ ಹಾಗೆ... ಮಿನುಗುವೆ ಏಕೆ, ನನ್ನೋಲವೆ...
ಕನಸಲಿ ಕಂಡ ದೇವರ ಹಾಗೆ... ಸೆಳೆಯುವೆ ಏಕೆ, ನನ್ನೊಲವೆ...
ಹೃದಯದ ಮಾತು... ಆಲಿಸು ಪೂರ... ಕಂಪಿಸುವಾಗ, ಈ ಕೊರಳು...
ಚಿಂತೆಯು ಕೂಡ, ನಿಂತಿದೆ ದೂರ... ಜೊತೆಯಲಿ ಜೀವವೆ ನೀನಿರಲು...
ಮಳೆಯಲಿ ಮಿಂದ ಹೂವಿನ ಹಾಗೆ... ಮಿನುಗುವೆ ಏಕೆ, ನನ್ನೊಲವೆ...
ಮೇಘ ಬಂತು
ಮೇಘ
ಚಿತ್ರ: ಮಣ್ಣಿನ ದೋಣಿ
ಗಾಯನ: ಡಾ. ರಾಜ್
ಸಂಗೀತ, ಸಾಹಿತ್ಯ: ಹಂಸಲೇಖ
ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ನೀಲಿಯ ಮೇಘ
ಮೇಘ ಮಲ್ಹಾರ ಮೇಘ
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ... ಮೇಘ ಬಂತು ಮೇಘ ಐಐ
ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ
ಬೆಳಕಿನ ಚೆಲುವೆ ಸುಳಿದಳು... ಬಳುಕುತ ಇಳೆಗೆ ಇಳಿದಳು
ಉಷೆಯೆ ರಂಗಿನಲಿ ತೃಷೆಯ ನೋಟದಲಿ ಕವಿಯ ಬಳಿಗೆ ಬಂದೂ
ಪ್ರೇಮದ ನಯನ ತೆರೆದಳು... ಕಾವ್ಯದ ಒಳಗೆ ಕುಳಿತಳೂ
ಕಲಕಲಗೊಂಡವು ತ್ರಿಪದಿ ಪದಗಳು
ಪರವಶಗೊಂಡವು ಸಕಲ ರಸಗಳು
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ...
ಮೇಘ ಬಂತು ಮೇಘ
ಮೇಘ ಬಂತು ಮೇಘ
ಎಲ್ಲೋ ಮಳೆಯಾಗಿದೆಯಂದು...
ಚಿತ್ರ: ಮನಸಾರೆ
ಸಾಹಿತ್ಯ: ಜಯಂತ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ
ಎಲ್ಲೋ ಮಳೆಯಾಗಿದೆಯಂದು ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆಯಂದು ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೆ
ನಿನ್ನ ನೋಡಿದ ಮೇಲೆಯು ಪ್ರೀತಿಯಲಿ ಬೀಳದೆ ಇರಬಹುದೆ
ಕಣ್ಣಲಿ ಮೂಡಿದೆ ಹನಿಗವನ ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ ನೀ ಬಿಡದೆ ನೋಡಿದರೆ
ನಿನ್ನ ಧ್ಯಾನದಿ ನಿನ್ನದೇ ತೋಳಿನಲಿ ಈಗೆಯೇ ಇರಬಹುದೆ
ಈ ಧ್ಯಾನವ ಕಂಡರೆ ದೇವರಿಗು ಕೋಪವು ಬರಬಹುದೆ
ಮುತ್ತಿನಾ ಹನಿಗಳೂ ಸುತ್ತಲೂ ಮುತ್ತಲೂ
ಚಿತ್ರ: ಬಯಸದೇ ಬಂದ ಭಾಗ್ಯ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ
ಮುತ್ತಿನಾ ಹನಿಗಳೂ ಸುತ್ತಲೂ ಮುತ್ತಲೂ
ಮನವು ಅರಳಿ ಹೊಸತನ ತರುತಿದೆ
ನನ್ನಲ್ಲಿ ನಿನ್ನಲ್ಲಿ... ಹೋ...
ನನ್ನಲ್ಲೀ ನಿನ್ನಲ್ಲೀ...
ಮುಗಿಲಿನಾ ಆಟಕೇ ಮಿಂಚಿನಾ ಓಟಕೇ
ಗಗನ ಹೆದರಿ ನಡುಗಿದೆ ಗುಡುಗಿದೆ
ನಿನ್ನಂತೆ ನನ್ನಂತೇ... ಹೋ...
ನಿನ್ನಂತೇ ನನ್ನಂತೇ... ಮುತ್ತಿನಾ ಹನಿಗಳೂ...
ಗಾಳಿಯೂ ಬೀಸಿದೇ ಕಿವಿಯಲೀ ಹಾಡಿದೇ
ಈ ಹೆಣ್ಣು ಚೆನ್ನಾ ಗುಣದಲ್ಲೀ ಚಿನ್ನಾ
ಬಿಡಬೇಡವೆಂದಿದೇ...
ಮಾತಿಗೇ ಸೋಲದೇ ಆತುರಾ ತೋರದೇ
ನಿನ್ನಿಂದ ಇನ್ನು ದೂರಾಗು ಎಂದು
ಬಿರುಗಾಳಿ ನೂಕಿದೇ.. ಏ..
ಬಿರುಗಾಳಿ ನೂಕಿದೇ... ಮುಗಿಲಿನಾ ಆಟಕೇ...
ಮುತ್ತು ಮುತ್ತು ನೀರ ಹನಿಯ...
ಚಿತ್ರ: ನಮ್ಮೂರ ಮಂದಾರ ಹೂವೆ
ಸಂಗೀತ: ಇಳಯರಾಜ
ಸಾಹಿತ್ಯ: ಕೆ. ಕಲ್ಯಾಣ್
ಹಾಡಿರುವವರು: ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ
ಮುತ್ತು ಮುತ್ತು ನೀರ ಹನಿಯ ತಾಂತನನಂ
ಉಲ್ಲಾಸದ ಮೇರೆ ಮೀರಿ ಧೀಂತನಕಧೀಂ
ಆಹಾ ಇಂತ ಸ್ಪಂದನಕಿಲ್ಲಿ ಮೂಲ ಋತುಮಾನ
ಓಹೋ ಇದೇನಿಂಥ ಹೊಸಥರ ಚೈತ್ರ ಋತುಗಾನ
ಮೈ ಮನವೇ ಋತು ಋತುಗಳ ಚೇತನ
ಋತುಗಳ ಆ ಬಂಡಿಯ ಮೇಲೆ ಈ ಬಾಳ ಪಯಣವಿದೆ
ಬಾಳಿನ ಈ ಪಯಣಗಳನ್ನು ಪ್ರೀತಿಯೆ ನಡೆಸುತಿದೆ
ಮಿನು ಮಿನುಗೋ ಮಿಂಚುಗಳಂತೆ ಬಾಳಲ್ಲಿ ತಿರುವು ಇದೆ
ಒಂದೊಂದು ತಿರುವುಗಳಲ್ಲೂ ಶೃಂಗಾರ ಸರಸವಿದೆ
ಆಹಾ ಎಲ್ಲಾ ಮನಸೂ ಆಹ್ಲಾದಮಯವಿಲ್ಲಿ
ಓಹೋ ಎಲ್ಲಾ ಹೃದಯ ತುಂಬೋ ಈ ಸ್ನೇಹ ಜೊತೆಯಲ್ಲಿ
ಇಲ್ಲಿ ತುಟಿಪಿಟಿ ಕೆನ್ನೆಗೆ ಚಟಪಟ ಪುಟಿಯುವ ತುಂತುರು ಸಡಗರದಲ್ಲಿ
ಮುಂಗಾರು ಮಳೆಯೇ...
ಚಿತ್ರ: ಮುಂಗಾರು ಮಳೆಯೇ
ಸಂಗೀತ: ಮನೋಮೂರ್ತಿ
ಹಾಡಿದವರು: ಸೋನು ನಿಗಮ್
ಸಾಹಿತ್ಯ: ಯೋಗರಾಜ್ ಭಟ್
ಮುಂಗಾರು ಮಳೆಯೇ...
ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ...
ಧರೆಯ ಕೊರಳ ಪ್ರೇಮದ ಮಾಲೆ...
ಸುರಿವ ಒಲುಮೆಯ ಜಡಿ ಮಳೆಗೆ... ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ... ಯಾವ ಹನಿಯು ಮುತ್ತಾಗುವದೊ...
ಒಲವು ಎಲ್ಲಿ ಕುಡಿ ಒಡೆಯುವುದೊ... ತಿಳಿಯದಾಗಿದೆ
ಮುಂಗಾರು ಮಳೆಯೇ...ಏನು ನಿನ್ನ ಹನಿಗಳ ಲೀಲೆ॥
ಬುವಿ ಕೆನ್ನೆ ತುಂಬ... ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ... ಅವಳು ಬಂದ ಹೆಜ್ಜೆಯ ಗುರುತು...
ಹೆಜ್ಜೆ ಗೆಜ್ಜೆಯ ಸವಿ ಸದ್ದು... ಪ್ರೇಮನಾದವೊ
ಎಳೆ ಮುಗಿಲಿನಲ್ಲಿ... ರಂಗು ಚೆಲ್ಲಿ ನಿಂತಳು ಅವಳು...
ಬರೆದು ಹೆಸರ ಕಾಮನ ಬಿಲ್ಲು... ಏನು ಮೋಡಿಯೊ
ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ॥
-ಹರಿ
harikannadaprabha@gmail.com