ಸುಡುವ ಹನಿಗಳು
-1-
ಪರಮ ಹಿಂಸೆ.
ಕವಿತೆಯೊಂದು ತನ್ನನ್ನು ಬರೆಸಿಕೊಳ್ಳುತ್ತಿದೆ
ನನ್ನ ಎದೆಯ ರೋಮ ಸುಟ್ಟು
ಪತಂಗ ಸುಟ್ಟ ವಾಸನೆ
-2-
ಜಗದ ಬೆಂಕಿಯನ್ನು ಪ್ರಶ್ನಿಸಿದೆ:
ಪ್ರಶ್ನೆಯ ಕಡೆಗಿರುವ ಚಿಹ್ನೆಯೊಳಗೆ
ನನ್ನ ಕತ್ತು
ಇನ್ನೂ ಕೊಸರಾಡುತ್ತಿದೆ
-3-
ಸುಡಬಹುದು ಎಲ್ಲವನ್ನು
ಅವ್ವನ ಕಳ್ಳುಬಳ್ಳಿ ಮಾತ್ರ
ಪ್ರೀತಿಯ ಕಡಲಲ್ಲಿ
-4-
ಬೆಂಕಿಯನ್ನೂ ಸುಡಬಹುದು
ಕೊಲ್ಲಲಾಗದು
ಎಲ್ಲ ತೀರಿಕೊಂಡರೂ
ಬೆಂಕಿ ಮಾತ್ರ ಸುಡುತ್ತಾ ಬದುಕಿಕೊಂಡಿದೆ
-ಕಾಜೂರು ಸತೀಶ್
9916119338