ಒಂದೇಟು
= ಕೋರ್ಟಿನ ಕೇಸಿನಲ್ಲಿ ನಿಮ್ಮ ಕೇಸು ಗೆಲ್ಲಲೇಬೇಕೆಂದರೆ ಮಹಿಳಾ ವಕೀಲರನ್ನು ಹಿಡಿಯಿರಿ.
= ಯಾಕೆ ಮಹಿಳೆಯರು ದೀರ್ಘ ವರ್ಷ ಬದುಕುತ್ತಾರೆಂದರೆ, ಅವರೆಂದೂ ಮಹಿಳೆಯರೊಂದಿಗೆ ಬದುಕಿರುವುದಿಲ್ಲ!
= ಮಿಶ್ರ ಟೆನಿಸ್ ಪಂದ್ಯ ಇದ್ದ ಹಾಗೆ ಮಿಶ್ರ ಬಾಕ್ಸಿಂಗ್ ಪಂದ್ಯ ಆಡಿಸಲು ಇವತ್ತಿಗೂ ಪುರುಷರ ವಿರೋಧವಿದೆ.
= ಡೈವೋರ್ಸ್ಗೆ ಅಪ್ಲಿಕೇಶನ್ ಹಾಕಲು ಮೊದಲು ಏನು ಮಾಡಬೇಕೆಂದರೆ, ಮದುವೆ.
= ಮಹಿಳೆಯರನ್ನು ಅಧ್ಯಯನಿಸಿ ಸೋತವರು ಇನ್ಕಂ ಟ್ಯಾಕ್ಸ್ ಇಲಾಖೆಗೆ ಸೇರುತ್ತಾರೆ.
ಜೋಕ್ಸ್ಪಿಯರ್ ಹೃದಯದ ಬಡಿತ!
ಅವಳು ಸತ್ತಿದ್ದಳು. ಸೀದಾ ಸ್ವರ್ಗಕ್ಕೆ ಹೋದಳು. ಅವಳನ್ನು ನೋಡಿದ ಚಿತ್ರಗುಪ್ತನಿಗೆ ಶಾಕ್! ಏಕೆಂದರೆ, ಹುಡುಗಿಯ ಹೃದಯ ಇನ್ನೂ ಬಡಿದುಕೊಳ್ಳುತ್ತಿತ್ತು.
ಚಿತ್ರಗುಪ್ತ: ಅರೆ! ನಿನ್ನ ಹೃದಯ ಇನ್ನೂ ಬಡಿದುಕೊಳ್ಳುತ್ತಿದೆ. ನೀನಿನ್ನೂ ಸತ್ತಿಲ್ಲವೇ?
ಹುಡುಗಿ: ಇಲ್ಲಾ, ಸತ್ತಿಲ್ಲ. ಈ ಹೃದಯ ನಾನು ಪ್ರೀತಿಸಿದ ಹುಡುಗನಿಗಾಗಿ ಬಡಿದುಕೊಳ್ಳುತ್ತಿದೆ.
ತಡಮಾಡಲಿಲ್ಲ. ಚಿತ್ರಗುಪ್ತ ಅವಳ ಮೇಲೆ 'ಓವರ್ ಆ್ಯಕ್ಟಿಂಗ್' ಆರೋಪ ಹೊರಿಸಿ, ನರಕಕ್ಕೆ ಕಳುಹಿಸಿದ!
=
ಬಾಸ್: ನೀನು ಇಷ್ಟು ಗಿಡ್ಡದ ಸ್ಕರ್ಟ್ ಹಾಕ್ಕೊಂಡ್ ಯಾಕೆ ಆಫೀಸಿಗೆ ಬರೋದು?
ಹುಡುಗಿ: ನೀವು ಎಷ್ಟು ಸಂಬಳ ಕೊಡ್ತೀರೋ, ಅದರ ತಕ್ಕನಾಗಿ ನಾನು ಡ್ರೆಸ್ ಹಾಕ್ಕೊಂಡ್ ಬರ್ತೀನಿ.
ಬಾಸ್: ಮುಂದಿನ ತಿಂಗಳಿಂದ ನಿನಗೆ ಸಂಬಳ ಕೊಡೋದಿಲ್ಲ.
=
1ನೇ ಹುಚ್ಚ: ನೀನು ಈ ಗಾಡೀಲಿ ಹೋದ್ರೆ ನಿನ್ನ ಪೊಲೀಸ್ನೋರು ಹಿಡ್ಕೋತ್ತಾರೆ.
2ನೇ ಹುಚ್ಚ: ಯಾಕೆ?
1ನೇ ಹುಚ್ಚ: ಯಾವತ್ತೂ ಗಾಡಿ ಓಡ್ಸೋವಾಗ ಹೆಲ್ಮೆಟ್ ಹಾಕ್ಕೋಬೇಕು.
2ನೇ ಹುಚ್ಚ: ಮಗನೆ, ಕೆಳಗೆ ನೋಡು. ಇದು ಫೋರ್ ವ್ಹೀಲರ್. (ವ್ಹೀಲ್ಚೇರ್!)
=
ಮರಿಕೋಲ್ಯ ಅಪ್ಪನ ಎದುರೇ ಸಿಗರೇಟು ಸೇದ್ತಿದ್ದ.
ಕೋಲ್ಯ: ಅಪ್ಪನ ಎದುರೇ ಸಿಗರೇಟು ಸೇದ್ತೀಯಲ್ಲ, ನಿನ್ಗೆಷ್ಟು ಧೈರ್ಯ?
ಮರಿಕೋಲ್ಯ: ಅಪ್ಪ ಏನು, ಪೆಟ್ರೋಲ್ ಬಂಕಾ?
=
ಕೋಲ್ಯ ಸರ ಸರ ಅಂತ ಮರ ಹತ್ತಿದ. ಅಲ್ಲೊಂದು ಮಂಗ ಇತ್ತು.
ಮಂಗ: ಯಾಕೆ ನೀನು ಮರ ಏರಿದೆ?
ಕೋಲ್ಯ: ಸೇಬು ತಿನ್ನಲು.
ಮಂಗ: ಇದು ಮಾವಿನಮರವಲ್ಲವೇ?
ಕೋಲ್ಯ: ಹೌದು, ಇಲ್ಲಾ ಜೇಬಲ್ಲಿ ಸೇಬು ಹಿಡ್ಕೊಂಡೇ ಬಂದಿದ್ದೀನಿ.
ನಿಶ್ಶಬ್ದಕೋಶ
ಮಂಚ: ಪ್ರಸ್ತಭೂಮಿ.
ವ್ಯಾಯಾಮ: ನಿತ್ಯ ಶಾಪಿಂಗ್ ಹೋಗಿ ಮಾಲ್ಗಳ ಮೆಟ್ಟಿಲುಗಳನ್ನು ಏರಿ ಇಳಿಯುವುದು.
= ದುಃಖ: ಪ್ರೀತಿಯ ಭವಿಷ್ಯತ್ ಸ್ವರೂಪ.
= ಸಿದ್ಧಾಂತ: ಅಧಿಕಾರಕ್ಕೆ ಬಂದ ನಂತರ ಮರೆತುಹೋಗುವ ಪದ.
= ಸಮುದ್ರ: ಬಹುದೊಡ್ಡ ಮೀನಿನ ಬುಟ್ಟಿ.
ಹರಿದಕೋಟು
ಕ್ರಿಕೆಟ್ ಎಂದರೆ ಬೌಲರ್ ಆಟಗಾರರ ಕೈಯಲ್ಲಿ ಚೆಂಡಿರುತ್ತದೆ ಅಂದುಕೊಂಡಿದ್ದೆ. ಬುಕ್ಕಿಗಳ ಕೈಯಲ್ಲಿ ಇರುತ್ತದೆ ಎಂದು ಮೊನ್ನೆ ತಿಳಿಯಿತು.
- ಸಿದ್ಧಾರ್ಥ್ ನಾರಾಯಣ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.