ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಹಿಮಪಾತ

ಎದೆತೆರೆದು ಓದು
Lingaraj Badiger
Updated On : 15 Jun 2013, 4:14 am

'ಹಿಮಪಾತ ಎಚ್ಚರಿಕೆ ನೀಡದೆ ಮರಗಳಾಚೆಯಿಂದ ನುಗ್ಗಿಬಂತು. ಕೊನೆ ಗಳಿಗೆಯಲ್ಲಿ ಕಂಡದ್ದು ಎರಡು ಮಹಡಿಯೆತ್ತರದ ಹಿಮದ ಗೋಡೆ. ಕೇಳಿದ್ದು 'ವ್ಹೂಶ್‌' ಶಬ್ದ ಮತ್ತು ಕ್ರಿಸ್ ರುಡಾಲ್ಫ್‌ನ ಆಕ್ರಂದನ: 'ಅವಲಾಂಚೆ, ಎಲೈಸ್!'

16 ಸ್ಕೀಯರುಗಳಿಗೆ ತಕ್ಷಣ ಅರ್ಥವಾಗಿದ್ದು- ಮೃದುವಾಗಿ ತಾಜಾ ಇದ್ದ ಹಿಮ ದಿಡೀರನೆ ಶತ್ರುವಾಗಿ ಬದಲಾಗಿತ್ತು. ಮೇಲೆ ಎಲ್ಲೋ, ನೀರ್ಗಲ್ಲಿನ ಬೃಹತ್ ಗುಪ್ಪೆ ಮಿಂಚಿನ ಬಳ್ಳಿಯಾಕಾರದಲ್ಲಿ ಕತ್ತರಿಸಿಕೊಂಡಿತ್ತು. 3 ಅಡಿ ದಪ್ಪದ, 200 ಅಡಿ ಉದ್ದದ ಹಿಮಚಪ್ಪಡಿ ಕಿತ್ತುಬಂದಿತ್ತು. ಉಳಿದ ಕೆಲಸ ಪೂರೈಸಿದ್ದು ಗುರುತ್ವಾಕರ್ಷಣ ಬಲ.
ಪುಡಿಪುಡಿಯಾದ ಹಿಮ ಇಳಿಜಾರಿನಲ್ಲಿ ಹರಿದುಬಂತು. ಕ್ಷಣಗಳಲ್ಲಿ, ಅವಲಾಂಚೆಯ ಗಾತ್ರ ಸಾವಿರಾರು ಕಾರುಗಳಷ್ಟಕ್ಕೆ, ಲಕ್ಷಾಂತರ ಕಿಲೋ ತೂಕಕ್ಕೆ ಹಿಗ್ಗಿತು. ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಧಾವಿಸುತ್ತ ಹಳೆಯ ಮುದಿ ಮರಗಳನ್ನು ಕತ್ತರಿಸಿ ಹಾಕಿತು.
ಸಮುದ್ರವು ಹಡಗಿನ ಅಂಚುಗಳಲ್ಲಿ ಮೇಲೇರಿ ಮುಕ್ಕುವಂತೆ ಹಿಮವು ಮರಗಳ ಮತ್ತು ಬಂಡೆಗಳ ಸುತ್ತಮುತ್ತ ಆವರಿಸಿತು. ಎಲ್ಲೋ ಒಳಗಡೆ, ಅದು ಮನುಷ್ಯರನ್ನೂ ಕಬಳಿಸಿತ್ತು. ಎಷ್ಟು ಮಂದಿ? ಯಾರಿಗೂ ಗೊತ್ತಿಲ್ಲ'
ಶ್ರೇಷ್ಠ ಪತ್ರಿಕೋದ್ಯಮಕ್ಕಾಗಿ ನೀಡಲಾಗುವ ಪುಲಿಟ್ಝರ್ ಪ್ರಶಸ್ತಿಯನ್ನು ಈ ವರ್ಷ ಗಳಿಸಿದವರಲ್ಲಿ ಜಾನ್ ಬ್ರಾಂಚ್ ಒಬ್ಬ. ಈತ ನ್ಯೂಯಾರ್ಕ್ ಟೈಮ್ಸ್‌ನ ಉದ್ಯೋಗಿ. ಅಮೆರಿಕದ ಟನೆಲ್ ಕ್ರೀಕ್‌ನಲ್ಲಿ ಸಂಭವಿಸಿದ ಹಿಮಪಾತದ ನುಡಿಚಿತ್ರ 'ದಿ ಸ್ನೋ ಫಾಲ್‌'ಗಾಗಿ ಪ್ರಶಸ್ತಿ ಪಡೆದ. ಅದರ ಮೊದಲ ಸಾಲುಗಳಿಲ್ಲಿವೆ. ಪೂರ್ಣ ಓದಿಗೆ: http://www.nytimes.com/projects/2012/snow-fall/#/?part=tunnel-creek.

ಎದೆತೆರೆದು ಓದು
ಪುಸ್ತಕ ಓದುತ್ತಿರುವ ಈ ಲಲನೆಯರನ್ನು ನೋಡುವುದೇ ಒಂದು ಹಿತ. ಅದ್ಯಾಕೆ ಎಂದಿರಾ? ಓದು ಬಿಡುಗಡೆಯ ದಾರಿ ಎಂಬ ಮಾತಿನಲ್ಲಿ ಇವರಿಗೆ ದೃಢವಾದ ನಂಬಿಕೆ. ಮೊದಲ ಬಿಡುಗಡೆ ಸಿಕ್ಕಿದ್ದು ಇವರ ವಕ್ಷೋನ್ನತಿಗೆ. ಅದಕ್ಕಾಗಿಯೇ ಇವರದು ಟಾಪ್‌ಲೆಸ್ ಬುಕ್ ಕ್ಲಬ್. ಸಾರ್ವಜನಿಕವಾಗಿ, ಮೇಲುದವಿಲ್ಲದೆ ಓದುತ್ತಾ ಕ್ರಾಂತಿ ಮಾಡುವುದು ಇವರ ಅಜೆಂಡಾ.
ಈ ಬುಕ್ ಕ್ಲಬ್ ನ್ಯೂಯಾರ್ಕ್‌ನಲ್ಲಿದೆ. ಸೆಂಟ್ರಲ್ ಪಾರ್ಕ್, ಹೋಟೆಲ್ ರೂಫ್‌ಟಾಪ್, ನದಿತೀರ, ಬೀಚು, ಮ್ಯೂಸಿಯಂಗಳು ಇವರ ಕಾರ್ಯಕ್ಷೇತ್ರ. ಇವರ ಸಂಘದ ಸದಸ್ಯರ ಸಂಖ್ಯೆ ದಿನ ದಿನ ಏರುತ್ತಿದೆ. ಪುರುಷನೊಬ್ಬ ಸಾರ್ವಜನಿಕವಾಗಿ ತನ್ನ ಎದೆ ತೆರೆದು ತೋರಿಸಬಲ್ಲನಾದರೆ, ಮಹಿಳೆ ಯಾಕೆ ತೋರಿಸಬಾರದು ಎನ್ನುವುದಿವರ ಪ್ರಶ್ನೆ. ಓದಿನ ಜತೆಗೆ ತಮಾಷೆ, ಹರಟೆ ಎಲ್ಲವೂ ಇದ್ದದ್ದೇ.
ಇರಲಿ, ಇವರು ಓದಿನಲ್ಲಿ ಮಜಾ ಪಡೆಯಲಿ, ನಾವೂ ಪಡೆಯೋಣ.

ಕತೆ ಮುಗಿವವರೆಗೆ
'ಸಾರ್, ಒಳ್ಳೆ ಕತೆ ಬರೆಯೋದು ಹೇಗೆ?' ಖ್ಯಾತ ಕತೆಗಾರನನ್ನು ಅವರ ಶಿಷ್ಯ ಕೇಳಿದ.
'ಅಂದ್ರೆ?' ಕತೆಗಾರರಿಗೆ ಟೋಟಲ್ ಕನ್‌ಫ್ಯೂಶನ್.

'ಅಂದ್ರೆ ಕೂತುಕೊಂಡೋ, ಮಲಗಿಕೊಂಡೋ, ಓಡಾಡುತ್ತಲೋ? ಮಲಗಿದರೆ ಭಾವನೆಗಳು ಪ್ರವಾಹದಂತೆ ಹರಿದು ಬರುತ್ತಂತಲ್ಲ ಸಾರ್?'
'ಓ, ಹಂಗೆ! ಅದಕ್ಕಿಂತಲೂ ಉತ್ತಮವಾದ ಶೈಲಿ ಇದೆ ಕಣಪ್ಪ. ಅದಕ್ಕೆ ಫಿಟ್ಜೆರಾಲ್ಡ್ ಶೈಲಿ ಅಂತಾರೆ'
'ಏನ್ಸಾರ್ ಹಾಗಂದ್ರೆ?'
'ಬರೆಯುವ ಮೇಜಿನ ಮೇಲೆ ಒಂದಾರು ಪ್ಯಾಕ್ ಸಿಗರೇಟ್, ಮೂರು ಬಿಯರ್ ಬಾಟಲಿ ಇಟ್ಟುಕೊಂಡು ಕೂರಬೇಕು. ಬಿಯರ್ ಸೇವಿಸುತ್ತಾ, ದಂ ಹೊಡೆಯುತ್ತಾ ಮಧ್ಯೆ ಮಧ್ಯೆ ಕತೆ ಬರೆಯಬೇಕು'
'ಎಷ್ಟು ಹೊತ್ತು ಬರೀಬೇಕು ಸಾರ್?'
'ನಿನ್ನ ಕತೆ ಮುಗಿಯುವವರೆಗೆ'.

-ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments