ಹೊಸ ಸರ್ಕಾರದ ಹೊಸ ಯೋಜನೆಗಳು ಯಾವುವು ಸಾರ್ ?
ಪಿ.ಜೆ.ರಾಘವೇಂದ್ರ, ಮೈಸೂರು
'ಮುಂಡಾಮೋಚ್ತು' ಅಂತ ಸಿನಿಮಾ ನಿರ್ಮಿಸ್ತಿದಾರಂತೆ ನಿಜಾನಾ ?
- ಅದನ್ನು ಬ್ರಹ್ಮಾಂಡದ ಎಲ್ಲಾ ಕಡೆ ಬಿಡುಗಡೆ ಮಾಡ್ತಾರಂತೆ !
ರವೀಂದ್ರ ಶಿ. ಯಡಹಳ್ಳಿ, ಬೀಳಗಿ
ಹೆಂಗಳೆಯರ ಕಣ್ಣೀರಿಗೂ, ಮೊಸಳೆಯ ಕಣ್ಣೀರಿಗೂ ವ್ಯತ್ಯಾಸವೇನು ?
- ಹೆಂಗಳೆಯರ ಕಣ್ಣೀರಿಗೆ ಗಂಡಸರು ಕರಗುತ್ತಾರೆ, ಮೊಸಳೆ ಕಣ್ಣೀರಿಗೆ ಮತದಾರರು ಕರಗುತ್ತಾರೆ !
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
ಲೆಕ್ಕವನ್ನು ಬಿಟ್ಟವನು ಲೋಕವನ್ನು ಬಿಡಲು ಸಾಧ್ಯವೇ ?
- ಕೆಲವರು ಈ ಲೋಕವನ್ನೇ ಲೆಕ್ಕಕ್ಕೆ ಇಟ್ಕೊಂಡಿರೊಲ್ಲ !
ಕೆ.ಎಸ್. ನಾರಾಯಣ ರೆಡ್ಡಿ, ಕೆ.ಜಿ.ಎಫ್
ಮುತ್ತಿನಂಥ ಮಡದಿ ಇರುವಾಗ ಪರನಾರಿಯರ ಮೇಲೇಕೆ ಮೋಹ ?
- ಕೆಲವರಿಗೆ ಮುತ್ತಿಗಿಂಥಲೂ ಚಿನ್ನ, ವಜ್ರ ವೈಡೂರ್ಯಗಳ ಮೇಲೆಯೇ ಮೋಹ !
ಪಾಪು, ಸಂತೇಮರಹಳ್ಳಿ
ಗಂಡ ಬಿಟ್ಟವಳು ಅಂತಾರೆ, ಹೆಂಡತಿ ಬಿಟ್ಟವನು ಅಂತ ಕರೆಯೋಲ್ಲ ಏಕೆ ?
- ಅವನ ನಡವಳಿಕೆ ನೋಡಿದ್ರೇ ಗೊತ್ತಾಗುತ್ತೆ !
ಹೆಡತಲೆ ಮಾದನಾಯಕ, ಮೂಡಲ ಪಾಳ್ಯ
ಹೊಸ ಸರ್ಕಾರದ ಹೊಸ ಯೋಜನೆಗಳು ಯಾವುವು ಸಾರ್ ?
- ಅಗ್ಗದ ಮದ್ಯ, ಅಗ್ಗದ ಅಕ್ಕಿ, ಅಗ್ಗದ ಹಾಸಿಗೆ, ಅಗ್ಗದ ರಗ್ಗು !
ಹರಳಪಳ್ಳಿ ಪುಟ್ಟರಾಜು, ಪಾಂಡವಪುರ
ಮುಪ್ಪಿನಲ್ಲಿ ಯೌವನವನ್ನು ಮರಳಿ ಪಡೆಯುವಂತಿದ್ದರೆ ?
- ಅಜ್ಜ - ಮೊಮ್ಮೊಗನಿಗೇ ಪೈಪೋಟಿ ಶುರುವಾಗ್ತಿತ್ತು !