ನಗರ ಪರಿಸರ
ಇದುವೆ ನಗರ ಇಲ್ಲಿ ಎಂಥ
ಸದ್ದು-ಗದ್ದಲ?
ನನ್ನ ಕಿವಿಯೆ ಕಿವುಡು ಆಗಿ
ಹೋಯ್ತು! ಎಲ ಎಲ..!
ಎಲ್ಲಿ ನೋಡೆ ಅಲ್ಲಿ ಭಾರಿ
ಭಾರೀ ಕಟ್ಟಡ,
ಯಾರ ಮನಸಿನಲ್ಲಿ ನೋಡು
ಏನೋ ಒತ್ತಡ!
ಯಾರ ಅರಿವೆ ನೋಡು ಥಳಕು
ಬಳಕು ಸುಂದರ,
ವಿಷದ ಗಾಳಿ-ನೀರು ಕುಡಿದು
ಒಳಗೆ ಕಂದರ!
ನಡೆ ಹಳ್ಳಿಕಡೆ, ಅಲ್ಲಿ
ಬಾಳು ಬಂಧುರ,
ಒಳ್ಳೇ ಗಾಳಿ, ನೀರು, ನೋಟ
ಎಲ್ಲಾ ಸುಂದರ.
-ಗುರುರಾಜ ಬೆಣಕಲ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.