ಸಿದ್ರಾಮಯ್ಯನವರು 'ನಿದ್ರಾ'ಮಯ್ಯನಾಗಲು ಕಾರಣವೇನು?
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
ಬಾರ್ ಮಾಲೀಕರ ಜೊತೆ ಪೊಲೀಸರ ಅಡ್ಜಸ್ಟ್ಮೆಂಟಂತೆ?
- ಹೆಂಡದ ದೊರೆಗಳೊಂದಿಗೆ ಸರ್ಕಾರವೇ 'ಅಡ್ಜಸ್ಟ್ಮೆಂಟ್' ಮಾಡ್ಕೊಂಡಿಲ್ವೇ!
ಕೆ.ಎಂ. ಲಿಂಗರಾಜು, ನಂಜನಗೂಡು
ಕಾವೇರಿ ತಮಿಳುನಾಡಿನಿಂದ ಕರುನಾಡಿಗೆ ಹರಿದು ಬರುವಂತಿದ್ದರೇ?
-ಕರುನಾಡಿನವರು ಕಣ್ಣೀರಲ್ಲೇ ಕೈ-ಕಾಲು ತೊಳ್ಕೋತಿದ್ರು!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ರಾಖಿ ಸಾವಂತ್, ಮಲ್ಲಿಕಾ ಶರಾವತ್ರನ್ನು 'ಬಿಗ್ಬಾಸ್' ಮನೆಯೊಳಗೆ ಕಳಿಸಿದರೆ ಏನಾಗಬಹುದು?
- ಆಗ ಕಾವಿಗೂ 'ಕಾವು' ಬರ್ತಿತ್ತು!
ಪಿ.ಜಿ. ರಾಘವೇಂದ್ರ, ಮೈಸೂರು.
ಟೆಲಿಗ್ರಾಂಗೂ ಬಿಜೆಪಿಗೂ ಏನು ಸಂಬಂಧ?
- ಮೋದಿ ಮೊಬೈಲ್ ಬಂದ ಮೇಲೆ ಆಡ್ವಾಣಿ ಟೆಲಿಗ್ರಾಂ ಆಗಿದ್ದಾರೆ!
ವಿ. ಹೇಮಂತಕುಮಾರ್, ಬೆಂಗಳೂರು
ಕುದುರೆ ಬಾಲದ ಮೇಲೆ ಕಟ್ಟುವ ಬೆಟ್ಟಿಂಗ್ಗೂ, ಕ್ರಿಕೆಟ್ ಬಾಲ್ ಮೇಲೆ ಕಟ್ಟುವ ಬೆಟ್ಟಿಂಗ್ಗೂ ವ್ಯತ್ಯಾಸವೇನು?
- ಅದು ರೇಸು, ಇಲ್ಲಿ ಕೇಸು!
ರವಿಕುಮಾರ್ ಜಿ.ಬಿ. ಬೆಂಗಳೂರು
ಗುಟ್ಕಾ ನಿಷೇಧ ಮಾಡಿದ ಸರ್ಕಾರ ಮದ್ಯಪಾನ ಮತ್ತು ಧೂಮಪಾನ ನಿಷೇಧಕ್ಕೆ ಹಿಂಜರಿದದ್ದು ಏಕೆ?
-ಜನ ಮೂರೂ ಬಿಟ್ರೆ ಸರ್ಕಾರಕ್ಕೆ ಆದಾಯದ ಆಸೆ ಬಿಡಬೇಕಾಗುತ್ತೆ!
ಪ್ರಭಾವತಿ ತಿಗರಿಮಠ, ಅಳವಂಡಿ
ಸಿದ್ರಾಮಯ್ಯನವರು 'ನಿದ್ರಾ'ಮಯ್ಯನಾಗಲು ಕಾರಣವೇನು?
-ಅಗ್ಗದ ಅಕ್ಕಿ, ಮದ್ಯದ ಚಿಂತೆ!
-ಘಾಟಿ