ಹುಡುಗಿಯ ಕೊಲೆ
ಫಂಟಾ: ಒಂದು ಹುಡುಗಿಯನ್ನು ಕೊಲ್ಲುವುದು ಹೇಗೆ?
ಕೋಲ್ಯ: ತುಂಬಾ ಸಿಂಪಲ್. ಅವಳಿಗೆ ಬ್ಯೂಟಿಫುಲ್ ಡ್ರೆಸ್ಸು, ಕಾಸ್ಟ್ಲಿ ಕಾಸ್ಮೆಟಿಕ್ಸ್, ನೆಕ್ಲೇಸ್ಗಳನ್ನು ಕೊಟ್ಟು ಕನ್ನಡಿಯಿಲ್ಲದ ಒಂದು ರೂಮಿನಲ್ಲಿ ಒಂದು ದಿನ ಕೂಡಿ ಹಾಕಿದರೆ ಸಾಕು.
ಭಾರತೀಯ, ಅಮೆರಿಕನ್ಗೆ ರಕ್ತದಾನ ಮಾಡಿದ. ಅಮೆರಿಕನ್ ಅದೇ ಖುಷಿಯಲ್ಲಿ ಭಾರತೀಯನಿಗೆ ಮರ್ಸಿಡಿಸ್ ಬೆನ್ಝ್ ಕಾರನ್ನು ಗಿಫ್ಟಾಗಿ ಕೊಟ್ಟ.
6 ತಿಂಗಳ ನಂತರ...
ಭಾರತೀಯ ಅದೇ ಅಮೆರಿಕನ್ಗೆ ಮತ್ತೆ ರಕ್ತ ಕೊಟ್ಟ. ಅಮೆರಿಕನ್ ಅದಕ್ಕೆ ಪ್ರತಿಯಾಗಿ ಮಹಾಲ್ಯಾಕ್ಟೋ ಚಾಕೊಲೇಟ್ ಕೊಟ್ಟ.
ಯಾಕೆ ಗೊತ್ತಾ?
ಅಮೆರಿಕನ್ ಮೈಯಲ್ಲಿ ಹರಿಯುತ್ತಿದ್ದಿದ್ದು ಭಾರತೀಯನ ರಕ್ತ!
ಹುಡುಗಿ: ನೀ ನನ್ನ ಪ್ರೀತಿಸ್ತೀಯಾ?
ಹುಡುಗ, 'ಒಂದ್ ನಿಮಿಷ' ಅಂತ ಹೇಳಿ ಓಡತೊಡಗಿದ.
ಹುಡುಗಿ: ಯಾಕೆ ಓಡ್ತಿದ್ದೀಯ?
ಹುಡುಗ: ಫೇಸ್ಬುಕ್ನಲ್ಲಿ 'ರಿಲೇಷನ್ಶಿಪ್ ಸ್ಟೇಟಸ್' ಅಪ್ಡೇಟ್ ಮಾಡಿ ಬರ್ತೀನಿ.
ಕಂಪ್ಯೂಟರ್ ಫುಡ್
ಟೀಚರ್: ಕಂಪ್ಯೂಟರ್ ಏನನ್ನು ತಿನ್ನಲು ಇಷ್ಟಪಡುತ್ತೆ?
ಮರಿಕೋಲ್ಯ: 'ಚಿಪ್ಸ್'!
Shruti ಎಂಬ ಹುಡುಗಿ Shraxis ಹೆಸರು ಚೇಂಜ್ ಮಾಡಿಕೊಂಡಳು. ಯಾವಾಗಿನಿಂದ ಚೇಂಜ್ ಮಾಡಿಕೊಂಡಳೆಂದರೆ, UTI ಬ್ಯಾಂಕ್ AXIS ಬ್ಯಾಂಕ್ ಎಂದು ಬದಲಾದ ಮೇಲೆ!